ಸುಭಾಷಿತ :

Friday, November 22 , 2019 6:46 AM

ಮುಂಜಾನೆಯ ಹೆಲ್ದಿ ಬ್ರೇಕ್ ಫಾಸ್ಟ್ ಗೆ ಸೇವಿಸಿ ಬನಾನಾ ಟೋಸ್ಟ್


Friday, October 18th, 2019 9:48 am

ಸ್ಪೆಷಲ್ ಡೆಸ್ಕ್ : ಮುಂಜಾನೆ ಎದ್ದು ಏನು ತಿಂಡಿ ಮಾಡೋದು ಎಂದೇ ತಾಯಂದಿರಿಗೆ ದೊಡ್ಡ ತಲೆ ನೋವಾಗಿರುತ್ತದೆ. ಅದರಲ್ಲೂ ಶಾಲೆಗೆ ಹೋಗುವ ಮಕ್ಕಳಿದ್ದರೆ ಕೇಳೋದೇ ಬೇಡ… ಮಕ್ಕಳಿಗೆ ಇಷ್ಟವಾಗಿ ತಿನ್ನುವಂತಹ ತಿಂಡಿ ಏನು ಮಾಡೋದು ಎಂದು ಯೋಚನೆ ಮಾಡುತ್ತಿದ್ದರೆ ಈ ತಿಂಡಿ ಮಾಡಿ..

ಬೇಕಾಗುವ ಸಾಮಾಗ್ರಿಗಳು : ಬಾಳೆಹಣ್ಣು 2, ಮೊಟ್ಟೆ 4, ಜೇನು 6 ಚಮಚ, ಸಕ್ಕರೆ 1/2 ಕಪ್‌, ಹಾಲು 1/2 ಕಪ್‌ , ಬ್ರೆಡ್‌ 6, ಎಣ್ಣೆ ಕರಿಯಲು

ತಯಾರಿಸುವ ವಿಧಾನ :
ಒಂದು ಬೌಲ್‌ನಲ್ಲಿ ಮೊಟ್ಟೆ ಹೊಡೆದು ಹಾಕಿ. ನಂತರ ಅದಕ್ಕೆ ಸಕ್ಕರೆ ಮತ್ತು ಸ್ವಲ್ಪ ಹಾಲು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಈಗ ಬಾಳೆಹಣ್ಣು ಸಿಪ್ಪೆ ತೆಗೆದು ಉದ್ದ ಉದ್ದವಾಗಿ ಕತ್ತರಿಸಿ. ಹಾಗೆಯೇ ಬ್ರೆಡ್‌ನ ಸೈಡ್‌ಗಳನ್ನು ಕತ್ತರಿಸಿ.
ಪ್ಲೇಟ್‌ ಮೇಲೆ ಬ್ರೆಡ್‌ ಇಟ್ಟು ಅದರ ಮೇಲೆ ಬಾಳೆಹಣ್ಣು ಸ್ಲೈಸ್‌ಗಳನ್ನು ನಂತರ ಅದರ ಮೇಲೆ ಇನ್ನೊಂದು ಬ್ರೆಡ್‌ ಇಟ್ಟು ಕವರ್‌ ಮಾಡಿ.
ಈಗ ಇದನ್ನು ಮೊಟ್ಟೆಯಲ್ಲಿ ಅದ್ದಿ ಪ್ಯಾನ್‌ಗೆ ಹಾಕಿ ಸ್ವಲ್ಪ ಎಣ್ಣೆ ಹಾಕಿ ಫ್ರೈ ಮಾಡಿ.
ಬ್ರೆಡ್‌ ಗೋಲ್ಡನ್‌ ಬಣ್ಣ ಬರುವವರೆಗೆ ನೀವು ಅದನ್ನು ಎರಡು ಬದಿ ಕಾಯಿಸಬೇಕು. ಫ್ರೆಂಚ್‌ ಟೋಸ್ಟ್‌ ಮಾಡುವಂತೆ ಮಾಡಿ.
ರೆಡಿಯಾದ ನಂತರ ಅದನ್ನು ಪ್ಲೇಟ್‌ ಮೇಲೆ ಹಾಕಿ ಅದನ್ನು ಟ್ರೈ ಆ್ಯಂಗಲ್‌ ಶೇಪ್‌ನಲ್ಲಿ ಕಟ್‌ ಮಾಡಿ. ಅದರ ಮೇಲೆ ಜೇನು ಹಾಕಿ.
ಈಗ ರುಚಿಯಾದ ಮತ್ತು ಆರೋಗ್ಯಯುತ ಟೋಸ್ಟ್ ರೆಡಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions