ಸುಭಾಷಿತ :

Thursday, January 23 , 2020 5:58 PM

‘ಹ್ಯಾಪಿ ಮೂಡ್’ ನಲ್ಲಿ ಬಿಜೆಪಿ ನಾಯಕರು : ರೆಸಾರ್ಟ್ ನಲ್ಲಿ ಜೋರಾಗಿತ್ತು ‘ಬಿಂಕದ ಸಿಂಗಾರಿ’ ಹಾಡಿನ ಸದ್ದು..!


Wednesday, July 17th, 2019 9:42 pm

ಬೆಂಗಳೂರು  : ರಾಜ್ಯ ರಾಜಕೀಯ ಕಣದಲ್ಲಿ ಅಲ್ಲೋಲ ಕಲ್ಲೋಲ ಶುರುವಾಗಿದೆ. ಮೈತ್ರಿ ಪಕ್ಷಗಳು ಸರ್ಕಾರವನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಯೋಚಿಸುತ್ತಿದ್ದರೆ. ಇತ್ತ ಬಿಜೆಪಿ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರುವ ತವಕದಲ್ಲಿದೆ.

ಇನ್ನೂ ಇಂದು ಸುಪ್ರೀಂ ಕೋರ್ಟ್ ಕೂಡ ಅತೃಪ್ತರ ಶಾಸಕರ ವಿಚಾರವಾಗಿ ತೀರ್ಪು ನೀಡಿರುವ ಬೆನ್ನಲ್ಲೇ ಎಲ್ಲಾ ನಾಯಕರು ಫುಲ್ ಹ್ಯಾಪಿ ಆಗಿದ್ದಾರೆ.

ಬಿಜೆಪಿ ಎಲ್ಲಾ ಶಾಸಕರು ಕೂಡ ರಮಡ ರೆಸಾರ್ಟ್ ನಲ್ಲಿ ತಂಗಿದ್ದು, ರೆಸಾರ್ಟ್ ನಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ. ಬಿಂಕದ ಸಿಂಗಾರಿ ಮೈ ಡೊಂಕಿನ ವೈಯ್ಯಾರಿ ಹಾಡು ಕೇಳಿಬರುತ್ತಿದೆ.

ಯೆಸ್, ಫುಲ್ ಜೋರು ಸೌಂಡ್ ನಲ್ಲಿ ರಮಡ ರೆಸಾರ್ಟ್ ನಲ್ಲಿ ಶಾಸಕರಿಗಾಗಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯಲಹಂಕ ಶಾಸಕ ಎಸ್. ಆರ್ ವಿಶ್ವನಾಥ್ ಕಾರ್ಯಕ್ರಮ ಆಯೋಜಿಸಿದ್ದು, ರೆಸಾರ್ಟ್ ನಿಂದ ಒಂದು ಕಿಮೀ ದೂರದವರೆಗೂ ಬಿಂಕದ ಸಿಂಗಾರಿ ಹಾಡಿನ ಸದ್ದು ಕೇಳಿಸುತ್ತಿದೆ.   ಕನ್ನಡದ ಹಳೇ ಹಾಡುಗಳನ್ನು ಹಾಡಿಸುತ್ತ ಬಿಜೆಪಿ ನಾಯಕರು ಫುಲ್ ಖುಷ್ ಆಗಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions