ಮನಸಾರೆ ನಕ್ಕು ಬಿಡಿ ಸಾಕು, ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ


Wednesday, July 11th, 2018 5:08 pm

ಸ್ಪೆಷಲ್ ಡೆಸ್ಕ್ : ನಗು ಎಲ್ಲಾದಕ್ಕಿಂತ ಉತ್ತಮವಾದ ನಮ್ಮೊಳಗಡೆ ಇರುವಂತಹ ಒಂದು ಔಷಧವಾಗಿದೆ. ಅದೇನೇ ಕಷ್ಟ ಇರಲಿ, ನೋವು ಇರಲಿ ಮನಸಾರೆ ನಕ್ಕರೆ ಸಾಕು ಎಲ್ಲಾ ಸಮಸ್ಯೆಗಳು ಇನ್ನಿಲ್ಲದಂತೆ ಮಾಯವಾಗುತ್ತವೆ. ಅದಕ್ಕೆ ನಾವು ಹೇಳೋದು ಮುಖ ಸಣ್ಣ ಮಾಡಿ ಕೂರಬೇಡಿ ಬದಲಾಗಿ ಮನಸಾರೆ ನಕ್ಕು ಬಿಡಿ.

ಅದ್ದಕ್ಕಾಗಿ ನೀವು ಲಾಫ್ಟರ್ ಕ್ಲಬ್ ಗೆ ಹೋಗಬೇಕಾಗಿ ಇಲ್ಲ. ದಿನಪತ್ರಿಕೆಯಲ್ಲಿ ಬರುವಂತಹ ಹನಿ, ಕಾಮಿಡಿ ಶೋಗಳನ್ನು ನೋಡಿ ಪ್ರತಿದಿನ ನಕ್ಕರೆ ಸಾಕು. ದೇಹಕ್ಕೂ ಆರಾಮ ಹಾಗು ಮನಸಿಗೂ ಆರಾಮ ಸಿಗುತ್ತದೆ. ನಕ್ಕರೆ ಅದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ..

ನೀವು ಹೆಚ್ಚು ಹೆಚ್ಚು ನಗುತ್ತಿದ್ದರೆ ರಕ್ತದ ಒತ್ತಡ ಕಡಿಮೆಯಾಗುತ್ತದೆ. ಅಲ್ಲದೆ ಹಾರ್ಟ್ ಅಟ್ಯಾಕ್ ಮೊದಲಾದ ಸಮಸ್ಯೆಗಳು ನಿಮ್ಮತ್ತ ಬರಲು ಹೆದರುತ್ತವೆ.
ತುಂಬಾ ಒತ್ತಡದಲ್ಲಿದ್ದರೆ ನಗುವೆಂಬ ಔಷಧಿ ನಿಮ್ಮ ಚಿಂತೆಯನ್ನು ದೂರ ಮಾಡಿ ಮನಸ್ಸು ಹಗುರಾಗುವಂತೆ ಮಾಡುತ್ತದೆ.
ನೀವು ನಗುವಾಗ ಮಸಲ್ಸ್ ಮತ್ತು ಹೊಟ್ಟೆ ಎಕ್ಸ್ ಪಾಂಡ್ ಆಗುತ್ತದೆ. ಇದರಿಂದ ಪರ್ಫೆಕ್ಟ್ ಅಬ್ಸ್ ಬೆಳೆಯಲು ಸಾಧ್ಯವಾಗುತ್ತದೆ.
ನಿಮಗೆ ಪ್ರತಿದಿನ ಶಾರೀರಿಕ ವ್ಯಾಯಾಮ ಮಾಡಲು ಸಾಧ್ಯವಾಗುವುದಿಲ್ಲವೇ? ಹಾಗಿದ್ದರೆ ಪ್ರತಿದಿನ ಹೊಟ್ಟೆ ನೋವು ಆಗುವಷ್ಟು ನಕ್ಕು ಬಿಡಿ. ಇದರಿಂದ ದೇಹಕ್ಕೆ ವ್ಯಾಯಾಮ ದೊರೆತಂತಾಗುತ್ತದೆ.
ನಿಮ್ಮ ಇಮ್ಯೂನ್ ಸಿಸ್ಟಮ್ ಸ್ಟ್ರಾಂಗ್ ಆಗುವಂತೆ ಮಾಡಿ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
ಎಂಡೋರ್ಫಿನ್ ಎಂದರೆ ದೇಹದಲ್ಲಿರುವ ನ್ಯಾಚುರಲ್ ನೋವು ನಿವಾರಕಗಳು. ನೀವು ಜೋರಾಗಿ ನಕ್ಕರೆ ದೇಹದಿಂದ ಎಂಡೋರ್ಫಿನ್ ಬಿಡುಗಡೆಯಾಗುತ್ತದೆ. ಇದರಿಂದ ಗಾಯವಾದರೂ ನಿಮಗೆ ನೋವು ಆಗದೆ ಇರಬಹುದು.
ನೀವು ಆರಾಮವಾಗಿ ನೆಮ್ಮದಿಯ ಬದುಕು ಬಾಳಲು ನಗು ಸಹಾಯಕವಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions