ಬೆಲ್ಲದ ಈ ವಿಶೇಷ ಗುಣ ತಿಳಿದ್ರೆ ಶಾಕ್ ಆಗ್ತೀರಿ…


Sunday, October 7th, 2018 12:39 pm

ಸ್ಪೆಷಲ್ ಡೆಸ್ಕ್ : ಬೆಲ್ಲವನ್ನು ಅಡುಗೆಯಲ್ಲಿ, ಸ್ವೀಟ್ ಮಾಡಲು ಬಳಕೆ ಮಾಡಲಾಗುತ್ತದೆ. ಸಕ್ಕರೆ ಬದಲು ಬೆಲ್ಲ ಬಳಕೆ ಮಾಡಿದರೆ ಆರೋಗ್ಯದಲ್ಲಿ ನಾವು ಅದೆಷ್ಟು ಸುಧಾರಣೆಗಳನ್ನು ತರಬಹುದು ಎಂಬುದರ ಬಗ್ಗೆ ನಾವು ಈಗಾಗಲೇ ಹಲವಾರು ವಿಷಯಗಳನ್ನು ತಿಳಿದಿದ್ದೇವೆ. ಇದೀಗ ಬೆಲ್ಲದಿಂದ ಸೌಂದರ್ಯ ಹೆಚ್ಚಿಸುವುದರ ಬಗ್ಗೆ ತಿಳಿಯೋಣ..

ಬೆಲ್ಲದಲ್ಲಿ ಆ್ಯಂಟಿ ಆಕ್ಸಿಡೆಂಟ್‌ ಹೆಚ್ಚಾಗಿರುತ್ತದೆ. ಪ್ರತಿದಿನ ಬೆಲ್ಲ ಸೇವನೆ ಮಾಡಿದರೆ ಸುಕ್ಕು ನಿವಾರಣೆಯಾಗುತ್ತದೆ. ವಯಸ್ಸು ಸಹ ಯಂಗ್‌ ಆದಂತೆ ಕಾಣಿಸುತ್ತದೆ.
ಬೆಲ್ಲ ಕೂದಲು ದಪ್ಪವಾಗಿ ಹಾಗೂ ಸುಂದರವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಬೆಲ್ಲದಲ್ಲಿ ಮುಲ್ತಾನಿ ಮಿಟ್ಟಿ, ಮೊಸರು ಮತ್ತು ನೀರು ಹಾಕಿ ಪ್ಯಾಕ್‌ ಮಾಡಿ. ಈ ಪ್ಯಾಕ್‌ನ್ನು ಕೂದಲು ತೊಳೆಯುವ ಒಂದು ಗಂಟೆ ಮೊದಲು ತಲೆಗೆ ಹಾಕಿ. ನಂತರ ವಾಶ್‌ ಮಾಡಿ.
ಉಗುರು ಬಿಸಿ ನೀರು ಅಥವಾ ಚಹಾದಲ್ಲಿ ಸಕ್ಕರೆ ಬದಲು ಬೆಲ್ಲ ಹಾಕಿ ಸೇವನೆ ಮಾಡಿ. ಇದರಿಂದ ಕ್ಲಿಯರ್ ಸ್ಕಿನ್ ನಿಮ್ಮದಾಗುತ್ತದೆ.
ಬೆಲ್ಲಕ್ಕೆ ಒಂದು ಚಮಚ ಟೋಮ್ಯಾಟೊ ರಸ, ನಿಂಬೆ ರಸ, ಗ್ರೀನ್‌ ಟೀ ಬೆರೆಸಿ ಮುಖಕ್ಕೆ ಹಚ್ಚಿ. 15 ನಿಮಿಷದ ನಂತರ ತೊಳೆಯಿರಿ. ಇದರಿಂದ ಪಿಂಪಲ್ ಮತ್ತು ಕಪ್ಪು ಕಲೆ ನಿವಾರಣೆಯಾಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions