ಬೆಂಡೆಕಾಯಿಯಿಂದ ಕೂದಲು ಸೊಂಪಾಗಿ ಬೆಳೆಯಲು ಸಾಧ್ಯ ಅನ್ನೋದು ಗೊತ್ತಾ?


Friday, December 14th, 2018 1:42 pm

ಸ್ಪೆಷಲ್ ಡೆಸ್ಕ್ : ಬೆಂಡೆಕಾಯಿಯನ್ನು ಆಹಾರದಲ್ಲಿ ಸಾರು , ಪಲ್ಯ ಮಾಡಲು ಬಳಕೆ ಮಾಡುತ್ತಾರೆ. ಆದರೆ ಇದರಿಂದ ಕೂದಲು ಮತ್ತು ಸ್ಕಿನ್ ಗೂ ಉಪಯೋಗವಿದೆ ಅನ್ನೋದನ್ನ ನೀವು ತಿಳಿದುಕೊಂಡರೆ, ಸುಲಭವಾಗಿ ಮನೆಯಲ್ಲಿಯೇ ಬ್ಯೂಟಿ ಟ್ರಿಕ್ಸ್ ಟ್ರೈ ಮಾಡಬಹುದು.

  • ಬೆಂಡೆಕಾಯಿ ಮಾಸ್ಕ್‌ ಮಾಡಿ ಮುಖಕ್ಕೆ ಹಚ್ಚಿದರೆ ಮುಖದ ಡ್ರೈ ನೆಸ್, ಪಿಂಪಲ್ ಸಮಸ್ಯೆ ನಿವಾರಣೆಯಾಗುತ್ತದೆ.
  • ಮೂವತ್ತು ವರ್ಷ ದಾಟಿದ ಕೂಡಲೇ ಮುಖದ ಮೇಲೆ ಸುಕ್ಕು ಕಾಣಿಸಿಕೊಳ್ಳುತ್ತದೆ. ಅದಕ್ಕಾಗಿ ನೀವೂ ಬೆಂಡೆಕಾಯಿಯನ್ನು ಮಿಕ್ಸಿ ಮಾಡಿ ಆ ಪೇಸ್ಟ್ ನ್ನು ಮುಖಕ್ಕೆ ಹಚ್ಚಿ. ಇದರಿಂದ ಸುಕ್ಕು ನಿವಾರಣೆಯಾಗುತ್ತದೆ.
  • ಬೆಂಡೆಕಾಯಿಯನ್ನು ಕತ್ತರಿಸಿ ನೀರಿನಲ್ಲಿ ಹಾಕಿ ಅರ್ಧ ಗಂಟೆ ಇಡಿ. ನಂತರ ಆ ನೀರಿನಲ್ಲಿ ಕಾಟನ್ ಅದ್ದಿ ಅದನ್ನು ಮುಖದ ಮೇಲೆ ಹಚ್ಚಿದರೆ ಸ್ಕಿನ್ ರಾಶಸ್ ಮತ್ತು ಇನ್‌ಫೆಕ್ಷನ್‌ ಮೊದಲಾದ ಸಮಸ್ಯೆಗಳು ನಿವಾರಣೆಯಾಗುತ್ತವೆ.
  • ನಿಮ್ಮದು ಡ್ರೈ ಸ್ಕಿನ್ ಆಗಿದ್ದರೆ ಬೆಂಡೆಕಾಯಿಯ ಪೇಸ್ಟ್ ಮಾಡಿ ಆ ಜೆಲ್ ನ್ನು ಕೈ ಕಾಲುಗಳಿಗೆ ಹಚ್ಚಿ, ಅದು ಒಣಗಿದ ಮೇಲೆ ಚೆನ್ನಾಗಿ ತೊಳೆಯಿರಿ. ಇದನ್ನು ವಾರದಲ್ಲಿ ಎರಡು ಬಾರಿ ಮಾಡಿದರೆ ಸ್ಕಿನ್ ಸಾಫ್ಟ್ ಆಗುತ್ತದೆ.
  • ಇನ್ನು ಕೂದಲಿನ ಬೆಳವಣಿಗೆಗೆ ಸಹ ಬೆಂಡೆಕಾಯಿ ಸಹಾಯ ಮಾಡುತ್ತದೆ. ಬೆಂಡೆಕಾಯಿಯನ್ನು ಕತ್ತರಿಸಿ ನೀರಿಗೆ ಹಾಕಿ ಕುದಿಸಿ. ತಣ್ಣಗಾದ ನಂತರ ಅದಕ್ಕೆ ನಿಂಬೆರಸ ಮಿಕ್ಸ್‌ ಮಾಡಿ ಶ್ಯಾಂಪೂವಿನ ನಂತರ ಇದರಿಂದ ಕೂದಲು ತೊಳೆಯಿರಿ. ಇದರಿಂದ ಕೂದಲು ಸಾಫ್ಟ್ ಆಗುತ್ತದೆ.
  • ಬೆಂಡೆಕಾಯಿ ಪೇಸ್ಟ್ ನ್ನು ಸ್ಕಾಲ್ಪ್ ಗೆ ಹಚ್ಚಿ ಮಸಾಜ್ ಮಾಡಿದರೆ ರಕ್ತ ಪರಿಚಲನೆ ಚೆನ್ನಾಗಿ ಆಗುತ್ತದೆ. ಇದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions