ಸುಭಾಷಿತ :

Sunday, January 26 , 2020 4:18 AM

ಮಂಗಳೂರು ಸ್ಪೆಷಲ್ ಬಿಸ್ಕೆಟ್ ರೊಟ್ಟಿ


Wednesday, July 17th, 2019 11:49 am

ಸ್ಪೆಷಲ್ ಡೆಸ್ಕ್ : ಉತ್ತರ ಭಾರತದಲ್ಲಿ ಕಚೋರಿ ಎಂಬ ತಿನಿಸಿನ ಬಗ್ಗೆ ಕೇಳಿರುತ್ತೀರಿ. ಅದೇ ರೀತಿ ತಯಾರಿಸಲಾಗುವ ಒಂದು ವಿಶೇಷ ತಿನಿಸು ಬಿಸ್ಕೆಟ್ ರೊಟ್ಟಿ . ಇದನ್ನು ವಿಶೇಷವಾಗಿ ಮಂಗಳೂರಿನಲ್ಲಿ ತಯಾರಿಸುತ್ತಾರೆ. ಇದನ್ನು ಮಾಡೋದು ಹೇಗೆ? ಸಿಂಪಲ್ ರೆಸಿಪಿ ಇಲ್ಲಿದೆ ನೋಡಿ…

ಬೇಕಾಗುವ ಸಾಮಗ್ರಿಗಳು: ಮೈದಾ – 1 ಕಪ್, ತುಪ್ಪ – 1/4 ಕಪ್, ರವೆ – 6 ಚಮಚ , ಉಪ್ಪು – ರುಚಿಗೆ, ಎಣ್ಣೆ – ಕರಿಯಲು, ಎಣ್ಣೆ – 2 ಚಮಚ , ಜೀರಿಗೆ – 2 ಚಮಚ, ಕಾಯಿ ತುರಿ – ಸ್ವಲ್ಪ ಸಾಸಿವೆ – 1 ಚಮಚ, ಇಂಗು – 1/4 ಚಮಚ, ಉಪ್ಪು – ರುಚಿಗೆ, ಖಾರದ ಪುಡಿ – 2 ಚಮಚ, ಚಿಟಿಕೆ ಉಪ್ಪು.

ತಯಾರಿಸುವ ವಿಧಾನ:
ಒಂದು ಪಾತ್ರೆಯಲ್ಲಿ ಮೈದಾ, ರವೆ ಮತ್ತು 3 ಚಮಚ ತುಪ್ಪ, ಸ್ವಲ್ಪ ಉಪ್ಪು ಸೇರಿಸಿ ಬೇಕಾದಷ್ಟು ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ನಾದಿ ಒಂದು ಗಂಟೆ ಹಾಗೆ ಬಿಡಿ.
ಹೂರಣಕ್ಕಾಗಿ ಮೊದಲಿಗೆ ಸಣ್ಣ ಉರಿಯಲ್ಲಿ ಬಾಣಲೆಯನ್ನು ಸ್ಟೌ ಮೇಲಿಡಿ. ಅದಕ್ಕೆ 2 ಚಮಚ ಎಣ್ಣೆ ಹಾಕಿ.
ಸ್ವಲ್ಪ ಕಾದ ನಂತರ ಅದಕ್ಕೆ 1 ಚಮಚ ಸಾಸಿವೆ, 2 ಚಮಚ ಜೀರಿಗೆ ಹಾಕಿ ಸಾಸಿವೆ ಸಿಡಿದಾಗ 1/4 ಚಮಚ ಇಂಗು ಮತ್ತು 2 ಚಮಚ ಖಾರದ ಪುಡಿ ಸೇರಿಸಿ.
ನಂತರ ಅದಕ್ಕೆ ಕಾಯಿತುರಿ ಮತ್ತು 4 ಚಮಚ ರವೆಯನ್ನು ಸೇರಿಸಿ 2 ನಿಮಿಷ ಹುರಿದು ನಂತರ ಸ್ಟೌ ಆಫ್ ಮಾಡಿ. ಈ ಮಿಶ್ರಣವು ತಣ್ಣಗಾದ ಮೇಲೆ ಇದಕ್ಕೆ 1/4 ಕಪ್ ಸಕ್ಕರೆಯನ್ನು ಸೇರಿಸಿ.
ಇದಾದ ನಂತರ ಕಲಸಿಟ್ಟ ಸಣ್ಣ ಉಂಡೆ ಮಾಡಿ ಚಿಕ್ಕ ಪೂರಿಯ ಗಾತ್ರಕ್ಕೆ ಲಟ್ಟಿಸಿಕೊಂಡು ಅದರ ಒಳಗೆ ಹೂರಣವನ್ನು ತುಂಬಿ ಇನ್ನೊಮ್ಮೆ ಲಟ್ಟಿಸಿ ಕಾದ ಎಣ್ಣೆಯಲ್ಲಿ ಕರಿದರೆ ಬಿಸ್ಕೆಟ್ ರೊಟ್ಟಿ ರೆಡಿಯಾಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions