ಫಟಾ ಫಟ್ ಆಗಿ ಮನೆಯಲ್ಲಿಯೇ ತಯಾರಿಸಿ ಚಾಕಲೇಟ್ ಕೇಕ್


Wednesday, April 10th, 2019 8:30 am

ಸ್ಪೆಷಲ್ ಡೆಸ್ಕ್ : ಚಾಕಲೇಟ್ ಕೇಕ್ …. ವಾವ್ ಹೆಸರು ಹೇಳುವಾಗಲೇ ಬಾಯಲ್ಲಿ ನೀರೂರುತ್ತದೆ ಆಲ್ವಾ? ಅಂತಹ ರುಚಿಕರವಾದ ಕೇಕ್ ನ್ನು ಮನೆಯಲ್ಲಿ ಸಿಂಪಲ್ ಆಗ ತಯಾರಿಸಿ. ಅದು ಫಟಾ ಫಟ್ ಆಗಿ. ಹೇಗೆ ಮಾಡೋದು ಅದಕ್ಕೆ ಏನೆಲ್ಲಾ ಬೇಕು ಒಮ್ಮೆ ನೋಡಿಕೊಳ್ಳಿ…

ಬೇಕಾಗುವ ಸಾಮಗ್ರಿಗಳು : ಮೈದಾ ಹಿಟ್ಟು 1 ಕಪ್, ಕೋಕಾ ಪೌಡರ್ 2 ಚಮಚ, ಸಕ್ಕರೆ ಅರ್ಧ ಕಪ್,ಉಪ್ಪು ರುಚಿಗೆ ತಕ್ಕಷ್ಟು, ನೀರು, ಬೆಣ್ಣೆ ಒಂದು ಚಮಚ, ಬೇಕಿಂಗ್ ಸೋಡಾ ಅರ್ಧ ಚಮಚ

ತಯಾರಿಸುವ ವಿಧಾನ :
ಮೈದಾ ಹಿಟ್ಟಿಗೆ, ಕೋಕಾ ಪೌಡರ್ ಮತ್ತು ಉಪ್ಪು, ಸೋಡಾ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಈಗ ಸಕ್ಕರೆ ಪುಡಿ, ಬೆಣ್ಣೆ, ನೀರು ಹಾಕಿ ಹದವಾದ ಮಿಕ್ಸ್ ತಯಾರಿಸಿಕೊಳ್ಳಿ.
ಬೇಕಿದ್ದರೆ ಡ್ರೈ ಫ್ರುಟ್ಸ್ ಮಿಕ್ಸ್ ಮಾಡಿಕೊಳ್ಳಬಹುದು.
ಈಗ ಅದನ್ನು ಓವನ್ ನಲ್ಲಿ ಇಡಿ. ಓವನ್ ಇಲ್ಲದೆ ಇದ್ದರೆ ಕುಕ್ಕರ್ ನಲ್ಲಿಯೂ ತಯಾರಿಸಬಹುದು. (ಕುಕ್ಕರ್ ನಲ್ಲಿ 20 -30 ನಿಮಿಷ ಬೇಕಾಗುತ್ತದೆ.)
ಬೆಂದ ಮೇಲೆ ಕೆಳಗಿಸಿ. ಈಗ ಟೇಸ್ಟಿಯಾದ ಚಾಕಲೇಟ್ ಕೇಕ್ ಮನೆಯಲ್ಲಿಯೇ ಸವಿಯಲು ರೆಡಿ.
ನಿಮಗೆ ಬೇಕು ಎನಿಸಿದರೆ ಅದರ ಮೇಲೆ ಕ್ರೀಮ್ ನಿಂದ ಅಲಂಕರಿಸಬಹುದು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions