ಸುಭಾಷಿತ :

Friday, November 22 , 2019 6:49 AM

ಭರಾಟೆ: ಮಾಸ್ ಕಥೆಗೂ ಆಯುರ್ವೇದಕ್ಕೂ ಯಾವ ಸಂಬಂಧ?


Thursday, October 17th, 2019 10:27 pm

ಹೊಸತೇನನ್ನೋ ಸೃಷ್ಟಿ ಮಾಡೋ ಹಂಬನಲ ಮತ್ತು ಪ್ರತಿಯೊಂದನ್ನೂ ಹೊಸ ದೃಷ್ಟಿಕೋನದಿಂದಲೇ ನೋಡುವ ತಾಕತ್ತಿರುವ ನಿರ್ದೇಶಕರು ಯಾವಾಗಲೂ ಬೆರಗಾಗುವಂಥಾ ದೃಷ್ಯ ಕಾವ್ಯಗಳನ್ನು ಸೃಷ್ಟಿಸುತ್ತಾರೆ. ಅಂಥಾ ಹೊಸತನವಿಲ್ಲದೇ ಹೋಗಿದ್ದರೆ ನಿರ್ದೇಶಕ ಚೇತನ್ ಕುಮಾರ್ ಬಹದ್ದೂರ್ ಮತ್ತು ಭರ್ಜರಿ ಚಿತ್ರಗಳ ಮೂಲಕ ಸರಣಿ ಗೆಲುವು ಕಾಣೋದು ಸಾಧ್ಯವಾಗುತ್ತಿರಲಿಲ್ಲ. ಅವರು ತಮ್ಮ ಮೂರನೇ ಚಿತ್ರವಾದ ಭರಾಟೆಯನ್ನಂತೂ ಎಲ್ಲರಿಗೂ ಸರ್‌ಪ್ರೈಸ್‌ನಂಥಾ ರೀತಿಯಲ್ಲಿ, ಕನ್ನಡದ ಪಾಲಿಗೆ ತೀರಾ ಹೊಸತಾದ ಕಥೆಯ ಮೂಲಕ ರೂಪಿಸಿದ್ದಾರೆಂಬ ಸ್ಪಷ್ಟ ಸುಳಿವು ಥಿಯೇಟ್ರಿಕಲ್ ಟ್ರೇಲರ್ ಮೂಲಕವೇ ಬಯಲಾಗಿದೆ.

ಈ ಟ್ರೇಲರ್‌ನಲ್ಲಿ ಭಾರತದ ಪುರಾತನ ಆಯುರ್ವೇದ ಔಷಧ ಪದ್ಧತಿಯ ಉಲ್ಲೇಖವಿದೆ. ಹಾಗಾದರೆ ಈ ಮಾಸ್ ಕಥೆಗೂ ಆಯುರ್ವೇದಕ್ಕೂ ಯಾವ ಸಂಬಂಧವೆಂಬ ಕುತೂಹಲ ಎಲ್ಲರಲ್ಲಿಯೂ ಮಡುಗಟ್ಟಿಕೊಂಡಿದೆ. ಇದುವೇ ಈ ಸಿನಿಮಾದ ಮುಖ್ಯ ಸೀಕ್ರೆಟ್. ಇದು ಪ್ರೇಕ್ಷಕರನ್ನು ತಾನೇ ತಾನಾಗಿ ಚಿತ್ರಮಂದಿರದತ್ತ ಕೈ ಹಿಡಿದು ಕರೆತರುವಷ್ಟು ಶಕ್ತವಾಗಿರೋದು ಸುಳ್ಳಲ್ಲ.

ಈ ಆಯುರ್ವೇದ ಔಷಧ ಪದ್ಧತಿಯ ಉಲ್ಲೇಖವೇ ಇದರಲ್ಲಿ ಔಷಧ ಮಾಫಿಯಾದ ಕಥೆ ಇದೆಯಾ ಎಂಬುದರ ಸುತ್ತ ಚರ್ಚೆಯನ್ನೂ ಕೂಡಾ ಹುಟ್ಟು ಹಾಕಿದೆ. ಆಯುರ್ವೇದ ನಮ್ಮ ಪುರಾತನ ಮತ್ತು ಪರಿಣಾಮಕಾರಿಯಾದ ಔಷಧ ಪದ್ಧತಿಯಾದರೂ ಅದು ಇತರೇ ಔಷಧಿಗಳ ಭರಾಟೆಯಲ್ಲಿ ಮಂಕಾದಂತಿದೆ. ಒಂದು ವಿಜೃಂಭಿಸಲು ಮತ್ತೊಂದನಮ್ನು ಹಣಿಯುವುದು ಮಾರುಕಟ್ಟೆಯ ತಂತ್ರ. ಇಂಥಾ ಔಷಧ ಮಾಫಿಯಾದ ರೋಚಕ ಕಥೆ ಇದರಲ್ಲಿದ್ದರೂ ಅಚ್ಚರಿ ಪಡಬೇಕಾಗಿಲ್ಲ. ಆದರೆ ಅದೂ ಸೇರಿದಂತೆ ಯಾವ ಕಥೆಯೇ ಇದ್ದರೂ ಚೇತನ್ ಕುಮಾರ್ ಅಚ್ಚರಿದಾಯಕವಾಗಿಯೇ ಕಟ್ಟಿ ಕೊಟ್ಟಿದ್ದಾರೆಂಬುದೂ ಕೂಡಾ ಸ್ಪಷ್ಟ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions