ಹೀಗೆ ಮಾಡಿದರೆ ಮುಖ ಹೊಳೆಯುತ್ತದೆ ನೋಡಿ…


Wednesday, July 11th, 2018 11:17 am

ಸ್ಪೆಷಲ್ ಡೆಸ್ಕ್ : ಮುಖ ಡಲ್ ಆಗಿರಲು ಮುಖ್ಯ ಕಾರಣ ಮುಖದಲ್ಲಿ ಮೂಡಿರುವ ರಂಧ್ರ. ಇದರಿಂದ ಮುಖ ಕಪ್ಪಾಗಲು ಕಾರಣವಾಗುತ್ತದೆ. ಇದನ್ನು ತಡೆಯಲು ಕೆಲವೊಂದು ಟಿಪ್ಸ್ ಗಳನ್ನ ನಾವು ನಿಮಗೆ ತಿಳಿಸುತ್ತೇವೆ. ಇವುಗಳನ್ನು ನೀವು ಅಳವಡಿಸಿಕೊಂಡರೆ ನಿಮ್ಮ ಮುಖ ಹೊಳೆಯೋದು ಖಂಡಿತಾ.

ಒಂದು ಚಮಚ ಮೊಸರು ಮತ್ತು ಜೇನನ್ನು ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಬಿಟ್ಟು ಬಳಿಕ ತೊಳೆಯಬೇಕು. ಇದು ಬ್ಯಾಕ್ಟೀರಿಯಾವನ್ನು ನಾಶಗೊಳಿಸಿ ಚರ್ಮದ ಸೂಕ್ಷ್ಮ ರಂಧ್ರಗಳು ತೆರೆಯುವಂತೆ ಮಾಡುತ್ತವೆ.

ಎರಡು ಚಮಚ ಸಕ್ಕರೆ ಮತ್ತು ಒಂದು ಚಮಚ ಅಲೀವ್ ಎಣ್ಣೆ ಹಾಗೂ ಕೆಲವು ಹನಿ ಲಿಂಬೆ ರಸವನ್ನು ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಅರ್ಥ ಗಂಟೆಯ ಬಳಿಕ ತಣ್ಣೀರಿನಲ್ಲಿ ತೊಳೆದರೂ ಚರ್ಮ ಮತ್ತೆ ಹೊಳಪು ಪಡೆದುಕೊಳ್ಳುತ್ತದೆ.

ಮೊಟ್ಟೆಯ ಬಿಳಿ ಭಾಗವನ್ನು ಮುಖಕ್ಕೆ ಹಚ್ಚಿ ಟಿಶ್ಯೂ ಪೇಪರ್ ಮೂಲಕ ಅದನ್ನು ಒತ್ತಿ ಇಡಬೇಕು. ಒಣಗಿದ ಬಳಿಕ ಟಿಶ್ಯೂ ಪೇಪರ್ ಅನ್ನು ತೆಗೆಯಬೇಕು. ಪೇಪರ್ ನ ಕೊಳೆಯ ಜೊತೆಗೆ ಮುಖದಲ್ಲಿರುವ ಎಣ್ಣೆಯ ಅಂಶವೂ ನಿವಾರಣೆಯಾಗುತ್ತದೆ. ಆ ಮೂಲಕ ಮುಖವು ಆಕರ್ಷಕವಾಗುತ್ತದೆ.

ಅರಶಿನ ಪುಡಿಗೆ ಬಾದಾಮಿ ಎಣ್ಣೆ ಸೇರಿಸಿ ಮಿಶ್ರಣ ಮಾಡಬೇಕು. ಇದನ್ನು ಮುಖಕ್ಕೆ ಹಚ್ಚಿ ಬೆರಳುಗಳಿಂದ ಚೆನ್ನಾಗಿ ಉಜ್ಜಬೇಕು. ಹದಿನೈದು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದರೆ ಉತ್ತಮ ಫಲಿತಾಂಶ ಸಿಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Gadgets
State
Astrology
Cricket Score
Poll Questions