-->

ಬ್ರೇಕಿಂಗ್ : ತೀವ್ರ ಗದ್ದಲ ಹಿನ್ನಲೆ ನಾಳೆಗೆ ವಿಧಾನಸಭಾ ಕಲಾಪ ಮುಂದೂಡಿಕೆ. ಹೋರಾಟಕ್ಕೆ ಬಿಜೆಪಿ ಸಜ್ಜು


Thursday, July 18th, 2019 6:24 pm

ಬೆಂಗಳೂರು: ತೀವ್ರ ಗದ್ದಲ ಹಿನ್ನಲೆ ನಾಳೆಗೆ ವಿಧಾನಸಭಾ ಕಲಾಪ ಮುಂದೂಡಿಕೆ ಮಾಡಲಾಗಿದೆ.  ಇಂದು ವಿಶ್ವಾಸಮತ ಯಾಚನೆ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳೇ ಕಳೆದ ಶುಕ್ರವಾರ ಸದನದಲ್ಲಿ ತಿಳಿಸಿದ್ದಾರೆ. ಹೀಗಾಗಿ ಕಲಾಪ ಸಲಹಾ ಸಮಿತಿಯಲ್ಲಿ ಕಾಲಾವಕಾಶಕ್ಕೆ ನಿಗದಿಯಾದಂತೆ ಇಂದೇ ನಿರ್ಣಯ ಆಗಲಿ ಅಂತ ವಿರೋಧ ಪಕ್ಷದವರು ಪಟ್ಟುಹಿಡಿದಿದ್ದರು.

 ಈ ನಡುವೆ ಊಟದ ವಿರಾಮದ ಬಳಿಕ ದಿನದ ಅಂತ್ಯದೊಳಗೆ ವಿಶ್ವಾಸಮತ ಸಾಬೀತುಪಡಿಸಿ ಎಂದು ರಾಜ್ಯಪಾಲರು ಸೂಚನೆ ನೀಡಿದ್ದಾರೆ ಎಂದು ವಿಧಾನಸಭಾ ಸ್ಪೀಕರ್‌ ಕೆಆರ್‌ ರಮೇಶ್‌ ಕುಮಾರ್‌ ಸದನದಲ್ಲಿ ಓದಿದರು. ಆದರೆ ಯಾವುದೇ ಒತ್ತಡಕ್ಕೂ ನಾನು ಮಣಿಯುವುದಿಲ್ಲ ಎಂದು ಸ್ಪೀಕರ್ ಸ್ಪಷ್ಟಪಡಿಸಿದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions