ಸುಭಾಷಿತ :

Monday, September 23 , 2019 3:56 PM

ಯೂಟ್ಯೂಬ್ ನಲ್ಲಿ ಸಖತ್ ವೈರಲ್ ಆದ ಚಿರಂಜೀವಿ ಸರ್ಜಾ ನಟನೆಯ ‘ಸಿಂಗ’ ಚಿತ್ರದ ಟ್ರೈಲರ್.!


Monday, June 17th, 2019 11:22 am

ಸಿನಿಮಾ ಡೆಸ್ಕ್ : ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಮತ್ತು ಅದಿತಿ ಪ್ರಭುದೇವ್ ಕಾಂಬಿನೇಷನ್ ನ ಸಿಂಗ ಚಿತ್ರದ ಟ್ರೈಲರ್ ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಸಖತ್ ಡೈಲಾಗ್, ಆಕ್ಷನ್ ಹಾಗೂ ಕಾಮಿಟಿ ಕಟ್ ನಲ್ಲಿ ಸಿಂಗ ಟ್ರೈಲರ್ ಸಖತ್ ಸದ್ದು ಮಾಡುತ್ತಿದೆ.

ವೆಂಕಟೇಶ್ವರ ಎಂಟ್ ಟ್ರೈನರ್ಸ್ ನಲ್ಲಿ ತೆರೆ ಕಾಣಳು ಸಜ್ಜಾಗಿರುವ ಚಿತ್ರವೇ ಯುವ ಸಾಮ್ರಾಟ್ ನಟನೆಯ ಸಿಂಗ. ಇಂತಹ ಚಿತ್ರದ ಅಫೀಷಿಯಲ್ ಟ್ರೈಲರ್ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಯಾದ ಕೆಲವೇ ಗಂಟೆಯಲ್ಲಿ ಲಕ್ಷ ವೀಕ್ಷಕರ ಸಂಖ್ಯೆಯನ್ನು ದಾಟಿದ್ದು, ಯೂಟ್ಯೂಬ್ ನಲ್ಲಿ ವೈರಲ್ ಆಗುತ್ತಿದೆ.
ಸಿಂಗ ಚಿತ್ರದ ತಾರಾಗಣದಲ್ಲಿ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ನಾಯಕನಟನಾಗಿ ಕಾಣಿಸಿಕೊಂಡಿದ್ದರೇ, ನಾಯಕಿಯಾಗಿ ಅದಿತಿ ಪ್ರಭುದೇವ್ ತೆರೆಯನ್ನು ಹಂಚಿಕೊಂಡಿದ್ದಾರೆ. ಇವರೊಂದಿಗೆ ಬಿ.ಸುರೇಶ್, ರವಿಶಂಕರ್, ಶಿವರಾಜ್ ಕೆಆರ್ ಪೇಟೆ, ತಾರಾ ಸೇರಿದಂತೆ ಅನೇಕರು ತಾರಾಗಣದಲ್ಲಿದ್ದಾರೆ.

ಅಂದಹಾಗೇ ಚಿತ್ರದ ಪ್ರತಿಯೊಂದು ಹಾಡುಗಳು ಕೂಡ ಸೂಪರ್ ಡೂಪರ್ ಎನಿಸುವಂತಿದ್ದು, ಇಂತಹ ಹಾಡಿಗೆ ಧರ್ಮ ವಿಶ್ ಅವರು ಸಂಗೀತ ನೀಡಿದ್ದರೇ, ಡಾ.ನಾಗೇಂದ್ರ ಪ್ರಸಾದ್, ಕವಿರಾಜ್ ಹಾಗೂ ಭರ್ಜರಿ ಚೇತನ್ ಸಾಹಿತ್ಯ ಲೇಪನ ಹಾಡುಗಳಲ್ಲಿ ಧ್ವನಿಸಿದೆ.

ಇನ್ನೂ ಯುಕೆಎಂ ಸ್ಟೂಡಿಯೋಸ್ ನ, ಉದಯ್ ಕೆ ಮಹ್ತಾ ಅವರ ನಿರ್ಮಾಣ, ವಿಜಯ್ ಕಿರಣ್ ನಿರ್ದೇಶನ ಚಿರಂಜೀವಿ ಸರ್ಜಾ ನಟನೆಯ ಸಿಂಗ ಚಿತ್ರಕ್ಕಿದೆ. ಇವರ ಜೊತೆಗೆ ಛಾಯಾಗ್ರಾಹರಕರಾಗಿ ಮುರಳಿ ಕೆಲಸ ಮಾಡಿದ್ದರೆ, ಸಂಕಲನವನ್ನು ಗಣೇಶ್ ಮಲ್ಲಯ್ಯ, ಸಾಹಸ ನಿರ್ದೇಶನ ಡಾ.ರವಿವರ್ಮ, ಪಳನಿ ರಾಜು, ಸಂಭಾಷಣೆ ರಾಘು ನಿಡುವಳ್ಳಿ ನೀಡಿದ್ದಾರೆ.

ಇಂತಹ ಚಿತ್ರದ ಸಿಂಗ ಟ್ರೈಲರ್ ಯೂಟ್ಯೂಬ್ ನಲ್ಲಿ ಹವಾ ಕ್ರಿಯೇಟ್ ಮಾಡಿದ್ದು, ಚಿರಂಜೀವಿ ಸರ್ಜಾ ಅವರ ಡೈಲಾಗ್ ಮೂಲಕ ಎಲ್ಲರನ್ನು ಮೆಚ್ಚುತ್ತಿದೆ. ಟ್ರೈಲರ್ ನಲ್ಲಿನ ಡೈಲಾಗ್ ಗಳಿಗೆ ಚಿತ್ರ ಪ್ರೇಕ್ಷಕರನ್ನು ಯಾವಾಗ ಚಿತ್ರ ಬಿಡುಗಡೆಯಾಗಿ ನೋಡ್ತೇವೋ ಎಂಬ ಕಾತುರವನ್ನು ಹುಟ್ಟುಹಾಕಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions