ಚಾಕಲೇಟ್ ಡೇ…. ಚಾಕಲೇಟ್ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳೋಣ


Saturday, February 9th, 2019 12:13 pm

ಸ್ಪೆಷಲ್ ಡೆಸ್ಕ್ : ಇಂದು ವ್ಯಾಲೆಂಟೈನ್ ವೀಕ್ ನ ಮೂರನೇ ದಿನ ಚಾಕಲೇಟ್ ಡೇ. ಈ ದಿನ ಪ್ರೇಮಿಗಳು ತಮ್ಮ ಸಂಗಾತಿಗಾಗಿ ಚಾಕಲೇಟ್ ನೀಡುತ್ತಾರೆ. ಇಂದು ನಾವು ಪ್ರೇಮಿಗೆ ಯಾವ ಚಾಕಲೇಟ್ ನೀಡಬೇಕು ಅನ್ನೋದನ್ನು ಹೇಳೋದಿಲ್ಲ, ಬದಲಾಗಿ ಚಾಕಲೇಟ್ ತಿನ್ನೊದ್ರಿಂದ ಏನು ಪ್ರಯೋಜನವಿದೆ ಅನ್ನೋದನ್ನು ತಿಳಿಸುತ್ತೇವೆ….

  • ಡಾರ್ಕ್ ಚಾಕಲೇಟ್ ಮೆದುಳಿಗೆ ಮತ್ತು ಹೃದಯಕ್ಕೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಆದ್ದರಿಂದ ಇದು ಮೆದುಳನ್ನು ಚುರುಕಾಗಿಸುತ್ತದೆ.
  • ಡಾರ್ಕ್‌ ಚಾಕಲೇಟ್‌ ಸೇವನೆ ಮಾಡಿದರೆ ಹೃದಯದ ಆರೋಗ್ಯ ಉತ್ತಮವಾಗುತ್ತದೆ.
  • ಕೊಕೊದ ಅಂಶ ಡಾರ್ಕ್ ಚಾಕಲೇಟ್ ಗಳಲ್ಲಿ ಹೆಚ್ಚಾಗಿ ಇರುವುದರಿಂದ ಸಂವೇದನೆ, ಸ್ಮರಣೆ, ಮನಸ್ಥಿತಿ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ
  • ನೀವು ಡಾರ್ಕ್‌ ಚಾಕಲೇಟ್‌ನ್ನು ಹೆಚ್ಚಾಗಿ ಸೇವನೆ ಮಾಡಿದರೆ ಬ್ಲಡ್‌ ಪ್ರೆಶರ್‌ ಕಡಿಮೆಯಾಗುತ್ತದೆ ಹಾಗೂ ಕೊಲೆಸ್ಟ್ರಾಲ್‌ ಕಡಿಮೆಯಾಗುತ್ತದೆ.
  • ಚಾಕಲೇಟ್‌‌ನ್ನು ಪ್ರತಿದಿನ ತಿನ್ನೋದರಿಂದ ಮೂಡ್‌ ಫ್ರೆಶ್‌ ಆಗುತ್ತದೆ. ಇದರಿಂದ ಸ್ಟ್ರೆಸ್‌‌ ನಿವಾರಣೆಯಾಗುತ್ತದೆ.
  • ಡಾರ್ಕ್ ಚಾಕಲೇಟ್ ಆರೋಗ್ಯಕ್ಕೆ ಬೇಕಾಗುವ ವಿಟಮಿನ್ ಮತ್ತು ಖನಿಜಾಂಶಗಳನ್ನು ಹೊಂದಿರುತ್ತದೆ.ಡಾರ್ಕ್ ಚಾಕಲೇಟ್ ನಲ್ಲಿ ಪೊಟ್ಯಶಿಯಂ,ಕಬ್ಬಿಣದ ಅಂಶ,ಮೆಗ್ನೀಷಿಯಂ ಮತ್ತು ತಾಮ್ರದ ಅಂಶವಿರುತ್ತದೆ.
  • ಚಾಕೊಲೆಟ್‌ನಲ್ಲಿ ಫೆನಿಲೆಂಥಿಲೆಮಿನ್‌ ಅಂಶ ಇದೆ. ಇದು ನಿಮ್ಮನ್ನು ಉದ್ರೇಕಗೊಳಿಸುತ್ತದೆ. ರೋಮ್ಯಾಂಟಿಕ್ ಮೂಡ್ ಬರಲು ಸಹಾಯ ಮಾಡುತ್ತದೆ.
  •  ಡಾರ್ಕ್‌ ಚಾಕೊಲೆಟ್‌ನಲ್ಲಿ ಆ್ಯಂಟಿ ಆಕ್ಸಿಡೆಂಟ್‌ ಅಂಶ ಇದ್ದು ಇದು ಇನ್‌ಫೆಕ್ಷನ್‌ ವಿರುದ್ಧ ಹೋರಾಡುತ್ತದೆ.

ನೋಡಿ ಚಾಕಲೇಟ್ ತಿನ್ನೋದ್ರಿಂದ ಲಾಭ ಇದೆ. ಆದುದರಿಂದ ನಿಮ್ಮ ಸಂಗಾತಿಗೂ ಚಾಕಲೇಟ್ ನೀಡಿ ಅವರಿಗೆ ಖುಷಿ ಪಡಿಸಿ, ಜೊತೆಗೆ ಆರೋಗ್ಯದಿಂದ ಇರುವಂತೆ ನೋಡಿಕೊಳ್ಳಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions