ಸುಭಾಷಿತ :

Tuesday, September 17 , 2019 6:57 AM

-->

ನಾಳೆ ಸಿಎಂ ‘ಚಂಡರಕಿ’ಯಲ್ಲಿ ಸಿಎಂ ‘ಗ್ರಾಮವಾಸ್ತವ್ಯ’ : ಇದು ಕುಮಾರಸ್ವಾಮಿಯವರ 2 ದಿನಗಳ ಪಯಣದ ಪುಲ್ ಡೀಟೆಲ್ಸ್.!


Thursday, June 20th, 2019 6:29 pm

ಬೆಂಗಳೂರು : ನಾಳೆ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯ ಯಾದಗಿರಿ ಜಿಲ್ಲೆಯ ಗುರುಮಿಠ್ಕಲ್ ತಾಲ್ಲೂಕಿನ ಚಂಡರಕಿ ಗ್ರಾಮದಿಂದ ವಿನೂತನ ರೀತಿಯಲ್ಲಿ ಆರಂಭವಾಗಲಿದೆ. ಹೀಗಾಗಿ ಅವರ ಪಯಣದ ಸಂಪೂರ್ಣ ಸಿದ್ದತೆ ಈಗಾಗಲೇ ತಯಾರಿಯಾಗಿದ್ದು, ಸಿಎಂ ಗ್ರಾಮವಾಸ್ತವ್ಯಕ್ಕೆ ಬೇಕಾದ ಕೊನೇಯ ಹಂತದ  ಸಿದ್ದತೆಯನ್ನು ಅಧಿಕಾರಿಗಳು ಮಾಡುವಲ್ಲಿ ನಿರತರಾಗಿದ್ದಾರೆ. ಸಿಎಂ ಗ್ರಾಮ ವಾಸ್ತವ್ಯಕ್ಕೆ ಹೇಗೆ..? ಎಲ್ಲಿಂದ..? ಯಾವ ಮಾರ್ಗದ ಮೂಲಕ ತೆರಳಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಮುಂದೆ ಓದಿ..

ಸಿಎಂ ಹೆಚ್ ಡಿ ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯದ ಪಯಣದ ಚಾರ್ಟ್ ರೆಡಿಯಾಗಿದೆ. ಸಿಎಂ ಯಾದಗಿರಿ ಮತ್ತು ಕಲಬುರ್ಗಿ ಜಿಲ್ಲೆಯಲ್ಲಿ ಕೈಗೊಳ್ಳಲಿರುವ ಗ್ರಾಮ ವಾಸ್ತವ್ಯದ ಪ್ರವಾಸದ ಕಾರ್ಯಕ್ರಮ ಇಂದು ರಾತ್ರಿಯಿಂದಲೇ ಆರಂಭವಾಗಲಿದೆ.

ದಿನಾಂಕ 21-06-2019 ಮೊದಲ ದಿನದ ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ

ಮೊದಲ ದಿನದ ಗ್ರಾಮ ವಾಸ್ತವ್ಯವನ್ನು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಯಾದಗಿರಿ ಜಿಲ್ಲೆಯ ಗುರುಮಿಠ್ಕಲ್ ತಾಲೂಕಿನ ಚಂಡರಕಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ನಡೆಸಲಿದ್ದಾರೆ.

 • ಇಂದು ಸಂಜೆ ಕರ್ನಾಟಕ ಎಕ್ಸ್ ಪ್ರೇಸ್ ರೈಲಿನಲ್ಲಿ ಯಾದಗಿರಿಗೆ ತೆರಳಿರುವ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಯಾದಗಿರಿಯನ್ನು ಬೆಳಿಗ್ಗೆ 3.48ಕ್ಕೆ ತಲುಪಲಿದ್ದಾರೆ.
 • 21-06-2019ರ ಶುಕ್ರವಾರದಂದು ಬೆಳಿಗ್ಗೆ 3.48ಕ್ಕೆ ಯಾದಗಿರಿ ರೈಲ್ವೆ ನಿಲ್ದಾಣ ತಲುಪಿರುವ ಮುಖ್ಯಮಂತ್ರಿಗಳು, ಯಾದಗಿರಿಯ ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ ಪಡೆದು, ಫ್ರೆಶ್ ಅಪ್ ಆಗಿ,
  7.30ಕ್ಕೆ ಯಾದಗಿರಿಯಿಂದ ರಸ್ತೆ ಸಂಚಾರದ ಮೂಲಕ ಹೊರಟು, ಗುರುಮಿಠ್ಕಲ್ ತಾಲ್ಲೂಕಿನ ಚಂಡರಕಿ ಗ್ರಾಮವನ್ನು ಬೆಳಿಗ್ಗೆ 10 ಗಂಟೆಗೆ ತಲುಪಲಿದ್ದಾರೆ.
 • 10ಕ್ಕೆ ಚಂಡರಕಿ ಗ್ರಾಮವನ್ನು ತಲುಪಲಿರುವ ಮುಖ್ಯಮಂತ್ರಿಗಳು, 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಚಂಡರಕಿ ಗ್ರಾಮದಲ್ಲಿ ಜನತಾದರ್ಶನ ನಡೆಸಲಿದ್ದಾರೆ. ಈ ಮೂಲಕ ಸಾರ್ವಜನಿಕರಿಂದ ಕುಂದು ಕೊರೆತಗಳಿಗೆ ಸಂಬಂಧಿಸಿದಂತೆ ಮನವಿಯನ್ನು ಆಲಿಸುವ ಮೂಲಕ, ಅವರಿಂದ ಮನವಿಯನ್ನು ಸ್ವೀಕರಿಸಲಿದ್ದಾರೆ.
 • ರಾತ್ರಿ 6.30ರಿಂದ 8.30ರ ವರೆಗೆ ರೈತರಿಗೆ ಅಧಿಕಾರಿಗಳಿಂದ ಮಾಹಿತಿ ಕೊಡಿಸುವ ಕಾರ್ಯಕ್ರಮ ನಡೆಯಲಿದೆ. ಇದಾದ ನಂತ್ರ ಚಂಡರಕಿ ಗ್ರಾಮದ ಸ್ಥಳೀಯ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು, ಶಾಲಾ ಶಿಕ್ಷಕರು ಹಾಗೂ ಮಕ್ಕಳೊಂದಿಗೆ ಭೋಜನ ಮಾಡಲಿದ್ದಾರೆ.
 • ರಾತ್ರಿ ಚಂಡರಕಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾತ್ರಿ ವಾಸ್ತವ್ಯ ಹೂಡಿ ಮೊದಲ ದಿನದ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.

ದಿನಾಂಕ 22-06-2019 ಎರಡನೇ ದಿನದ ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ

ಜೂನ್ 22ರಂದು ಎರಡನೇ ದಿನದ ಗ್ರಾಮ ವಾಸ್ತವ್ಯವನ್ನು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು, ಕಲಬುರ್ಗಿ ಜಿಲ್ಲೆಯ ಅಫ್ಜಲ್ ಪುರ ತಾಲೂಕಿನ ಹೆರೂರು ಬಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ನಡೆಸಲಿದ್ದಾರೆ.

 • ಬೆಳಿಗ್ಗೆ 7.30ಕ್ಕೆ ಗುರುಮಿಠ್ಕಲ್ ತಾಲ್ಲೂಕಿನ ಚಂಡರಕಿ ಗ್ರಾಮದ ಮೊದಲ ದಿನ ಗ್ರಾಮ ವಾಸ್ತವ್ಯ ಮುಗಿಸಿ ರಸ್ತೆ ಮೂಲಕ 10 ಗಂಟೆಯ ಹಾಗೆ ಕಲಬುರ್ಗಿ ಜಿಲ್ಲೆಯ ಅಫ್ಜಲ್ ಪುರ ತಾಲ್ಲೂಕಿನ ಹೆರೂರು ಬಿ ಗ್ರಾಮಕ್ಕೆ ಎರಡನೇ ದಿನದ ಗ್ರಾಮ ವಾಸ್ತವ್ಯ ಹೂಡಲು ತೆರಳಲಿದ್ದಾರೆ.
 • ಬೆಳಿಗ್ಗೆ 10 ಗಂಟೆಗೆ ಕಲಬುರ್ಗಿ ಜಿಲ್ಲೆಯ ಅಫ್ಜಲ್ ಪುರ ತಾಲ್ಲೂಕಿನ ಹೆರೂರು ಬಿ ಗ್ರಾಮವನ್ನು ತಲುಪಲಿರುವ ಮುಖ್ಯಮಂತ್ರಿಗಳು, ಗ್ರಾಮಕ್ಕೆ ತಲುಪಿದ ನಂತ್ರ 6 ಗಂಟೆಯವರೆಗೆ ಜನತಾದರ್ಶನದ ಮೂಲಕ ಜನರ ಕುಂದುಕೊರತೆಗಳನ್ನು ಆಲಿಸಿ, ಮನವಿ ಸ್ವೀಕರಿಸಲಿದ್ದಾರೆ.
 • ರಾತ್ರಿ 6.30ರಿಂದ ರೈತರಿಗೆ ಮಾಹಿತಿ ಒದಗಿಸುವ ಕಾರ್ಯಕ್ರಮದಲ್ಲಿ ನಡೆಯಲಿದೆ. ಆನಂತ್ರ ಸ್ಥಳೀಯ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲಿರುವ ಮುಖ್ಯಮಂತ್ರಿಗಳು, ರಾತ್ರಿ 8 ಗಂಟೆಯ ಹಾಗೇ ಶಿಕ್ಷಕರು ಹಾಗೂ ಮಕ್ಕಳೊಂದಿಗೆ ಭೋಜನ ಮಾಡಲಿದ್ದಾರೆ.
 • ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಭೋಜನದ ಬಳಿಕ ಹೆರೂರು ಬಿ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ನಡೆಸಲಿದ್ದಾರೆ.
 • ಹೀಗೆ ಎರಡು ದಿನಗಳ ಕಾಲ ತಮ್ಮ ಗ್ರಾಮ ವಾಸ್ತವ್ಯವನ್ನು ಮುಗಿಸಲಿರುವ ಮುಖ್ಯಮಂತ್ರಿಗಳು, ಬೆಳಿಗ್ಗೆ 9ಕ್ಕೆ ಕಲಬುರ್ಗಿ ಜಿಲ್ಲೆಯ ಅಫ್ಜಲ್ ಪುರ ತಾಲ್ಲೂಕಿನ ಹೆರೂರು ಬಿ ಗ್ರಾಮದಿಂದ ರಸ್ತೆ ಮೂಲಕ ಹೊರಡಲಿರುವ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು, 10.15ಕ್ಕೆ ಕಲಬುರ್ಗಿಯ ವಿಮಾನ ನಿಲ್ದಾಣವನ್ನು ತಲುಪಲಿದ್ದಾರೆ.
  11ಗಂಟೆಗೆ ಕಲಬುರ್ಗಿಯಿಂದ ವಿಶೇಷ ವಿಮಾನದ ಮೂಲಕ ಹೊರಟು, ಬೆಂಗಳೂರಿನ ಹೆಚ್ ಎ ಎಲ್ ವಿಮಾನ ನಿಲ್ದಾಣವನ್ನು ಮಧ್ಯಾಹ್ನ 12ಕ್ಕೆ ತಲುಪಿ, ಎಂದಿನಂತೆ ತಮ್ಮ ಆಡಳಿತದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಇದಕ್ಕಾಗಿ ಕಲಬುರ್ಗಿಯ ಪ್ರಾದೇಶಿಕ ಆಯುಕ್ತರಿಗೆ, ಐಜಿಪಿ ಈಶಾನ್ಯ ವಲಯದ ಪೊಲೀಸರಿಗೆ, ಕಲಬುರ್ಗಿ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಯಾದಗಿರಿ ಜಿಲ್ಲೆಯ ಜಿಲ್ಲಾಧಿಕಾಗಿರಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಲು ಮುಖ್ಯಮಂತ್ರಿಗಳ ಕಚೇರಿಯಿಂದ ಸೂಚನೆ ನೀಡಲಾಗಿದೆ.

ಇದಲ್ಲದೇ ಯಾದಗಿರಿ ಮತ್ತು ಕಲಬುರ್ಗಿ ಜಿಲ್ಲೆಯ ಶಾಸಕರು, ಜಿಲ್ಲಾ ಕಾಂಗ್ರೆಸ್-ಜೆಡಿಎಸ್ ಅಧ್ಯಕ್ಷರು, ಸಂಸತ್ ಸದಸ್ಯರು ಮತ್ತು ಇತರೆ ಗಣ್ಯರಿಗೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಕೋರಲಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions