ಸುಭಾಷಿತ :

Sunday, January 26 , 2020 4:16 AM

ಮಕ್ಕಳ ಉತ್ತಮ ಆರೋಗ್ಯಕ್ಕೆ ಡಯಟ್ ನಲ್ಲಿರಲ್ಲಿ ಈ ಎಲ್ಲಾ ಆಹಾರಗಳು


Sunday, July 14th, 2019 12:54 pm

ಸ್ಪೆಷಲ್ ಡೆಸ್ಕ್ : ಬೆಳೆಯುವ ಮಕ್ಕಳಿಗೆ ಯಾವ ಆಹಾರ ನೀಡಿದರೆ ಉತ್ತಮ, ಅವರು ಸಧೃಢರಾಗಿ ಬೆಳೆಯುತ್ತಾರೆ ಎಂಬ ಪ್ರಶ್ನೆ ಪ್ರತಿಯೊಬ್ಬ ತಾಯಂದಿರಲ್ಲೂ ಇರುತ್ತದೆ. ಇನ್ನು ಮಕ್ಕಳು ಹೆಚ್ಚಾಗಿ ಜಂಕ್ ಫುಡ್ ಗಳನ್ನೇ ಇಷ್ಟಪಡುತ್ತಾರೆ. ಇಂತಹ ಸಂದರ್ಭದಲ್ಲಿ ನೀವು ಮಕ್ಕಳಿಗೆ ಏನು ನೀಡಬೇಕು ..? ಅನ್ನೋದರ ಬಗ್ಗೆ ಇಲ್ಲೊಂದಿಷ್ಟು ಮಾಹಿತಿ ಇದೆ…

ಧಾನ್ಯಗಳು :ಧಾನ್ಯಗಳನ್ನ ಉಪಯೋಗಿಸಿ.ಕಾಳು, ದವಸ ಧಾನ್ಯಗಳಲ್ಲಿ ಮಕ್ಕಳಿಗೆ ಬೇಕಾದ ಹೆಚ್ಚಿನ ಪೋಷಕಾಂಶ ಸಿಗುತ್ತದೆ. ಆದುದರಿಂದ ಮಕ್ಕಳಿಗೆ ಹೆಚ್ಚಲಾಗಿ ಇವುಗಳನ್ನು ನೀಡಿ…

ಪ್ರೊಟೀನ್‌ : ಪ್ರೊಟೀನ್‌ ಮಕ್ಕಳ ಬೆಳವಣಿಗೆ ಮತ್ತು ಹಿಮೋಗ್ಲೋಬಿನ್‌ ಹಾಗೂ ಇಮ್ಯೂನಿಟಿ ಪವರ್‌ ಹೆಚ್ಚಿಸಲು ಇದು ಸಹಕಾರಿಯಾಗಿದೆ. ಸಮುದ್ರ ಆಹಾರ, ಮೊಟ್ಟೆ, ಮಾಂಸ, ಬಟಾಣಿ, ಬೀನ್ಸ್‌, ಸೋಯಾ ಉತ್ಪನ್ನಗಳಲ್ಲಿ ಈ ಅಂಶ ಹೆಚ್ಚಾಗಿದೆ.

ಹಣ್ಣು : ಮಕ್ಕಳಿಗೆ ಹಣ್ಣಿನ ರಸ ಕುಡಿಯಬೇಕು ಎಂದೆನಿಸಿದರೆ ಮನೆಯಲ್ಲೇ ಲಿಂಬೆ ಜ್ಯೂಸ್ ಮಾಡಿ ಕುಡಿಯಿರಿ. ಮನೆಯಲ್ಲಿ ಹಣ್ಣಿನ ರಸ ತಯಾರಿಸುವಾಗ ಸಾಧ್ಯವಾದಷ್ಟು ಕಡಿಮೆ ಸಕ್ಕರೆ ಹಾಕಬೇಕು.

ತರಕಾರಿ : ಮಕ್ಕಳಿಗೆ ಇಷ್ಟವಾದ ಹಣ್ಣು ಮತ್ತು ತರಕಾರಿಗಳನ್ನು ನೀಡಿ. ವಿಭಿನ್ನ ಬಣ್ಣದ ಹಣ್ಣು –ತರಕಾರಿಗಳಿಗೆ ಆದ್ಯತೆ ನೀಡಲು ಪ್ರಯತ್ನಿಸಿ. ಯಾಕೆಂದರೆ ಮಕ್ಕಳಿಗೆ ಕಲರ್‌ ತುಂಬಾನೆ ಇಷ್ಟವಾಗುತ್ತದೆ. ಇದನ್ನು ತಿನ್ನುವಾಗ ಆಯಾ ಋತುವಿಗೆ ಹೊಂದಿಕೊಳ್ಳುವುದನ್ನು ಖರೀದಿ ಮಾಡಲು ಮರೆಯಬಾರದು.

ಡೈರಿ ಉತ್ಪನ್ನಗಳು : ಕಡಿಮೆ ಫ್ಯಾಟ್‌ ಇರುವ ಡೈರಿ ಉತ್ಪನ್ನಗಳಾದ ಹಾಲು, ಯೋಗರ್ಟ್‌, ಚೀಸ್‌ ಮೊದಲಾದ ಆಹಾರಗಳನ್ನು ಮಕ್ಕಳಿಗೆ ನೀಡಿ. ಇದು ಮಕ್ಕಳ ಮೂಳೆಗಳನ್ನು ಗಟ್ಟಿಮುಟ್ಟಾಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions