ಸುಭಾಷಿತ :

Sunday, January 26 , 2020 4:18 AM

ಮಸಾಲೆ ಪದಾರ್ಥಗಳಲ್ಲಿ ಒಂದಾದ ಧನಿಯಾದಿಂದ ಅರೋಗ್ಯ ಲಾಭ


Saturday, July 6th, 2019 11:59 am

ಸ್ಪೆಷಲ್ ಡೆಸ್ಕ್ : ಮಸಾಲೆ ಪದಾರ್ಥಗಳ್ಳಲ್ಲಿ ಒಂದಾದ, ನಾವು ಅನಾದಿ ಕಾಲದಿಂದ ಅಡುಗೆಯಲ್ಲಿ ಬಳಕೆ ಮಾಡಿಕೊಂಡು ಬರುತ್ತಿರುವ ಒಂದು ವಸ್ತು ಎಂದರೆ ಅದು ಧನಿಯಾ. ಇದರಿಂದ ಕಷಾಯ ಮಾಡಿಕೊಂಡು ಸೇವಿಸುತ್ತಾ ಬಂದರೆ ಹಲವಾರು ಸಮಸ್ಯೆಗಳು ನಿವಾರಣೆಯಾಗುತ್ತವೆ.

ಧನಿಯಾ ಕಷಾಯ : ಕೊತ್ತಂಬರಿ ಬೀಜವನ್ನು ಪುಡಿ ಮಾಡಿ ನೀರಿನಲ್ಲಿ ನೆನೆಹಾಕಬೇಕು. ಚೆನ್ನಾಗಿ ಕಿವಿಚಿ ಸೋಸಬೇಕು. ಈ ಕಷಾಯಕ್ಕೆ ಹಾಲು, ಸಕ್ಕರೆ ಬೆರೆಸಿ. ಈಗ ಕಷಾಯ ರೆಡಿ.

ಎದೆ ಉರಿ : ಧನಿಯಾ ಕಷಾಯವನ್ನು ಸೇವಿಸಿದರೆ ಆಗಾಗ ಕಾಡುವ ಎದೆ ನೋವು ಕಡಿಮೆಯಾಗುತ್ತದೆ.

ಬೊಜ್ಜು ನಿವಾರಣೆ : ದೇಹದಲ್ಲಿರುವ ಅನಗತ್ಯ ಬೊಜ್ಜಿನಂಶ ಕಡಿಮೆ ಮಾಡಿ ತೂಕ ಇಳಿಸಲು ಇದು ಸಹಕಾರಿ.

ಮಧುಮೇಹ : ಮಧುಮೇಹವನ್ನು ತಡೆಯಲು ಮತ್ತು ನಿವಾರಿಸಲು ಧನಿಯಾ ಪುಡಿಯು ರಾಮ ಬಾಣ.

ಮೊಡವೆ : ಧನಿಯಾ ಪುಡಿಯನ್ನು ಹರಿಶಿಣ ಪುಡಿಯೊಂದಿಗೆ ಬೆರೆಸಿ ಮೊಡವೆ ಮೇಲೆ ಹಚ್ಚುವುದರಿಂದ ಮಧುಮೇಹವನ್ನು ಸಂಪೂರ್ಣವಾಗಿ ತಡೆಯಬಹುದು.

ಚರ್ಮ ಸಮಸ್ಯೆ : ಚರ್ಮದ ತೊಂದರೆಗಳಾದ ತುರಿಕೆ, ಎಕ್ಸಿಮಾ, ಹುಳಕಡ್ಡಿ, ಕೆಂಪಗಾಗುವುದು, ಉರಿ ಮೊದಲಾದವುಗಳಿಗೆ ಕೊಂಚ ಕೊತ್ತಂಬರಿ ಪುಡಿಯನ್ನು ಉಗುರುಬೆಚ್ಚನೆಯ ನೀರಿನಲ್ಲಿ ನಯವಾದ ಲೇಪನ ತಯಾರಿಸಿ ಹೆಚ್ಚಿಕೊಳ್ಳಿ.

ಕೂದಲಿನ ಅರೋಗ್ಯ : ನಿತ್ಯವೂ ಕೊತ್ತಂಬರಿ ಬೀಜವನ್ನು ಅಡುಗೆಯಲ್ಲಿ ಉಪಯೋಗಿಸುವ ಮೂಲಕ ಕೂದಲ ಬುಡಕ್ಕೆ ಹೆಚ್ಚಿನ ಬಲ ದೊರಕುತ್ತದೆ ಹಾಗೂ ಕೂದಲು ಉದುರುವ ಪ್ರಮಾಣ ಕಡಿಮೆಯಾಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions