ಗ್ರಹಚಾರ ಕಡಿಮೆಯಾಗಿ ಒಳ್ಳೆಯ ಕಾಲ ಬರುತ್ತದೆ: ಬಿಎಸ್​ವೈ ಭವಿಷ್ಯ


Wednesday, July 4th, 2018 6:41 pm

ತುಮಕೂರು: ಮಾಜಿ ಮುಖ್ಯಮ೦ತ್ರಿಗಳು, ವಿರೋಧಪಕ್ಷದ ನಾಯಕರು ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರಾದ  ಬಿ.ಎಸ್.ಯಡಿಯೂರಪ್ಪನವರು ಇ೦ದು ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೋಣವಿನಕೆರೆಯಲ್ಲಿ ಪರಮಪೂಜ್ಯ ಶ್ರೀ ಕರಿವೃಷಭ ದೇಶೀಕೇ೦ದ್ರ ಶಿವಯೋಗೀಶ್ವರ ಮಹಾಸ್ವಾಮಿಗಳವರ ಪಟ್ಟಾಧಿಕಾರ ರಜತ ಮಹೋತ್ಸದ ಸ೦ಸ್ಮರಣೆಯಲ್ಲಿ ಸೋಮೇಕಟ್ಟೆ ಶ್ರೀ ಕಾಡಸಿದ್ದೇಶ್ವರ ಮಠದ ನೂತನ ಶಿಲಾಮಠದ ಲೋಕಾರ್ಪಣ ಸಮಾರ೦ಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಇದೇ ವೇಳೆ ಅವರು ಮಾತನಾಡಿ  ಗ್ರಹಚಾರ ಕಡಿಮೆಯಾಗಿ ಮುಂದೆ ಒಳ್ಳೆಯ ಕಾಲ ಬರುತ್ತದೆ. ರಾಜ್ಯದ ಅಭಿವೃದ್ಧಿ ಆಗಲು ನಮಗೆ ಆಶೀರ್ವಾದ ಮಾಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಅವರು ಶ್ರೀ ಕಾಡಸಿದ್ದೇಶ್ವರ ಮಠದ ಸ್ವಾಮಿಜಿಗಳಲ್ಲಿ ಮನವಿ ಮಾಡಿಕೊಂಡರು.

ಇದೇ ವೇಳೆ ಅವರು ಮಾತನಾಡಿ ಹಸಿದವರಿಗೆ ಅನ್ನ, ರೋಗಿಗಳಿಗೆ ಶುಶ್ರೂಷೆ ಮುಂತಾದ ಸಮಾಜಮುಖಿ ಕೆಲಸಗಳಿಂದ ಧಾರ್ಮಿಕ ಪುರುಷರು ಪೂಜನೀಯ ಸ್ಥಾನ ಪಡೆದಿದ್ದಾರೆ. ಕಾಡಸಿದ್ದೇಶ್ವರ ಮಠ ಪ್ರಮುಖ ಆಧ್ಯಾತ್ಮಿಕವಾಗಿ ಕೇಂದ್ರವಾಗಿ ಬೆಳೆದು ನಿಂತಿದ್ದು, ಸಮಾಜದ ಕತ್ತಲು ನೀಗಿಸುವ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions