ಸುಭಾಷಿತ :

Tuesday, September 17 , 2019 7:02 AM

-->

ಕೊರಿಯಾಂಡರ್ -ಲೆಮನ್ ವೆಜ್ ಸೂಪ್


Tuesday, August 20th, 2019 2:34 pm

ಸ್ಪೆಷಲ್ ಡೆಸ್ಕ್ : ಮಳೆಗಾಲದಲ್ಲಿ ಕಾಡುವ ಶೀತ, ಕೆಮ್ಮು ನಿವಾರಣೆ ಮಾಡಲು ಈ ಸೂಪ್ ಬೆಸ್ಟ್. ಅದು ಯಾವುದೆಂದರೆ ಕೊರಿಯಾಂಡರ್ -ಲೇಮನ್ ವೆಜ್ ಸೂಪ್. ಇದರ ಜೊತೆ ಕರಿಮೆಣಸಿನ ಪುಡಿ ಬೆರೆತಾಗ ಮಳೆಗಾಲದ ತಂಪಿಗೆ ದೇಹ ಬೆಚ್ಚಗೆಯಾಗುತ್ತದೆ. ಆರೋಗ್ಯಯುತವಾದ ಈ ಟೇಸ್ಟಿ ಸೂಪ್ ಮಾಡೋದು ಹೇಗೆ ನೋಡೋಣ..

ಬೇಕಾಗುವ ಸಾಮಗ್ರಿಗಳು : ಕೊತ್ತಂಬರಿ ಸೊಪ್ಪು 1 ಕಟ್ಟು, ಲೆಮೆನ್‌ ಝೆಸ್ಟ್‌, ನಿಂಬೆ ರಸ 2 ಚಮಚ, ನೀರು 5 ಕಪ್‌, ಬೇಬಿ ಕಾರ್ನ್‌, ಬೀನ್ಸ್‌, ಜೋಳ, ಕ್ಯಾರೆಟ್‌, ಕ್ಯಾಬೇಜ್‌ ಎಲ್ಲಾ ಸೇರಿ ಒಂದು ಕಪ್, ಹಸಿಮೆಣಸು 2, 1 ಕಪ್‌ ಈರುಳ್ಳಿ, ಕರಿಮೆಣಸಿನ ಪುಡಿ, ಉಪ್ಪು ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ
ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಕತ್ತರಿಸಿ. ಅದರ ಜೊತೆ ಹಸಿಮೆಣಸು, ಲೆಮೆನ್‌ ಝೆಸ್ಟ್‌ ಮತ್ತು ನಾಲ್ಕು ಗ್ಲಾಸ್‌ ನೀರು ಹಾಕಿ ಚೆನ್ನಾಗಿ ಕುದಿಸಿ.
ಹತ್ತು ನಿಮಿಷದ ನಂತರ ಅದನ್ನು ಸ್ಟೌನಿಂದ ಇಳಿಸಿ ಕೊತ್ತಂಬರಿ ಸೊಪ್ಪನ್ನು ಅದರಿಂದ ತೆಗೆಯಿರಿ. .
ಈಗ ಇನ್ನೊಂದು ಪ್ಯಾನ್‌ ತೆಗೆದುಕೊಂಡು ಅದರಲ್ಲಿ ಒಂದು ಕಪ್‌ ನೀರು ಹಾಕಿ ಕತ್ತರಿಸಿದ ತರಕಾರಿಗಳನ್ನು ಹಾಕಿ ಬೇಯಿಸಿ.
ಈ ತರಕಾರಿಗಳು 2 ನಿಮಿಷದವರೆಗೆ ಬೇಯಲಿ. ಇದಕ್ಕೆ ಈ ಮೊದಲು ಮಾಡಿಟ್ಟ ಕೊತ್ತಂಬರಿ ಸೊಪ್ಪಿನ ನೀರನ್ನು ಸೇರಿಸಿ. ಐದು ನಿಮಿಷ ಕುದಿಸಿ.
ಇದಕ್ಕೆ ಉಪ್ಪು ಮತ್ತು ಕರಿಮೆಣಸಿನ ಪುಡಿ ಬೆರೆಸಿ. ಈಗ ಟೇಸ್ಟಿಯಾದ ಸೂಪ್‌ ಸವಿಯಲು ರೆಡಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions