ಸುಭಾಷಿತ :

Saturday, October 19 , 2019 4:33 PM

ಪಶ್ಚಿಮ ಬಂಗಾಳದಲ್ಲಿ ಪತ್ನಿ ಎದುರಲ್ಲೇ ಬಿಜೆಪಿ ಮುಖಂಡನ ಬರ್ಬರ ಹತ್ಯೆ!


Sunday, October 13th, 2019 8:07 am

ನಾಡಿಯಾ : ಪಶ್ಚಿಮ ಬಂಗಾಳದಲ್ಲಿ ದುಷ್ಕರ್ಮಿಗಳ ಅಟ್ಟಹಾಸ ಮುಂದುವರೆದಿದ್ದು, ಪತ್ನಿ ಎದುರಲ್ಲೇ ಸ್ಥಳೀಯ ಬಿಜೆಪಿ ಮುಖಂಡನನ್ನು ಗುಂಡಿಟ್ಟು ಕೊಂದಿರುವ ಘಟನೆ ನಾಡಿಯ ಜಿಲ್ಲೆಯಲ್ಲಿ ನಡೆದಿದೆ.

ಹರಾಲ ದೆಬ್ ನಾಥ್ (55) ಕೊಲೆಯಾದ ಬಿಜೆಪಿ ಮುಖಂಡ, ಶುಕ್ರವಾರ ರಾತ್ರಿ ದೆಬ್ ನಾಥ್ ತಮ್ಮ ಪತ್ನಿಜೊತೆ ದಿನಸಿ ಅಂಗಡಿಯಲ್ಲಿದ್ದ ವೇಳೆ ರಾತ್ರಿ 10 ಗಂಟೆ ಸುಮಾರಿಗೆ ಇಬ್ಬರು ವ್ಯಕ್ತಿಗಳು ತಿನಿಸು ಖರೀದಿಸಲು ಅಂಗಡಿಗೆ ಬಂದಿದ್ದರು. ತಿನಿಸುಗಳನ್ನು ನೀಡಿ ದೆಬ್ ನಾಥ್ ಅಂಗಡಿಯಿಂದ ಹೊರಗೆ ಬರುತ್ತಿದ್ದಂತೆ ಗುಂಡಿನ ದಾಳಿ ನಡೆಸಿದ್ದಾರೆ.

ಗುಂಡೇಟಿನಿಂದ ಸ್ಥಳದಲ್ಲೇ ಪತ್ನಿ ಎದುರಲ್ಲೇ ಬಿಜೆಪಿ ಮುಖಂಡ ಸಾವನ್ನಪ್ಪಿದ್ದು, ಈ ಕೃತ್ಯದಲ್ಲಿ ತೃಣಮೂಲ ಕಾಂಗ್ರೆಸ್ ಕೈವಾಡವಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಮನೋಬೇಂದ್ರ ರಾಯ್ ಗಂಭೀರ ಆರೋಪ ಮಾಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions