ಸುಭಾಷಿತ :

Monday, November 18 , 2019 6:09 PM

ಸ್ತನಗಳ ಅರೋಗ್ಯ ರಕ್ಷಣೆಗೆ ಪ್ರತಿ ಮಹಿಳೆಯರು ಪಾಲಿಸಲೇ ಬೇಕಾದ ಅಗತ್ಯ ಸಲಹೆಗಳು…


Friday, August 23rd, 2019 11:47 am

ಸ್ಪೆಷಲ್ ಡೆಸ್ಕ್ : ಮಹಿಳೆಯರ ದೇಹದ ಅಂದ ಹೆಚ್ಚಿಸುವಲ್ಲಿ ಸ್ತನಗಳು ಖಂಡಿತವಾಗಿಯೂ ಪ್ರಮುಖ ಪಾತ್ರ ವಹಿಸುತ್ತವೆ. ಅಷ್ಟೇ ಅಲ್ಲ ಮಗುವಿನ ಆರೋಗ್ಯಕರ ಬೆಳವಣಿಗೆಗೂ ಸಹ ಎದೆ ಹಾಲು ಬೇಕಾಗುತ್ತದೆ. ಅದಕ್ಕಾಗಿಯೂ ಸ್ತನಗಳು ಆರೋಗ್ಯವಾಗಿರಲೇಬೇಕು. ಇತ್ತೀಚಿನ ದಿನಗಳಲ್ಲಂತೂ ಸ್ತನಗಳ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಈ ಎಲ್ಲಾ ಸಮಸ್ಯೆ ನಿವಾರಣೆಗೆ ಪ್ರತಿಯೊಬ್ಬ ಮಹಿಳೆಯರೂ ಸ್ತನಗಳ ಆರೋಗ್ಯದತ್ತ ಗಮನ ಹರಿಸಬೇಕು.

ಸ್ತನಗಳು ಆರೋಗ್ಯವಾಗಿರಲು ಮಹಿಳೆಯರು ಪಾಲಿಸಲೇಬೇಕಾದ ಸಲಹೆಗಳು ಇಲ್ಲಿವೆ…

ಮಲಗುವ ಮುನ್ನ ಬ್ರಾ ಕಳಚಿ : ರಾತ್ರಿ ಮಲಗುವಾಗ ಬ್ರಾ ಧರಿಸುವುದು ತಪ್ಪು. ಟೈಟ್‌ ಬ್ರಾ ಧರಿಸುವುದರಿಂದ ರಕ್ತ ಸಂಚಾರ ಸರಿಯಾಗಿ ಆಗದೆ ಸಮಸ್ಯೆ ಉಂಟಾಗುತ್ತದೆ.

ಬ್ರಾ ಸೈಜ್ : ಸರಿಯಾದ ಸೈಜ್ ನ ಬ್ರಾ ಆಯ್ಕೆ ಮಾಡಿಕೊಳ್ಳಬೇಕು. ತುಂಬಾ ಟೈಟ್ ಬ್ರಾ ಧರಿಸುವುದರಿಂದ ಎದೆಯ ಮೇಲೆ ಒತ್ತಡ ಬೀರುತ್ತದೆ ಹಾಗೂ ಲೂಸ್‌ ಬ್ರಾ ಧರಿಸುವುದರಿಂದ ಸೌಂದರ್ಯದ ಮೇಲೆ ಹಾನಿಯುಂಟಾಗುತ್ತದೆ.

ಸ್ತನ ಕ್ಯಾನ್ಸರ್‌ : ಬ್ರೆಸ್ಟ್‌ ಕ್ಯಾನ್ಸರ್‌ ಸಾಮಾನ್ಯವಾಗಿ ಎಲ್ಲರಲ್ಲೂ ಕಂಡುಬರುತ್ತದೆ. ಆದುದರಿಂದ ಇದರ ಪರೀಕ್ಷೆ ಮಾಡಿಸಿಕೊಳ್ಳುವುದು ಮುಖ್ಯ. ಈ ರೋಗದ ಬಗ್ಗೆ ಮೊದಲ ಹಂತದಲ್ಲಿ ಏನೂ ತಿಳಿಯುವುದೇ ಇಲ್ಲ. ಆದುದರಿಂದ ನಿಮಗೆ ಆ ಬಗ್ಗೆ ಸಂಶಯ ಇದ್ದರೂ ಇಲ್ಲದಿದ್ದರೂ ಒಂದು ಬಾರಿ ಪರೀಕ್ಷೆ ಮಾಡಿಸಿಕೊಳ್ಳುವುದರಲ್ಲಿ ತಪ್ಪಿಲ್ಲ.

ಆಯಿಲ್‌ ಮಸಾಜ್‌ : ಸ್ತನಗಳ ಆರೋಗ್ಯಕ್ಕೆ ಹರ್ಬಲ್‌ ಆಯಿಲ್‌ ಬಳಕೆ ಮಾಡಿ. ಎಣ್ಣೆಗಳಿಂದ ಸ್ತನಗಳ ಮಸಾಜ್‌ ಮಾಡುವುದರಿಂದ ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ ಜೊತೆಗೆ ಅಂಗಗಳು ಸುಂದರವಾಗುತ್ತದೆ.

ಎಕ್ಸರ್‌ಸೈಜ್‌ ಮಾಡಿ : ಪ್ರತಿ ದಿನ 15 ನಿಮಿಷ ಎಕ್ಸರ್‌ಸೈಜ್‌ ಮಾಡುವುದರಿಂದ ಸ್ತನಗಳಿಗೆ ಉತ್ತಮ ಶೇಪ್‌ ಬರುತ್ತದೆ. ಸ್ತನಗಳ ಗಾತ್ರ ಹೆಚ್ಚಿಸುವಲ್ಲಿ ಎಕ್ಸರ್‌ಸೈಜ್‌ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ಆರೋಗ್ಯದಿಂದ ಇರುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions