ಟ್ರೇಲರ್ ನಿಂದಲೇ ಸದ್ದು ಮಾಡ್ತೀರುವ “ಚಂಬಲ್” ಸಿನಿಮಾದ ಲಿರಿಕಲ್ ಸಾಂಗ್ ಬಿಡುಗಡೆ


Thursday, February 14th, 2019 5:00 pm

ಸಿನಿಮಾಡೆಸ್ಕ್: ಟ್ರೇಲರ್ ನಿಂದಲೇ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಸಿನಿಮಾ “ಚಂಬಲ್”.

ನೀನಾಸಂ ಸತೀಶ್ ಅಭಿನಯದ ಸಿನಿಮಾ ಇದಾಗಿದ್ದು, ಈ ಸಿನಿಮಾದ ಕೇಳದೇ ಹೋದರೆ ನಾನು ಎನ್ನುವ ಲಿರಿಕಲ್ ಸಾಂಗ್ ಬಿಡುಗಡೆಯಾಗಿದೆ. ಜಯಂತ್ ಕಾಯ್ಕಿಣಿ ಈ ಹಾಡನ್ನು ರಚಿಸಿದ್ದು, ಅವರ ಪದಕ್ಕೆ ಉದಿತ್ ನಾರಾಯಣ್ ಅವರು ಧ್ವನಿಯಾಗಿದ್ದು, ಪೂರ್ಣಚಂದ್ರ ತೇಜಸ್ವಿ ಅವರು ಸಂಗೀತ ನೀಡಿದ್ದಾರೆ.
ಮೆಲೋಡಿಯಾಗಿರುವ ಈ ಹಾಡು ಎಲ್ಲರನ್ನು ಗುನುಗುವಂತೆ ಮಾಡುವುದಕ್ಕೆ ಸಂಶಯವೇ ಇಲ್ಲ. ಜೇಕಬ್ ವರ್ಗೀಸ್ ಈ ಹಿಂದೆ ಸವಾರಿ ಚಿತ್ರದ ಮೂಲಕ ಚಿತ್ರರಂಗದಲ್ಲಿ ತಮ್ಮದೇ ಆದ ಸದ್ದು ಕ್ರಿಯೆಟ್ ಮಾಡಿದ್ದವರು.

ಆ ಬಳಿಕ ಪೃಥ್ವಿ, ಸವಾರಿ-2 ಸಿನಿಮಾ ಈಗ ‌ಅವರ 4ನೇ ಚಿತ್ರ ಚಂಬಲ್ ನಲ್ಲೂ ಕೂಡ ಒಂದೊಳ್ಳೆ ಕಥೆಯನ್ನು ತೆರೆ ಮೇಲೆ ತರುತ್ತಿದ್ದು, ಈ ಮೂಲಕ ಪ್ರೇಕ್ಷಕರಿಗೆ ಒಂದೊಳ್ಳೆ ಸಿನಿಮಾವನ್ನು ನೀಡುತ್ತಿದ್ದಾರೆ.

ಇನ್ನು ಸಿನಿಮಾದಲ್ಲಿ ನೀನಾಸಂ ಸತೀಶ್ ನಾಯಕನಾಗಿ ಕಾಣಿಸಿಕೊಂಡಿದ್ದು, ಸೋನು ಗೌಡ ನಾಯಕಿಯಾಗಿ ತೆರೆಹಂಚಿಕೊಂಡಿದ್ದಾರೆ. ಸಿನಿಮಾ ಸದ್ಯದಲ್ಲೇ ತೆರೆಕಾಣಲಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions