ನೀವು ತಪ್ಪಾದ ಸಮಯದಲ್ಲಿ ಕಾಫಿ ಕುಡಿಯುತ್ತಿಲ್ಲ ತಾನೇ?


Monday, March 11th, 2019 1:32 pm

ಸ್ಪೆಷಲ್ ಡೆಸ್ಕ್ : ಬೆಳಗ್ಗೆ ಮೂಡ್ ಫ್ರೆಶ್ ಆಗಲು ಕಾಫಿ ಸೇವನೆ ಮಾಡುತ್ತೇವೆ. ಆದರೆ ತಪ್ಪಾದ ಸಮಯದಲ್ಲಿ ಕಾಫಿ ಸೇವನೆ ಮಾಡೋದಿಲ್ಲ ತಾನೇ? ಯಾಕೆಂದರೆ ತಪ್ಪಾದ ಸಮಯದಲ್ಲಿ ಕಾಫಿ ಸೇವನೆ ಮಾಡಿದರೆ ನಿಶಕ್ತಿ ಉಂಟಾಗುತ್ತದೆ, ಅಲ್ಲದೆ ಅಧಿಕ ರಕ್ತದೊತ್ತಡ ಸಮಸ್ಯೆ ಉಂಟು ಮಾಡುತ್ತದೆ.

ಈ ಯಾವುದೇ ಸಮಸ್ಯೆಗಳು ಕಾಡದಿರಲು ಸರಿಯಾದ ಸಮಯದಲ್ಲಿ ಕಾಫ್ ಕುಡಿಯುವುದು ಮುಖ್ಯವಾಗಿದೆ…

  1. ಮುಂಜಾನೆ ಕಾಫಿ ಸೇವನೆ ಮಾಡಿದರೆ ಅಂದರೆ ೮-೯ ಗಂಟೆಯ ಸಮಯದಲ್ಲಿ ಕಾಫಿ ಸೇವನೆ ಮಾಡಿದರೆ ಸ್ಟ್ರೆಸ್ ಹಾರ್ಮೋನ್ ಕಾರ್ಟಿಸೋಲ್ ಹೆಚ್ಚಾಗಿ ಒತ್ತಡ ಹೆಚ್ಚಾಗುತ್ತದೆ.
  2. ಕಾಫಿ ಕುಡಿಯುವ ಅಭ್ಯಾಸವಿದ್ದರೆ, ಕೆಲವರಿಗೆ ಪದೇ ಪದೇ ಕಾಫ್ ಕುಡಿಯುವ ಬಯಕೆ ಉಂಟಾಗುತ್ತದೆ. ಹೆಚ್ಚು ಕಾಫಿ ಸೇವನೆ ಮಾಡಿದರೆ ಕೆಫೆನ್ ಅಂಶ ಹೆಚ್ಚಾಗಿ ಇದಕ್ಕೆಅಡಿಕ್ಟ್ ಆಗುತ್ತೀರಿ.
  3. ನಿಮಗೆ ೧೦ ರಿಂದ ೧೧. ೩೦ ವರೆಗೆ ಕಾಫೀ ಕುಡಿಯುವ ಹವ್ಯಾಸ ಇದ್ದರೆ ಅದು ಉತ್ತಮ ಹವ್ಯಾಸ. ಈ ಸಮಯದಲ್ಲಿ ಕಾರ್ಟಿಸೋಲ್ ಹಾರ್ಮೋನ್ ಕಡಿಮೆ ಇರುತ್ತದೆ. ಇದು ಆರೋಗ್ಯಕ್ಕೆ ಸುರಕ್ಷಿತವೂ ಆಗಿದೆ.
  4. ಇನ್ನು ೧೨ ರಿಂದ ೧ ಗಂಟೆಯ ಸಮಯದಲ್ಲಿ ಕಾಫಿ ಕುಡಿಯುತ್ತಿದ್ದರೆ ಈ ಸಮಯದಲ್ಲಿ ಕಾರ್ಟಿಸೋಲ್ ಹೆಚ್ಚಿರುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು.
  5. ಮಧ್ಯಾಹ್ನ ಒಂದು ಗಂಟೆಯಿಂದ ಸಂಜೆ ಗಂಟೆವರೆಗೆ ನೀವು ಯಾವ ಸಮಯದಲ್ಲೂ ಕಾಫಿ ಸೇವನೆ ಮಾಡಬಹುದು. ಇದರಿಂದ ಯಾವ ಸಮಸ್ಯೆ ಉಂಟಾಗುವುದಿಲ್ಲ.
  6. ಹೆಚ್ಚಿನ ಜನರಿಗೆ ತಿಂಡಿ ತಿನ್ನುವ ಜೊತೆಗೆ ಅಥವಾ ತಿಂಡಿ ತಿಂದ ಬಳಿಕ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಇದರಿಂದ ದೇಹದಲ್ಲಿರುವ ಐರನ್ ಮೇಲೆ ಪರಿಣಾಮ ಬೀರುತ್ತದೆ.
  7. ಆಹಾರ ಸೇವನೆ ಮತ್ತು ಕಾಫಿ ಸೇವನೆ ನಡುವೆ ಕನಿಷ್ಠ ಒಂದು ಗಂಟೆ ಅಂತರ ಇರಲೇಬೇಕು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions