ಸುಭಾಷಿತ :

Saturday, October 19 , 2019 4:28 PM

ಚಾಮುಂಡಿ ಬೆಟ್ಟದಲ್ಲಿ ವಿಜೃಂಭಣೆಯ ಚಾಮುಂಡೇಶ್ವರಿ ರಥೋತ್ಸವ


Sunday, October 13th, 2019 9:06 am

ಮೈಸೂರು : ಇಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಡ ದೇವತೆ ಚಾಮುಂಡೇಶ್ವರಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಯದುವೀರ್ ಒಡೆಯರ್ ರಥ ಎಳೆದು ಚಾಮುಂಡಿ ರಥೋತ್ಸವಕ್ಕೆ ಚಾಲನೆ ನೀಡಿದರು.

ರಥೋತ್ಸವದ ಬಳಿಕ ಮಾತನಾಡಿದ ಯದುವೀರ್ ಒಡೆಯರ್, ದಸರಾ ಮಹೋತ್ಸವ ಮುಗಿದಿದೆ. ಸಂಪ್ರದಾಯದಂತೆ ಇಂದು ಚಾಮುಂಡೇಶ್ವರಿ ರಥೋತ್ಸವ ನಡೆದಿದೆ. ರಾಜ್ಯಕ್ಕೆ ಮಳೆ, ಬೆಳೆ ಸುಭಿಕ್ಷವಾಗಿ ಇರಲಿ ಎಂದು ಪ್ರಾರ್ಥಿಸಿದ್ದೇವೆ ಎಂದರು.

ಚಾಮುಂಡೇಶ್ವರಿ ದೇವಿ ರಥೋತ್ಸವದ ವೇಳೆ ರಾಜವಂಶಸ್ಥೆ ಪ್ರಮೋದಾದೇವಿ, ಯದುವೀರ್ ಒಡೆಯರ್ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಚಾಮುಂಡೇಶ್ವರಿ ದರ್ಶನ ಪಡೆದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions