ಮನೆಯಲ್ಲಿಯೇ ಮಾಡಿ ರುಚಿಯಾದ ತುಪ್ಪದ ಚಿರೋಟಿ


Sunday, July 8th, 2018 1:07 pm

ಸ್ಪೆಷಲ್ ಡೆಸ್ಕ್ : ಚಿರೋಟಿ ಎಂದರೆ ಬಾಯಲ್ಲಿ ನೀರೂರುತ್ತದೆ. ತುಪ್ಪದಿಂದ ಮಾಡಿದ ಘಮ್ ಎನ್ನುವ ಚಿರೋಟಿ ಎಷ್ಟು ಚೆನ್ನಾಗಿರುತ್ತೆ ಆಲ್ವಾ? ಇದನ್ನು ನೀವು ಕೂಡ ಮನೆಯಲಿ ಮಾಡಬಹುದು. ಹೇಗೆ ಅನ್ನೋದನ್ನು ನಾವು ಹೇಳ್ತೀವಿ.

ಬೇಕಾಗುವ ಸಾಮಾಗ್ರಿಗಳು :ಮೈದಾಹಿಟ್ಟು ಎರಡು ಕಪ್, ತುಪ್ಪ, ಅಕ್ಕಿಹಿಟ್ಟು 2 ಟೀ ಸ್ಪೂನ್, ನೀರು ಸ್ವಲ್ಪ, ಏಲಕ್ಕಿ ಪುಡಿ, ಕರಿಯಲು ಎಣ್ಣೆ, ಉಪ್ಪು, ಸಕ್ಕರೆಪುಡಿ.

ತಯಾರಿಸುವ ವಿಧಾನ ಇನ್ನು ಸುಲಭ :
ಮೈದಾಹಿಟ್ಟು, ಅಕ್ಕಿಹಿಟ್ಟು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಒಂದು ಬೌಲ್‌ಗೆ ಹಾಕಿ. ಅದಕ್ಕೆ ತುಪ್ಪವನ್ನು ಬಿಸಿ ಮಾಡಿ ಹಾಕಿ.
ಈ ಮಿಶ್ರಣಕ್ಕೆ ಸ್ವಲ್ಪ ನೀರು ಸೇರಿಸಿ ಪುರಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ..
ಒಂದು ಬೌಲ್‌ನಲ್ಲಿ ಸ್ವಲ್ಒ ಅಕ್ಕಿ ಹಿಟ್ಟು ಮತ್ತು ತುಪ್ಪವನ್ನು ಸೇರಿಸಿ ಸರಿಯಾಗಿ ಮಿಕ್ಸ್‌ ಮಾಡಿ.
ನಂತರ ಕಲಸಿದ ಮೈದಾಹಿಟ್ಟಿನಿಂದ ಉಂಡೆಗಳನ್ನು ಮಾಡಿಕೊಂಡು ಪುರಿಯಂತೆ ಲಟ್ಟಿಸಿಕೊಳ್ಳಿ.
ಸ್ಟೌ ಮೇಲೆ ಸಕ್ಕರೆ ಹಾಗೂ ನೀರು ಹಾಕಿ ಪಾಕ ಮಾಡಿಕೊಳ್ಳಿ. ಇದಕ್ಕೆ ಏಲಕ್ಕಿ ಕೂಡ ಹಾಕಿ.
ಲಟ್ಟಿಸಿದ ಪುರಿಯ ಮೇಲೆ ಅಕ್ಕಿಹಿಟ್ಟು, ತುಪ್ಪದ ಮಿಶ್ರಣವನ್ನು ತೆಳ್ಳಗೆ ಸವರಿ, ಅದರಮೇಲೆ ಇನ್ನೊಂದು ಪೂರಿ ಮಾಡಿ ಇಡಿ ಮತ್ತೆ ಅದರ ಮೇಲೆ ಮಿಶ್ರಣ ಸವರಿ, ಇನ್ನೊಂದು ಪೂರಿಯನ್ನಿಡಿ. ಇದೆ ರೀತಿ ೩ ಪೂರಿಗಳನ್ನು ಒಂದರ ಮೇಲೊಂದು ಇಟ್ಟು, ಅಕ್ಕಿಹಿಟ್ಟಿನ ಮಿಶ್ರಣ ಸವರಿ, ಎಲ್ಲವನ್ನೂ ಸೇರಿಸಿ ಸುರುಳಿಯಾಗಿ ಮಡಿಚಿ.
ಸುರುಳಿಯನ್ನು ಒಂದೇ ಅಳತೆಯ ಚಿಕ್ಕ ಭಾಗಗಳಾಗಿ ಕತ್ತರಿಸಿಕೊಳ್ಳಿ. ಕತ್ತರಿಸಿಕೊಂಡ ಹಿಟ್ಟಿನ ಭಾಗಗಳನ್ನು ಹಾಗೇ ತಟ್ಟಿ, ಪೂರಿಯಂತೆ ಲಟ್ಟಿಸಿ, ಹದವಾದ ಉರಿಯಲ್ಲಿ ಹೊಂಬಣ್ಣ ಬರುವಂತೆ ಡೀಪ್‌ ಫ್ರೈ ಮಾಡಿ.
ಪೂರಿಯನ್ನು ಸಕ್ಕರೆ ಪಾಕದಲ್ಲಿ ಹಾಕಿಡಿ. ಸ್ವಲ್ಪ ಹೊತ್ತಿನ ಬಳಿಕ ಅದನ್ನು ಬೇರೆ ತೆಗೆದಿರಿಸಿ. ಈಗ ರುಚಿಯಾದ ಚಿರೋಟಿ ಸವಿಯಲು ರೆಡಿಯಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Gadgets
State
Astrology
Cricket Score
Poll Questions