ಸುಭಾಷಿತ :

Thursday, January 23 , 2020 5:59 PM

ಸೌಂದರ್ಯಕ್ಕೂ ಜೊತೆಗಾರ ಅಡುಗೆ ಸೋಡಾ


Monday, June 10th, 2019 2:40 pm

ಸ್ಪೆಷಲ್ ಡೆಸ್ಕ್ : ಅಡುಗೆ ಸೋಡಾ ಸಾಮಾನ್ಯವಾಗಿ ಅಡುಗೆಯಲ್ಲಿ ಬಳಕೆ ಮಾಡಲಾಗುತ್ತದೆ. ಇದು ಆರೋಗ್ಯಕ್ಕೆ ಒಳ್ಳೆದಲ್ಲ. ಆದರೆ ಇದನ್ನು ಸೌಂದರ್ಯ ಹೆಚ್ಚಿಸುವಲ್ಲಿ ಬಳಕೆ ಮಾಡಿದರೆ ಸೌಂದರ್ಯ, ತ್ವಚೆಗೆ ಸಂಬಂಧಿಸಿದ ಎಲ್ಲ ಸಮಸ್ಯೆ ಸಹ ನಿವಾರಣೆಯಾಗುತ್ತದೆ. ಅದಕ್ಕಾಗಿ ಏನು ಮಾಡಬೇಕು ನೋಡೋಣ…

ಪಾದಗಳ ಶುಚಿತ್ವ : ಶೂ ಅಥವಾ ಹೈಹೀಲ್ಡ್ ಚಪ್ಪಲಿ ಹಾಕಿದರೆ ಪಾದಗಳು ಹೆಚ್ಚು ಬೆವರುತ್ತವೆ. ಕೆಲವೊಮ್ಮೆ ಚಪ್ಪಲಿ ಧರಿಸಿದಾಗಲೂ ಬೆವರು ಬರುತ್ತದೆ. ಇದರಿಂದ ಕೊಳೆ ಸಂಗ್ರಹವಾಗಿ ಕೆಟ್ಟ ವಾಸನೆ ಬರಲು ಆರಂಭವಾಗುತ್ತದೆ. ಈ ಸಮಸ್ಯೆ ಕಾಡಿದರೆ ಒಂದು ಟಬ್‌ನಲ್ಲಿ ಬಿಸಿ ನೀರು ಹಾಕಿ, ಅದಕ್ಕೆ ಒಂದು ಚಮಚ ಉಪ್ಪು, ಎರಡು ಚಮಚ ಬೇಕಿಂಗ್ ಸೋಡಾ ಹಾಕಿ. ಪಾದಗಳನ್ನು 20 ನಿಮಿಷಗಳ ಕಾಲ ಈ ನೀರಿನಲ್ಲಿಡಿ. ಇದರಿಂದ ವಾಸನೆಗೆ ಕಾರಣವಾಗುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.

ಉಗುರಿನ ಸೌಂದರ್ಯ : ಬೆರಳುಗಳ ಉಗುರು ಹಳದಿ ಬಣ್ಣಕ್ಕೆ ತಿರುಗಿ ಅಸಹ್ಯವಾಗಿ ಕಾಣಿಸುತ್ತವೆ. ಆಗ ಬೇಕಿಂಗ್ ಸೋಡಾ ಮತ್ತು ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ಉಗುರುಗಳಿಗೆ ಹಚ್ಚಿ ಚೆನ್ನಾಗಿ ಉಜ್ಜಿ ತೊಳೆಯಬೇಕು. ಆಗ ಉಗುರು ಸ್ವಚ್ಛವಾಗಿ ಬೆಳ್ಳಗಾಗುತ್ತದೆ.

ಸುಂದರ ಮುಗುಳ್ನಗು : ಕೆಲವೊಮ್ಮೆ ಹಲ್ಲುಗಳು ತಮ್ಮ ನೈಸರ್ಗಿಕ ಬಿಳಿಯ ಬಣ್ಣ ಕಳೆದುಕೊಳ್ಳುತ್ತವೆ. ಈ ಸಮಸ್ಯೆ ನಿವಾರಣೆಗೆ ಬೇಕಿಂಗ್ ಸೋಡಾವನ್ನು ಸ್ವಲ್ಪ ಉಪ್ಪಿನ ಜೊತೆಗೆ ಬ್ರಶ್‌ಗೆ ಚೆನ್ನಾಗಿ ಒತ್ತಿ ಹಲ್ಲು ಉಜ್ಜಬೇಕು. ಬಳಿಕ ಚೆನ್ನಾಗಿ ಬಾಯಿ ಮುಕಳಿಸಿಕೊಂಡು ನಿಮ್ಮ ಮಾಮೂಲಿ ಪೇಸ್ಟ್‌ನಿಂದ ಹಲ್ಲುಜ್ಜಿಕೊಳ್ಳಬೇಕು.

ಸ್ಕ್ರಬ್ ಆಗಿ ಬಳಕೆ : ಸ್ವಲ್ಪ ಓಟ್ಸ್, ಸ್ವಲ್ಪ ನೀರನ್ನು ಮಿಶ್ರಣ ಮಾಡಿ ಇದಕ್ಕೆ ಮೂರು ಪಟ್ಟು ಬೇಕಿಂಗ್ ಸೋಡಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಅದರಲ್ಲಿ ದೇಹಕ್ಕೆ ಮಸಾಜ್ ಮಾಡಿಕೊಳ್ಳಬೇಕು. ಬಳಿಕ ಸ್ನಾನ ಮಾಡಿದರೆ ತ್ವಚೆಯು ಹೊಸ ಹೊಳಪು ಪಡೆಯುವುದರಲ್ಲಿ ಸಂದೇಹವಿಲ್ಲ.

ಬ್ಲಾಕ್ ಹೆಡ್ಸ್ : ಬ್ಲಾಕ್ಸ್ ಹೆಡ್ಸ್ ನಿವಾರಣೆ ಮಾಡಲು ಅಡುಗೆ ಸೋಡಾವನ್ನು ಬ್ಲಾಕ್ ಹೆಡ್ಸ್ ಆದ ಜಾಗಕ್ಕೆ ಹಾಕಿ ಚೆನ್ನಾಗಿ ಮಸಾಜ್ ಮಾಡಬೇಕು. ಇದರಿಂದ ಬ್ಲಾಕ್ ಹೆಡ್ಸ್ ನಿವಾರಣೆಯಾಗಿ ತ್ವಚೆ ಸುಂದರವಾಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions