ಈ ಆಪ್ ಗಳನ್ನ ಬೇಗನೆ ಡಿಲೀಟ್ ಮಾಡಿ… ಇಲ್ಲಾಂದ್ರೆ ನಿಮ್ಮ ಫೋನ್ ಬ್ಯಾಟರಿ ಬೇಗನೆ ಖಾಲಿಯಾಗುತ್ತೆ


Monday, July 9th, 2018 4:34 pm

ಸ್ಪೆಷಲ್ ಡೆಸ್ಕ್ : ಸ್ಮಾರ್ಟ್ ಫೋನ್ ಬಳಕೆ ಮಾಡುವವರ ಒಂದು ಸಾಮಾನ್ಯ ಸಮಸ್ಯೆ ಎಂದರೆ ಅಯ್ಯೋ ಬ್ಯಾಟರಿ ಡೌನ್ ಆಗಿದೆ ಅನ್ನೋದು. ಇದಕ್ಕೆಲ್ಲ ನೀವು ಉಪಯೋಗ ಮಾಡುವಂತಹ ಕೆಲವೊಂದು ಆಪ್ ಗಳು ಕಾರಣವಾಗಿವೆ. ಅವುಗಳನ್ನು ನೀವು ಡಿಲೀಟ್ ಮಾಡಿದರೆ ನಿಮ್ಮ ಫೋನ್ ಬ್ಯಾಟರಿ ತುಂಬಾ ಸಮಯದವರೆಗೆ ಬರುವ ಚಾನ್ಸ್ ಇದೆ.

ಯಾವೆಲ್ಲ ಆಪ್ ಗಳು ಸ್ಮಾರ್ಟ್ ಫೋನ್ ಬ್ಯಾಟರಿ ಬೇಗ ಮುಗುಯುವಂತೆ ಮಾಡುತ್ತದೆ ನೋಡಿ…

ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಕ್ಯಾಂಡಿ ಕ್ರಶ್ ಸಗ ಆಪ್ ಇದ್ದರೆ ಬೇಗನೆ ಡಿಲೀಟ್ ಮಾಡಿ. ಯಾಕಂದ್ರೆ ಹೆಚ್ಚು ಬ್ಯಾಟರಿ ತಿನ್ನುವ ಆಪ್ ಇದಾಗಿದೆ. ಜೊತೆಗೆ ಇದಕ್ಕೆ ಹೆಚ್ಚು ಸ್ಟೋರೇಜ್ ಮತ್ತು ಡಾಟಾ ಕೂಡ ಬೇಕಾಗುತ್ತದೆ.

ಇದಲ್ಲದೆ ಮೆಮೊರಿ ಮತ್ತು ಬ್ಯಾಟರಿಯನ್ನು ಹೆಚ್ಚು ಬಳಕೆ ಮಾಡುವ ಪೆಟ್ ರೆಸ್ಕ್ಯೂ ಸಗ ಮತ್ತು ಕ್ಲಾಶ್ ಆಫ್ ಕ್ಲೆನ್ಸ್ ಇವೆರಡು ಗೇಮ್ಸ್ ಗಳನ್ನೂ ಸಹ ಡಿಲೀಟ್ ಮಾಡಿದರೆ ಉತ್ತಮ.

ಗೂಗಲ್ ಪ್ಲೇ ಗೇಮ್ಸ್ ಇದ್ರೇನು ತೊಂದರೆ ಇದೆ. ಸುಮ್ಮನೆ ಬ್ಯಾಟರಿ ಯಾಕೆ ವೆಸ್ಟ್ ಮಾಡಿಕೊಳ್ಳುತ್ತೀರಿ  ಡಿಲೀಟ್ ಮಾಡಿ ಬಿಡಿ. ಕಡಿಮೆ ಬೆಲೆಗೆ ವಸ್ತುಗಳನ್ನು ತೆಗೆದುಕೊಳ್ಳಲು ಇರಲಿ ಎಂದು ಓಎಲ್ ಎಕ್ಸ್ ಆಪ್ ಡೌನ್ಲೋಡ್ ಮಾಡಿದ್ದೀರಿ ಅಲ್ವಾ. ಅದರಿಂದಲೂ ಹೆಚ್ಚು ಬ್ಯಾಟರಿ ಖರ್ಚಾಗುತ್ತದೆ.

ಇದಲ್ಲದೆ ನೀವು ಪ್ರತಿದಿನ ಬಳಕೆ ಮಾಡುವಂತಹ ಫೇಸ್ ಬುಕ್ ಮತ್ತು ವಾಟ್ಸ್ ಅಪ್ ಮತ್ತು ಅದರ ನೋಟಿಫಿಕೇಷನ್ ನಿಂದಲೂ ಹೆಚ್ಚು ಬ್ಯಾಟರಿ ನಷ್ಟವಾಗುತ್ತದೆ. ನಿಮ್ಮ ಮೊಬೈಲ್ ನ್ನು ವೈರಸ್ ನಿಂದ ಮತ್ತು ಮಾಲ್ ವೇರ್ ನಿಂದ ರಕ್ಷಿಸುವ ಲುಕ್ ಔಟ್ ಸೆಕ್ಯೂರಿಟಿ ಮತ್ತು ಆಂಟಿ ವೈರಸ್ ಆಪ್ ಕೂಡ ಹೆಚ್ಚು ಬ್ಯಾಟರಿ ಉಪಯೋಗಿಸುತ್ತೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions