ಸುಭಾಷಿತ :

Tuesday, September 17 , 2019 6:58 AM

-->

ಬಾಯಲ್ಲಿ ನೀರೂರಿಸುವ ಬ್ರೆಡ್ ಗುಲಾಬ್ ಜಾಮೂನ್ ಮಾಡಿ ಸವಿಯಿರಿ…


Saturday, August 17th, 2019 10:14 am

ಸ್ಪೆಷಲ್ ಡೆಸ್ಕ್ : ಯಾವಾಗಲೂ ಮನೆಯಲ್ಲಿ ಗುಲಾಬ್ ಜಾಮೂನ್ ಪ್ಯಾಕೆಟ್ ತಂದು ಮಾಡಿರುತ್ತೀರಿ, ಈ ಬಾರಿ ಬ್ರೆಡ್ ಉಪಯೋಗಿಸಿ ಮನೆಯಲ್ಲಿಯೇ ರುಚಿಯಾದ ಬ್ರೆಡ್ ಗುಲಾಬ್ ಜಾಮೂನ್ ತಯಾರಿಸಿ ಸಂಭ್ರಮಿಸಿ. ಮಾಡೋದು ಹೇಗೆ ಅನ್ನೋದನ್ನು ನಾವು ನಿಮಗೆ ತಿಳಿಸುತ್ತೇವೆ…

ಬೇಕಾಗುವ ಸಾಮಗ್ರಿಗಳು : ಬ್ರೆಡ್ ಪೀಸ್ ಗಳು – 8, ಮೈದಾ ಹಿಟ್ಟು – 4 ಚಮಚ, ತುಪ್ಪ- 1 ಚಮಚ, ಎಣ್ಣೆ – ಕರಿಯಲು,ಸಕ್ಕರೆ – 2 ಲೋಟ, ಏಲಕ್ಕಿ ಪುಡಿ

ತಯಾರಿಸುವ ವಿಧಾನ:
ಮೊದಲಿಗೆ ಬ್ರೆಡ್ ನ ಬಿಳಿಭಾಗವನ್ನು ಮಾತ್ರ ಕತ್ತರಿಸಿಕೊಂಡು ಅದನ್ನು ನೀರಿನಲ್ಲಿ ಅದ್ದಿ ತೆಗೆದು ಬೌಲ್ ಗೆ ಹಾಕಬೇಕು. ಹಾಕಿ.
ನಂತರ ಇದಕ್ಕೆ ಮೈದಾ ಹಿಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಸರಿಯಾಗಿ ಉಂಡೆಯಾಗಲು ಬೇಕಾದಷ್ಟು ಮೈದಾ ಹಾಕಿ. ಹೆಚ್ಚು ಹಾಕಬೇಡಿ.
ನಂತರ ತುಪ್ಪ ಹಾಕಿ ಪುನಃ ಚೆನ್ನಾಗಿ ನಾದಿಕೊಂಡು ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಇಟ್ಟುಕೊಳ್ಳಿ.
ಈಗ ಜಾಮೂನ್ ನ್ನು ಕಾದ ಎಣ್ಣೆಯಲ್ಲಿ ಹೊಂಬಣ್ಣಕ್ಕೆ ಕರಿದುಕೊಳ್ಳಬೇಕು.
ಇನೊಂದೆಡೆ ಪಾತ್ರೆಯಲ್ಲಿ ನೀರು, ಸಕ್ಕರೆ ಮತ್ತು ಏಲಕ್ಕಿ ಹಾಕಿ ಪಾಕ ತಯಾರು ಮಾಡಿಕೊಳ್ಳಿ.
ಪಾಕ ತಣ್ಣಗಾದ ಬಳಿಕ ಕರಿದುಕೊಂಡ ಜಾಮೂನ್ ಗಳನ್ನು ಇದಕ್ಕೆ ಹಾಕಿ ನೆನೆಯಲು ಬಿಡಿ.
ಈಗ ರುಚಿಕರವಾದ ಬ್ರೆಡ್ ಜಾಮೂನ್ ಸವಿಯಲು ಸಿದ್ಧ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions