ಗರ್ಭಿಣಿಯರು ದಿನಕ್ಕೆ ಒಂದಾದರೂ ಬಾಳೆಹಣ್ಣು ತಿನ್ನಬೇಕಂತೆ


Thursday, January 17th, 2019 9:51 pm

ಸ್ಪೆಷಲ್ ಡೆಸ್ಕ್ : ರಾತ್ರಿ ಊಟವಾದ ಬಳಿಕ ಬಾಳೆ ಹಣ್ಣು ನೀಡುವುದು ಹೆಚ್ಚಿನವರ ಮನೆಯಲ್ಲಿ ವಾಡಿಕೆ. ಇದರಿಂದ ಕೇವಲ ಜೀರ್ಣ ಶಕ್ತಿ ಉತ್ತಮವಾಗುವುದು ಮಾತ್ರವಲ್ಲ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ. ಅದರಲ್ಲೂ ಗರ್ಭಿಣಿ ಮಹಿಳೆಗೆ ಬಾಳೆಹಣ್ಣು ನೀಡಿದರೆ ಒಳ್ಳೆಯದು.  ಹೌದು, ಈ ಲೇಖನದಲ್ಲಿ ಪ್ರೆಗ್ನೆನ್ಸಿ ಯಲ್ಲಿ ಬಾಳೆಹಣ್ಣು ತಿನ್ನುವುದರ ಅನುಕೂಲತೆಗಳು ಏನೆಂಬುದನ್ನು ತಿಳಿಸುತ್ತಿದ್ದೇವೆ.

ಬಾಳೆಹಣ್ಣು ಮಲಬದ್ಧತೆ ತಡೆಯುವುದು ಮಾತ್ರವಲ್ಲ ಮಗುವಿನ ಆರೋಗ್ಯಕ್ಕೂ ಸಹಕಾರಿಯಾಗುತ್ತದೆ,

ಬಾಳೆಹಣ್ಣು ಕಬ್ಬಿಣದ ಖಣಜ ಕಬ್ಬಿಣದ ಅಂಶ ಪ್ರತಿಯೊಬ್ಬ ಮಹಿಳೆಗೂ ಮುಖ್ಯ ಆದರೆ ಗರ್ಭವತಿಯಾದ ಸಮಯದಲ್ಲಿ ಇದರ ಅವಶ್ಯಕತೆ ಅಧಿಕವಿರುತ್ತದೆ.

ರಕ್ತದೊತ್ತಡ ಸ್ಥಿರಗೊಳಿಸಲು ಬಾಳೆಹಣ್ಣು ಸಹಕಾರಿಯಾಗಿದೆ.

ಗರ್ಭದಲ್ಲಿರುವ ಮಗು ಬಾಳೆಹಣ್ಣಿನಲ್ಲಿರುವ ಫೋಲಿಕ್ ಅಂಶವನ್ನು ಸುಲಭವಾಗಿ ಹೀರಿಕೊಳ್ಳುತ್ತದೆ ಆದ್ದರಿಂದ ಬಾಳೆಹಣ್ಣು ಸೇವಿಸುವುದು ಆರೋಗ್ಯಕಾರಿ.

ರಕ್ತದ ಏರಿಳಿತದ ಅಸಮತೋಲನ ಎಲ್ಲೆಡೆ ಕಾಡುವ ಸಮಸ್ಯೆ.ದೀರ್ಘಕಾಲದವರೆಗೆ ಅಧಿಕ ರಕ್ತದೊತ್ತಡ ಪ್ರಿಕ್ಲಂಪಿಯ ಮತ್ತಿತರ ತೊಡಕುಗಳನ್ನು ತಂದೊಡ್ಡುತ್ತದೆ.ಆದ್ದರಿಂದ ಸಮ ಪ್ರಮಾಣದ ರಕ್ತದ ಏರಿಳಿತವನ್ನು ಹೊಂದುವುದು ಒತ್ತಡ ಮತ್ತು ಆತಂಕವನ್ನು ನಿಗ್ರಹಿಸಲು ಬಾಳೆಹಣ್ಣು ಸಹಕಾರಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Gadgets
State
Astrology
Cricket Score
Poll Questions