ಸುಭಾಷಿತ :

Thursday, January 23 , 2020 5:58 PM

ಈ ಬ್ಯೂಟಿ ಟ್ರಿಕ್ಸ್ ತಿಳಿದಿದ್ರೆ ಪಾರ್ಲರ್ ಗೆ ಹೋಗೋ ಅವಶ್ಯಕತೆಯೇ ಇಲ್ಲ…


Tuesday, June 18th, 2019 2:02 pm

ಸ್ಪೆಷಲ್ ಡೆಸ್ಕ್ : ತ್ವಚೆಗೆ ಸಂಬಂಧಿಸಿದ ಏನೇ ಸಮಸ್ಯೆ ಬಂದರೂ ಸಹ ಬ್ಯೂಟಿ ಪಾರ್ಲರ್ ಗೆ ಓಡಿ ಹೋಗುತ್ತೇವೆ. ಆದರೆ ಇಲ್ಲಿ ಒಂದಿಷ್ಟು ಟಿಪ್ಸ್ ನೀಡಲಾಗಿದೆ. ಈ ನ್ಯಾಚುರಲ್ ಟಿಪ್ಸ್ ಟ್ರೈ ಮಾಡಿದರೆ ಪಾರ್ಲರ್ ಗೆ ಹೋಗುವ ಅವಶ್ಯಕತೆಯೇ ಇರೋದಿಲ್ಲ ನೋಡಿ..

ಚಮಚ ಹನಿ, ಒಂದು ಚಮಚ ಲಿಂಬೆ ರಸವನ್ನು ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಬಳಿಕ ತೊಳೆದುಕೊಳ್ಳಿ. ಇವು ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತವೆ. ಕೆಲವೇ ನಿಮಿಷಗಳಲ್ಲಿ ಹೆಚ್ಚು ಖರ್ಚಿಲ್ಲದೆ ಮುಖ ಹೊಳೆಯುವಂತೆ ಮಾಡುತ್ತದೆ.

ಒಂದು ಟೊಮೆಟೋ ತುಂಡನ್ನು 15 ನಿಮಿಷಗಳ ಕಾಲ ಮುಖದ ಮೇಲೆ ಉಜ್ಜಿಕೊಳ್ಳಿ. ಬಳಿಕ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಬೇಕು. ಇದರಲ್ಲಿರುವ ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಗುಣಗಳು ಮುಖ ಹೊಳಪು ಪಡೆಯುವಂತೆ ಮಾಡುತ್ತದೆ.

ಒಂದು ಚಿಕ್ಕ ಪಪ್ಪಾಯಿ ತುಂಡನ್ನು ತೆಗೆದುಕೊಂಡು ಕಿವುಚಿ ಅದಕ್ಕೆ ಒಂದು ಚಮಚ ಜೇನು ಸೇರಿಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಹದಿನೈದು ನಿಮಿಷಗಳ ತೊಳೆದುಕೊಂಡರೆ ನಿಮಗೆ ಬೇಕಾದ ಫಲಿತಾಂಶ ಸಿಗುತ್ತದೆ.

ಎರಡು ಚಮಚ ಅಕ್ಕಿ ಹಿಟ್ಟು ಮತ್ತು ಅದಕ್ಕೆ ತಕ್ಕಷ್ಟು ಹಾಲನ್ನು ಸೇರಿಸಿಕೊಳ್ಳಬೇಕು. ಇದನ್ನು ಪೇಸ್ಟ್ ರೀತಿಯಲ್ಲಿ ಮಾಡಿಕೊಂಡು ಮುಖಕ್ಕೆ ಹಚ್ಚಿ ಬಳಿಕ ತಿಕ್ಕಬೇಕು. ಹತ್ತು ನಿಮಿಷಗಳ ಬಳಿಕ ಉಗುರು ಬಿಸಿ ನೀರಿನಲ್ಲಿ ಮುಖ ತೊಳೆಯಬೇಕು. ಇದು ಮುಖದಲ್ಲಿ ರಕ್ತ ಪರಿಚಲನೆಯನ್ನು ಉತ್ತಮಗೊಳಿಸಿ, ಮುಖದಲ್ಲಿರುವ ಕಪ್ಪು ಕಲೆಗಳನ್ನು ಹೋಗಲಾಡಿಸಿ ಮುಖದ ತ್ವಚೆ ಮೃದು ಮತ್ತು ಸುಂದರವಾಗುವಂತೆ ಮಾಡುತ್ತದೆ.

ಎರಡು ಚಮಚ ಮುಲ್ತಾನಿ ಮಿಟ್ಟಿಯನ್ನು ನಾಲ್ಕು ಚಮಚ ನೀರಿನಲ್ಲಿ ಹತ್ತು ನಿಮಿಷಗಳ ಕಾಲ ನೆನೆಸಬೇಕು. ಬಳಿಕ ಇದನ್ನು ಮುಖಕ್ಕೆ ಲೇಪಿಸಿಕೊಂಡು ಒಣಗಿದ ಮೇಲೆ ತೊಳೆದುಕೊಳ್ಳಬೇಕು. ಒಂದು ಚಮಚ ಸಕ್ಕರೆಗೆ ಕೆಲವು ಹನಿ ಲಿಂಬೆ ರಸವನ್ನು ಮತ್ತು ಆಲೀವ್ ಎಣ್ಣೆಯನ್ನು ಸೇರಿಸಿ ಈ ಮಿಶ್ರಣವನ್ನು ಬೆರಳುಗಳಲ್ಲಿ ತೆಗೆದುಕೊಂಡು ಮುಖದ ಮೇಲೆ ಚೆನ್ನಾಗಿ ಉಜ್ಜಬೇಕು. ಹತ್ತು ನಿಮಿಷಗಳ ಬಳಿಕ ಉಗುರು ಬಿಸಿ ನೀರಿನಲ್ಲಿ ತೊಳೆಯಬೇಕು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions