ಬಿಜೆಪಿ ಅಪ್ರಪ್ರಚಾರದಿಂದ ನನಗೆ ಸೋಲಾಗಿದೆ : ಮಾಜಿ ಸಚಿವ ರಮಾನಾಥ್ ರೈ


Thursday, June 14th, 2018 2:22 pm

ಮಂಗಳೂರು: ಆರ್.ಎಸ್.ಎಸ್ ಮುಖಂಡ ಪ್ರಭಾಕರ್ ಭಟ್ ನೇತೃತ್ವದ ಕಲ್ಕಡ್ಕ ಶಾಲೆಯ ಮಕ್ಕಳ ಅನ್ನ ಕಸಿದಿದ್ದಾಗಿ ನನ್ನ ಮೇಲೆ ಗೂಬೆ ಕೂರಿಸಿದ್ರು. ಶಾಲಾ ಮಕ್ಕಳನ್ನು ಬೀದಿಯಲ್ಲಿ ನಿಲ್ಲಿಸಿ ನನ್ನ ವಿರುದ್ದ ಎತ್ತಿ ಕಟ್ಟುವ ಕೆಲಸ ಮಾಡಿದ್ದರು. ಈಗ ಅವರೇ ಬಿಸಿಯೂಟ ಕೇಳಿದ್ದಾರೆ. ಇಲಾಖೆ ಕೊಡ್ತಾ ಇದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಮಂಗಳೂರಲ್ಲಿರೋ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದ ಬಿಸಿಯೂಟ ನೀಡುವ ವ್ಯವಸ್ಥೆ ಇದೆ. ಹೀಗಾಗಿ ಅಂದು ನಾವು ಬಿಸಿಯೂಟ ಕೊಡ್ತೀವಿ ಅಂದ್ರೂ ಅವರು ಬೇಡ ಎಂದಿದ್ದರು. ಈಗ ಅವರೇ ಬಿಸಿಯೂಟ ಬೇಕೆಂದು ಕೇಳಿದ್ದಾರೆ. ಅಕ್ಷರ ದಾಸೋಹ ಇಲಾಖೆ ಇದಕ್ಕೆ ಒಪ್ಪಿದೆ. ಆದರೆ ಇದ್ರ ಬಗ್ಗೆ ಈಗ ಯಾರೂ ಮಾತನಾಡುತ್ತಿಲ್ಲ ಯಾಕೆ..? ಎಂದು ರಮಾನಾಥ ರೈ ಪ್ರಶ್ನಿಸಿದರು.

ಇನ್ನು ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಸಾವಿನ ವಿಚಾರದಲ್ಲಿ ಬಿಜೆಪಿಯವ್ರು ನನ್ನ ವಿರುದ್ದ ಅಪಪ್ರಚಾರ ಮಾಡಿದ್ರು. ಈ ವಿಚಾರದಲ್ಲಿ ನಾನು ಕೇರಳದ ಕಾನತ್ತೂರು ದೈವಸ್ಥಾನಕ್ಕೆ ಹೋಗಿ ಬೇಡಿಕೊಂಡಿದ್ದನ್ನು ತಮಾಷೆ ಮಾಡುತ್ತಿದ್ದಾರೆ ಎಂದು  ಮಾಜಿ ಸಚಿವ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಎಸ್ ಡಿಪಿಐ ಜೊತೆಗೆ  ನಾನಾಗಲೀ, ಕಾಂಗ್ರೆಸ್ , ಎಸ್ ಡಿಪಿಐ ಜೊತೆಗೆ ಒಳಒಪ್ಪಂದ ಮಾಡಿಲ್ಲ. ಇದು ಸತ್ಯಕ್ಕೆ ದೂರವಾದ ಮಾತು ಎಂದ ಅವರು ಚುನಾವಣೆ ವೇಳೆ ಬಿಜೆಪಿಯಿಂದ ನನ್ನ ವಿರುದ್ಧ ಕರಪತ್ರ ಹಂಚಿ ಅಪಪ್ರಚಾರ ನಡೆಯಿತು‌‌. ಅಪಪ್ರಚಾರದಿಂದ ನನಗೆ ಚುನಾವಣೆ ಸೋಲಾಯಿತು ಎಂದರು.

ಇನ್ನು ಮೊನ್ನೆ ಹಾಡಹಗಲೇ ಬಿಸಿರೋಡ್ ನಲ್ಲಿ ನಡೆದ ತಲ್ವಾರು ಕಾಳಗ ಪ್ರಕರಣದಲ್ಲಿ ತಲ್ವಾರು ಹಿಡಿದು ಹಲ್ಲೆ ಮಾಡಿದ ಸುರೇಂದ್ರ ನನ್ನ ಬಂಟನಲ್ಲ. ಸುಖಾಸುಮ್ಮನೇ ನನ್ನ ಹೆಸರು ಬಳಸಿ ಅಪಪ್ರಚಾರ ಮಾಡಲಾಗಿದೆ. ಇದರ ಹಿಂದೆ ಕುತಂತ್ರ ಇದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions