ಹಣ ಕೇಳಿದಕ್ಕೆ ಪೆಟ್ರೋಲ್‌ ಬಂಕ್‌ ಸಿಬ್ಬಂದಿಗೆ ಗುಂಡೇಟು ಹೊಡೆದು ಸಾಯಿಸಿ ಬಿಟ್ಟರು


Friday, October 12th, 2018 5:34 pm


ಹರಿಯಾಣ : ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ಬೈಕರ್‌ಗಳು, ಪೆಟ್ರೋಲ್ ತುಂಬಿಸಿಕೊಂಡ ಬಳಿಕ ಸಿಬ್ಬಂದಿ ಹಣ ಕೇಳಿದಕ್ಕೆ, ಸಿಬ್ಬಂದಿ ಬಳಿ ಇದ್ದ ಹಣವನ್ನು ಕಿತ್ತುಕೊಳ್ಳುವ ಸಲುವಾಗಿ ಆತನ ಮೇಲೆ ಗುಂಡು ಹಾರಿಸಿ, ದರೋಡೆಗೆ ಯತ್ನಿಸಿರುವ ಘಟನೆ ಹರಿಯಾಣದ ದುಧೋಲ ಪ್ರದೇಶದಲ್ಲಿನ ಪೆಟ್ರೋಲ್‌ ಬಂಕ್‌ ನಲ್ಲಿ ನಡೆದಿದೆ.

ಘಟನೆ ಕೃತ್ಯ ಸಂಪೂರ್ಣವಾಗಿ ಸಿಸಿಟಿವಿಯಲ್ಲಿ ಸೆರೆಸಿಕ್ಕಿದ್ದು, ಸಿಬ್ಬಂದಿ ಮೇಲೆ ಮೂರರಿಂದ ನಾಲ್ಕು ಸುತ್ತು ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ. ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕುಟುಂಬ ಸದಸ್ಯರು ಅಪರಾಧಿಗಳನ್ನು ಬಂಧಿಸಲು ಆಗ್ರಹಿಸಿದ್ದಾರೆ

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions