ಸಾಲ ತೀರಿಸಲು ಬೆಂಗಳೂರಿನಲ್ಲಿ ಎಟಿಎಂ ಬಿಚ್ಚಿದ ಭೂಪ


Wednesday, February 14th, 2018 9:14 pm

ಬೆಂಗಳೂರು: ಕಳ್ಳತನ ಮಾಡಲು ಕೊಟ್ಟಿಗೆಪಾಳ್ಯದ ಆಕ್ಸಿಸ್ ಬ್ಯಾಂಕ್ ಎಟಿಎಂ ಘಟಕಕ್ಕೆ ನುಗ್ಗಿದ್ದ ಖದೀಮನೊಬ್ಬ ಕಾಮಾಕ್ಷಿಪಾಳ್ಯ ಠಾಣೆಯ ಗಸ್ತು ಪೊಲೀಸರ ಅತಿಥಿಯಾಗಿದ್ದಾನೆ.

ಹರೀಶ್ (35) ಎಂಬಾತ ಬಂಧಿತ ಆರೋಪಿ. ಉತ್ತರಾಂಚಲದ ಹರೀಶ್, 15 ವರ್ಷಗಳಿಂದ ಕೊಟ್ಟಿಗೆಪಾಳ್ಯದಲ್ಲಿ ನೆಲೆಸಿದ್ದಾನೆ. ಈತನಿಗೆ ಎಟಿಎಂ ಘಟಕದಲ್ಲಿ ಭದ್ರತಾ ಸಿಬ್ಬಂದಿ ಇಲ್ಲ ಎಂಬ ವಿಚಾರ ಗೊತ್ತಿತ್ತು. ಆದ್ದರಿಂದ ಹೇಗಾದರೂ ಮಾಡಿ ಎಟಿಎಂ ಯಂತ್ರವನ್ನು ಬಿಚ್ಚಿ ಹಣ ದೋಚಲು ಹಲವು ದಿನಗಳಿಂದ ಸಂಚು ರೂಪಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮಂಗಳವಾರ ಬೆಳಗ್ಗೆ ಎಟಿಎಂನೊಳಗೆ ಹೋಗಿದ್ದ ಆರೋಪಿ, ಸ್ಕ್ರೂಡ್ರೈವರ್‌ನಿಂದ ಯಂತ್ರವನ್ನು ಬಿಚ್ಚಿದ್ದ. ಅದೇ ಸಮಯದಲ್ಲಿ ಕೊಟ್ಟಿಗೆಪಾಳ್ಯಕ್ಕೆ ಗಸ್ತು ಬಂದ ಎಎಸ್‌ಐ ರಾಜಣ್ಣ ಹಾಗೂ ಕಾನ್‌ಸ್ಟೆಬಲ್‌ ಬೆಳ್ಳಿಯಪ್ಪ, ಘಟಕದೊಳಗೆ ವ್ಯಕ್ತಿಯೊಬ್ಬ ಇರುವುದನ್ನು ಕಂಡು ವಾಹನ ನಿಲ್ಲಿಸಿದ್ದಾರೆ. ಹೊಯ್ಸಳ ವಾಹನ ನೋಡುತ್ತಿದ್ದಂತೆಯೇ ಹೊರಗೆ ಬಂದ ಹರೀಶ್ಓಡಿದ್ದಾನೆ. ಆಗ ಸಿಬ್ಬಂದಿ ಬೆನ್ನಟ್ಟಿ ಆತನನ್ನು ಹಿಡಿದುಕೊಂಡಿದ್ದಾರೆ. ಸ್ನೇಹಿತರ ಬಳಿ ಸಾಲ ಮಾಡಿದ್ದೆ, ಆದ್ದರಿಂದ ಹಣ ದೋಚಲು ಸಂಚು ರೂಪಿಸಿದ್ದೆ ಎಂದು ಆರೋಪಿ ತಿಳಿಸಿದ್ದಾನೆ.

ಸಾಂದರ್ಭಿಕ ಚಿತ್ರ

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions