ಸುಭಾಷಿತ :

Thursday, January 23 , 2020 5:58 PM

ಕೆಲಸ ಖಾಯಂ ಮಾಡುವಂತೆ ಸಿಎಂ ಹೆಚ್ಡಿಕೆ ಕಾಲಿಗೆ ಬಿದ್ದ ಸಾರಿಗೆ ನೌಕರರು..!


Wednesday, July 17th, 2019 9:55 pm

ಬೆಂಗಳೂರು : ವಿಶ್ವಾಸ ಮತಯಾಚನೆ ಬಗ್ಗೆ ಸಿಎಂ ಕುಮಾರಸ್ವಾಮಿ ತಲೆಕೆಡಿಸಿಕೊಂಡಿದ್ದರೆ, ಇನ್ನೊಂದೆಡೆ ಕೆಲಸ ಖಾಯಂ ಮಾಡುವಂತೆ ಬಿಎಂಸಿಟಿ ಹಾಗೂ ಕೆಎಸ್ ಆರ್ ಟಿಸಿ ನೌಕರರು ಹಾಗೂ ಖಾಸಗಿ ಶಾಲೆಯನ್ನು ಅನುದಾನಕ್ಕೊಳಪಡಿಸುವಂತೆ ಶಿಕ್ಷಕರು ದುಂಬಾಲು ಬಿದ್ದಿದ್ದಾರೆ.

ಹೌದು, ಗುರುವಾಠ ವಿಶ್ವಾಸ ಮತಯಾಚನೆ ಕುರಿತು ಹಾಗೂ ಇನ್ನಿತರ ರಾಜಕೀಯ ಬೆಳವಣಿಗೆಗಳ ಕುರಿತು ಸಲಹೆ ಪಡೆಯಲು ಬುಧವಾರ ಸಂಜೆ ಪದ್ಮನಾಭ ನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ತೆರಳಿದಗದ ಸಿಎಂಗೆ ನೌಕರರು ಸುತ್ತುವರೆದು ಕೆಲಸವನ್ನು ಖಾಯಂ ಮಾಡುವಂತೆ ಹೇಳಿದರು. ಸಿಎಂ ಕಾಲಿಗೆ ಬಿದ್ದು ನಮ್ಮನ್ನು ಸರ್ಕಾರಿ ನೌಕರರಂತೆ ಪರಿಗಣಿಸಿ ಎಂದು ಮನವಿ ಮಾಡಿದರು.

ಇನ್ನೂ ಶಾಸಗಿ ಶಾಲೆಯ ಶಿಕ್ಷಕರು ಕೂಡ ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಿದ್ದು. ಖಾಸಗಿ ಶಾಲೆಗಳನ್ನು ಅನುದಾನಕ್ಕೊಳಪಡಿಸುವಂತೆ ಬೇಡಿಕೊಂಡರು. ನಡು ರಸ್ತೆಯಲ್ಲಿ ಸಿಎಂ ಕಾಲಿಗೆ ಬಿದ್ದು ಅತ್ತು ಮನವಿ ಸಲ್ಲಿಸಿದರು. ಸಿಎಂ ಹೆಚ್ಚು ಮಾತನಾಡದೇ ನೌಕರರ ಅಹವಾಲು ಸ್ವೀಕರಿಸಿ ಕೆಲಸ ಮಾಡಿಕೊಡುವುದಾಗಿ ಭರವಸೆ ನೀಡಿ ಹೊರಟರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions