‘ಐಟಿ ದಾಳಿ’ ಮೆಡಿಕಲ್ ಶಾಪ್ ನಲ್ಲಿ ‘ಸ್ಯಾಂಪಲ್’ ತೆಗೆದುಕೊಂಡಂತೆ : ಬಸವರಾಜ ಹೊರಟ್ಟಿ


Wednesday, April 17th, 2019 8:18 pm

ಉತ್ತರ ಕನ್ನಡ :  ಕೇವಲ ಜೆಡಿಎಸ್ ಕಾಂಗ್ರೆಸ್ ಮುಖಂಡರ ಮನೆ ಮೇಲೆ ಐಟಿ ದಾಳಿ ಮಾಡುವ ಆರೋಪ ಇತ್ತು. ಹಾಗಾಗಿ  ಕೇವಲ ತೋರಿಕೆಗೆ ಮಾತ್ರ ಬಿಜೆಪಿ ಮುಖಂಡರ ಮನೆ ಮೇಲೆ ಐಟಿ ದಾಳಿ ನಡೆಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ತೋರಿಕೆಗೆ ಮಾತ್ರ ಬಿಜೆಪಿ ಮುಖಂಡರ ಮನೆ ಮೇಲೆ ಐಟಿ ದಾಳಿ ನಡೆಸಲಾಗಿದೆ, ಐಟಿ ದಾಳಿ ಮೆಡಿಕಲ್ ಶಾಪ್ ನಲ್ಲಿ ಸ್ಯಾಂಪಲ್ ತೆಗೆದುಕೊಂಡಂತೆ ಎಂದು ಹೊರಟ್ಟಿ ವ್ಯಂಗ್ಯವಾಡಿದ್ದಾರೆ.

 ಅನಂತ್ ಕುಮಾರ ಹೆಗಡೆ ಆಪ್ತರ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು  ‘ಐಟಿ ಇಲಾಖೆ ಕೇಂದ್ರ ಸರ್ಕಾರದ ಹಿಡಿತದಲ್ಲಿದೆ. ಅವರು ಹೇಳಿದಂತೆ ದಾಳಿ ಮಾಡಿದ್ದಾರೆ.  ಬಿಜೆಪಿಯವರಿಗೆ ಮೊದಲೇ ಮಾಹಿತಿ ನೀಡಿ ದಾಳಿ ಮಾಡಲಾಗಿದೆ  ಎಂದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions