ಸುಭಾಷಿತ :

Saturday, October 19 , 2019 4:37 PM

‘RBI’ನಿಂದ ಮಹತ್ವದ ಅಧಿಸೂಚನೆ : ‘ATM’ನಲ್ಲಿ ಡ್ರಾ ಮಾಡಿದಾಗ ಹಣ ಬರದಿದ್ದರೆ ‘ಗ್ರಾಹಕರಿಗೆ ದಿನಕ್ಕೆ ಸಿಗಲಿದೆ 100 ರೂ’!


Sunday, October 13th, 2019 9:03 am

ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚಿಗೆ ಹೊಸ ನಿಯಮವನ್ನು ಬ್ಯಾಂಕ್ ಗ್ರಾಹಕರಿಗಾಗಿ ತಂದಿದೆ. ಅದೇ ಎಟಿಎಂ ಬಳಸಿ ಹಣ ವರ್ಗಾವಣೆ ಮಾಡಿದಾಗ ವರ್ಗಾವಣೆದಾರನ ಖಾತೆಗೆ ಹಣ ಹೋಗದೇ ಇದ್ದದ್ದೇ ಆಗಲಿ, ಹಣ ಡ್ರಾ ಮಾಡಿದಾಗ ಹಣ ಬಾರದೇ ಇದ್ದಂತ ಸಂದರ್ಭದಲ್ಲಿ ಗ್ರಾಹರಕರಿಗೆ ಪರಿಹಾರ ರೂಪದಲ್ಲಿ ರೂ.100 ಹಣ ಜಮೆ ಮಾಡಬೇಕು ಎಂದು ಸೂಚಿಸಿತ್ತು. ಇಂತಹ ಹಣ ಯಾವಾಗ, ಎಷ್ಟು ದಿನಗಳಲ್ಲಿ ಬರಲಿದೆ ಎಂಬ ಬಗ್ಗೆ ಮುಖ್ಯ ಮಾಹಿತಿ ಮುಂದೆ ಓದಿ..

ಗ್ರಾಹಕರೊಬ್ಬರು ಎಟಿಎಂಗೆ ತೆರಳಿ ಬೇರೊಬ್ಬ ಬ್ಯಾಂಕ್ ಗ್ರಾಹಕರ ಖಾತೆಗೆ ಹಣ ಸಂದಾಯ ಮಾಡಿದಾಗ, ಅವರ ಖಾತೆಗೆ ಹಣ ಸಂದಾಯವಾಗದ ಸಂದರ್ಭದಲ್ಲಿ, ಎಟಿಎಂ ಮೂಲಕ ಹಣ ತೆಗೆದಾಗ ಹಣ ಬಾರದೇ ಇದ್ದಂದ ಸಂದರ್ಭದಲ್ಲಿ ಆಗಲೀ, ಗ್ರಾಹಕರು ತೊಂದರೆಗೆ ಸಿಲುಕುತ್ತಿದ್ದರು. ಇಂತಹ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೆಲವೊಮ್ಮ ಬ್ಯಾಂಕ್ ಗಳು ಸರಿಯಾಗಿ ಉತ್ತರ ಕೂಡ ನೀಡುತ್ತಿರಲಿಲ್ಲ.

ಈ ಮೊದಲಾದ ಸಂದರ್ಭಗಳಲ್ಲಿ ಪೇಲ್ ವರ್ಗಾವಣೆಯ ಸಂದರ್ಭಕ್ಕೆ ಹಣ ವರ್ಗಾವಣೆ ಆಗದಂತ ಸನ್ನಿವೇಶಕ್ಕೆ ಬ್ಯಾಂಕ್ ನನ್ನೇ ಗುರಿಯಾಗಿಸಿ, ಆರ್ ಬಿ ಐ ಹೊಸ ನಿಯಮ ಜಾರಿ ಮಾಡಿತ್ತು. ಅದೇ ಪ್ರತಿ ಅನ್ ಸಕ್ಸಸ್ ಪುಲ್ ಟ್ರಾನ್ಸಾಕ್ಷನ್ ಗೆ ರೂ.100 ಪರಿಹಾರವನ್ನು ಬ್ಯಾಂಕ್ ಖಾತೆದಾರನಿಗೆ ಸಂದಾಯ ಮಾಡುವಂತೆ ಸೂಚಿಸಿತ್ತು. ಈ ಮೂಲಕ ಹೊಸ ಬಿಸಿಯನ್ನು ಮುಚ್ಚಿಸಿ, ಬ್ಯಾಂಕ್ ಗ್ರಾಹಕನಿಗೆ ಖುಷಿ ನೀಡಿತ್ತು.

ಈ ಎಲ್ಲ ಸನ್ನಿವೇಶದ ಬಳಿಕ ಬ್ಯಾಂಕ್ ಗ್ರಾಹಕನಿಗೆ ಯಾವುದು ಪೇಲ್ ಟ್ರಾನ್ಯಾಕ್ಷನ್.. ಎಷ್ಟು ದಿನಗಳಲ್ಲಿ ಹಣ ಬಾರದೇ ಇದ್ದಾಗ, ವರ್ಗಾವಣೆ ಆಗದೇ ಇದ್ದಾಗ ಪರಿಹಾರ ರೂಪದ ರೂ.100 ಹಣ ಸಿಗುತ್ತದೆ ಎಂಬ ಸಿರಿಯಾದ ಮಾಹತಿ ಲಭ್ಯವಾಗಿರಲಿಲ್ಲ. ಹೀಗಾಗಿ ಇಂತಹ ಬ್ಯಾಂಕ್ ಗ್ರಾಹಕರಿಗೆ ಸರಿಯಾದ ಮಾಹಿತಿ ಮುಂದೆ ಓದಿ.

  1. ಎಟಿಎಂ ಬಳಸಿ ಹಣ ತೆಗೆದಾಗ ಹಣ ಬಾರದೇ, ನಿಮ್ಮ ಖಾತೆಯಿಂದ ಹಣ ಕಟ್ ಆದಂತ ಸಂದರ್ಭದಲ್ಲಿ, ಆರ್ ಬಿ ಐ ಹೊಸ ನಿಯಮದ ಪ್ರಕಾರ ನೀವು ಹಣ ತೆಗೆದ ದಿನ ಜೊತೆ 5 ದಿನಗಳ ಒಳಗಾಗಿ ಬ್ಯಾಂಕ್ ಗ್ರಾಹಕನ ಖಾತೆಗೆ ಹಣ ರಿವರ್ಸ್ ಆಗದೇ ಇದ್ದಲ್ಲಿ ತಡವಾಗುವ ಪ್ರತಿ ದಿನಕ್ಕೆ ರೂ.100 ಪರಿಹಾರ ರೂಪದ ಹಣ ನಿಮ್ಮ ಖಾತೆಗೆ ಬ್ಯಾಂಕ್ ನಿಂದ ಜಮೆ ಆಗಲಿದೆ.
  2. ಇನ್ನೂ ಮೈಕ್ರೋ ಎಟಿಎಂಗಳ ಮೂಲಕ ಹಣ ವರ್ಗಾವಣೆ ಮಾಡಿದಂತ ಸಂದರ್ಭದಲ್ಲಿ ವರ್ಗಾವಣೆ ಪೇಲ್ ಆದಂತ ಸಂದರ್ಭದಲ್ಲಿ, ನಿಮ್ಮ ಖಾತೆಗೆ ಅನ್ ಸಕ್ಸಸ್ ಪುಲ್ ಹಣ ವರ್ಗಾವಣೆಗೆ ಕೂಡ ಪರಿಹಾರ ದೊರೆಯಲಿದೆ.
  3. ಒಂದು ವೇಳೆ ಡೆಬಿಟ್ ಕಾರ್ಡ್ ನಿಂದ ಡೆಬಿಟ್ ಕಾರ್ಡ್ ಗೆ ಹಣ ವರ್ಗಾವಣೆ ಮಾಡಿದಂತ ಸಂದರ್ಭದಲ್ಲಿ ಒಂದು ಖಾತೆ ದಾರನ ಅಕೌಂಟ್ ನಿಂದ ಹಣ ಕಟ್ ಆಗಿರುತ್ತದೆ. ಆದ್ರೇ ಆ ಹಣ ವರ್ಗಾವಣೆ ಮಾಡಲಾದ ಖಾತೆದಾರನ ಖಾತೆಗೆ ಜಮೆ ಆಗದ ಸಂದರ್ಭದಲ್ಲಿ ವರ್ಗಾವಣೆ ದಿನದ ಜೊತೆಗೆ 1 ದಿನದ ಒಳಗಾಗಿ ರಿವರ್ಸ್ ಆಗಬೇಕು. ಇಲ್ಲವೇ ವರ್ಗಾವಣೆಗೊಂಡ ಖಾತೆದಾರರನ ಖಾತೆಗೆ ಜಮೆ ಆಗಬೇಕು. ಇಲ್ಲವಾದಲ್ಲಿ ವರ್ಗಾವಣೆಯ ದಿನ ಜೊತೆಗೆ 1 ದಿನದ ಒಳಗಾಗಿ ಆಗದೇ ಇದ್ದಲಿಲ್ಲಿ ರೂ.100ರಂತೆ ತಡವಾಗುವ ದಿನಕ್ಕೆ ಸೇರಿ ಪರಿಹಾರವನ್ನು ನಿಮ್ಮ ಖಾತೆಗೆ ಪಡೆಯಲಿದ್ದೀರಿ.
  4. ಇನ್ನೂ ನಿಮ್ಮ ಎಟಿಎಂ ಕಾರ್ಡ್ ಬಳಸಿ ಶಾಪಿಂಗ್ ಮಾಡಿದಾಗ, ನಿಮ್ಮ ವಾಹನಗಳಿಗೆ ಇಂಧನ ತುಂಬಿಸಿದಾಗ ಕಾರ್ಡ್ ಸ್ವೈಫ್ ಆಗಿರುತ್ತದೆ. ಆಗ ನಿಮ್ಮ ಖಾತೆಯಿಂದ ಹಣ ಕೂಡ ಕಟ್ ಆಗಿರುತ್ತದೆ. ಆದ್ರೇ ಮಾರಾಟಗಾರನ ಖಾತೆ ಹಣ ಸಂದಾಯ ಆಗಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಹಣ ವರ್ಗಾವಣೆ ದಿನದಿಂದ 5 ದಿನಗಳ ಒಳಗಾಗಿ ರಿವರ್ಸ್ ಆಗಬೇಕು. ಇಲ್ಲವೇ ಮಾರಾಟಗಾರನ ಖಾತೆಗೆ ಜಮೆ ಆಗಿರಬೇಕು. ಅಷ್ಟು ದಿನಗಳ ಒಳಗಾಗಿ ಆಗದೇ ಇದ್ದಲ್ಲಿ, ತಡವಾಗುವ ಪ್ರತಿದಿನ ಒಂದಕ್ಕೆ ಸಂಬಂಧ ಪಟ್ಟ ಬ್ಯಾಂಕ್ ನಿಂದ ಗ್ರಾಹಕರು ರೂ.100 ಹಣ ಪರಿಹಾರ ಮೊತ್ತವಾಗಿ ಸಿಗಲಿದೆ.
  5. ಇದೇ ನಿಯಮ ಇ-ಕಾಮರ್ಸ್ ವರ್ಗಾವಣೆ ಹಾಗೂ ಸಿಎನ್ ಪಿ ವರ್ಗಾವಣೆಯ ಸಂದರ್ಭದಲ್ಲೂ ಅಪ್ಲೈ ಆಗಲಿದೆ.
  6. ಇದಲ್ಲದೇ ಐಎಂಪಿಎಸ್ ಮೂಲಕ ಹಣ ವರ್ಗಾವಣೆ ಮಾಡಿದ ಸಂದರ್ಭದಲ್ಲಿ ಖಾತೆದಾರರನ ಖಾತೆಯಿಂದ ಹಣ ಡೆಬಿಟ್ ಆಗಿ, ಮತ್ತೊಬ್ಬ ಖಾತೆದಾರನಿಗೆ ಹಣ ಕ್ರೆಡಿಟ್ ಆಗದೇ ಪೇಲ್ ಆಗಿದ್ದೇ ಆದಲ್ಲಿ, ಇಂತಹ ಸಂದರ್ಭದಲ್ಲಿ ಹಣ ವರ್ಗಾವಣೆ ಮಾಡಿದ ದಿನ ಜೊತೆಗೆ 1 ದಿನದ ಒಳಗಾಗಿ ಖಾತೆದಾರನಿಗೆ ಹಣ ರಿವರ್ಸ್ ಆಗಬೇಕು. ಇಲ್ಲವೇ ಹಣ ವರ್ಗಾವಣೆ ಮಾಡಲಾದ ವ್ಯಕ್ತಿಯ ಖಾತೆಗೆ ಹಣ ಜಮೆ ಆಗಿರಬೇಕು. ಇಲ್ಲವಾದಲ್ಲಿ ತಡವಾದ ಪ್ರತಿ ದಿನಕ್ಕೆ ರೂ.100ರಂತೆ ಬ್ಯಾಂಕ್ ಖಾತೆ ದಾರರನಿಗೆ ಪರಿಹಾರವನ್ನು ಪಡೆಯಲಿದ್ದೀರಿ.

ಹೀಗೆ ಒಟ್ಟಾರೆಯಾಗಿ ನಿಮ್ಮ ಇಂತಹ ಎಟಿಎಂ ಸೇರಿದಂತೆ ವಿವಿಧ ಬ್ಯಾಂಕ್ ವಹಿವಾಟಿನ ಪೇಲ್ ಹಣ ವರ್ಗಾವಣೆಗೆ ಗ್ರಾಹಕರಾಗಿ ಪರಿಹಾರ ರೂಪದಲ್ಲಿ ಹಣವನ್ನು ಸಂಬಂಧ ಪಟ್ಟ ಬ್ಯಾಂಕ್ ನಿಂದ ಪಡೆಯಲಿದ್ದೀರಿ. ಒಂದು ವೇಳೆ ಈ ನಿಯಮ ಮೀರಿದರೇ ಸಂಬಂಧ ಪಟ್ಟ ಬ್ಯಾಂಕ್ ಗೆ ತೆರಳಿ ದೂರು ಸಲ್ಲಿಸಿಯೂ ನೀವು ಪರಿಹಾರವನ್ನು ಪಡೆಯಬಹುದಾಗಿದೆ.

ವಸಂತ ಬಿ ಈಶ್ವರಗೆರೆ

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions