ಜಾತಿ ಪಟ್ಟಿಯಲ್ಲಿ ಕಾಡುಗೊಲ್ಲ, ಹಟ್ಟಿಗೊಲ್ಲ ಹೆಸರು ಸೇರ್ಪಡೆಗೆ C.S.ದ್ವಾರಕನಾಥ್, ನಟ ಚೇತನ್ ಸಿಎಂ ಗೆ ಮನವಿ.!


Wednesday, January 17th, 2018 2:22 pm

ಬೆಂಗಳೂರು: ಮಧ್ಯ ಹೆಚ್ಚಾಗಿ ಕಂಡು ಬರುವ ಸಮುದಾಯವಾದ ಕಾಡು ಗೊಲ್ಲರನ್ನು ಜಾತಿಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಇಂದು ಸಿ.ಎಂ ಸಿದ್ದರಾಮಯ್ಯ ಅವರನ್ನು ಪ್ರಗತಿಪರ ಚಿಂತಕ ಸಿ.ಎಸ್ ದ್ವಾರಕಾನಾಥ್ ಹಾಗೂ ಚಿತ್ರ ನಟ ಚೇತನ್ ಸೇರಿದಂತೆ ಸಮುದಾಯದ ಮುಖಂಡರು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಇಂದು ಸಿ.ಎಂ ನೇತೃವದಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಸಚಿವ ಸಂಪುಟದಲ್ಲಿ ಹಿಂದುಳಿದ ವರ್ಗಗಳ  ಪಟ್ಟಿ ಪ್ರವರ್ಗ 1ರ ಅಡಿಯಲ್ಲಿ ಬರುವ ಗೊಲ್ಲ ಜಾತಿಯಿಂದಿಗೆ, ಕಾಡು ಗೊಲ್ಲ ಹಾಗೂ ಹಟ್ಟಿಗೊಲ್ಲ ಎನ್ನುವ ಪರ್‍ಯಾಯ ಪದಗಳನ್ನು ಸೇರಿಸುವಂತೆ ಮನವಿ ಮಾಡಿದರು.

ಸಿ.ಎಂ ಭೇಟಿ ನಂತರ ಮಾತನಾಡಿ ಪ್ರಗತಿಪರ ಚಿಂತಕ ದ್ವಾರಕನಾಥ್ ಮತ್ತು ಚೇತನ್, ಕಾಡುಗೊಲ್ಲ ಎಂ ಅಸ್ಮಿತೆಗಾಗಿ ಈ ಸಮುದಾಯದವರು ಹಲವು ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ. ಈ ಕುರಿತು ಈ ಬಗ್ಗೆ ಸಿ.ಎಂ ಅವರಿಗೆ ನಮ್ಮ ಈ ಭೇಟಿ ವೇಳೆ ಮನನ ಮಾಡಿಸಿ, ಮನವಿ ಮಾಡಿದ್ದೇವೆ, ಇಂದಿನ ಸಚಿವ ಸಂಪುಟದಲ್ಲಿ ಈ ಬಗ್ಗೆ ಅನುಮೋದಿಸಿ ಸದ್ಯದಲ್ಲೇ ಇದನ್ನು ಕಾರ್‍ಯ ರೂಪಕ್ಕೆ ಬರಲಿದೆ ಅಂತ ಹೇಳಿದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions