ಸುಭಾಷಿತ :

Saturday, October 19 , 2019 4:30 PM

ಆಟಕ್ಕುಂಟು ಲೆಕ್ಕಕ್ಕಿಲ್ಲ: ಸೈಕಾಲಾಜಿಕಲ್ ಥ್ರಿಲ್ಲರ್‌ಗೆ ಹೊಸ ತಾಂತ್ರಿಕ ಸ್ಪರ್ಶ!


Monday, September 16th, 2019 11:38 am

ಸಂಚಾರಿ ವಿಜಯ್ ಮುಖ್ಯ ಭೂಮಿಕೆಯಲ್ಲಿ ನಟಿಸಿರೋ ಚಿತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ. ಇತ್ತೀಚೆಗೆ ಬಿಡುಗಡೆಯಾಗಿರೋ ಟ್ರೇಲರ್ ಮೂಲಕವೇ ಪ್ರೇಕ್ಷಕರನ್ನೆಲ್ಲ ತನ್ನತ್ತ ಸೆಳೆದುಕೊಂಡು ಹಿಡಿದಿಟ್ಟುಕೊಳ್ಳುವಲ್ಲಿ ಈ ಸಿನಿಮಾ ಯಶಸ್ವಿಯಾಗಿದೆ. ಇದು ರಾಮ್ ಜೆ ಚಂದ್ರ ನಿರ್ದೇಶನದ ಚೊಚ್ಚಲ ಚಿತ್ರ. ಆದರೆ ಇದು ಮೊದಲ ಲ್ರಯತ್ನ ಎಂಬ ಸುಳಿವೇ ಸಿಗದಂತೆ ಮೂಡಿ ಬಂದಿರೋ ಟ್ರೇಲರ್ ಪ್ರೇಕ್ಷಕರಲ್ಲೊಂದು ನಿರೀಕ್ಷೆ, ಹೊಸಾ ಕಂಟೆಂಟ್ ಹೊಂದಿರೋ ಭರವಸೆಯನ್ನೂ ಮೂಡಿಸಿದೆ.

ಇದು ಸೈಕಾಲಾಜಿಕಲ್ ಥ್ರಿಲ್ಲರ್ ಚಿತ್ರ. ಈವರೆಗೂ ಕನ್ನಡದಲ್ಲಿ ಈ ಬಗೆಯ ಒಂದಷ್ಟು ಚಿತ್ರಗಳು ಬಂದಿವೆ. ಇಂಥಾ ಚಿತ್ರಗಳ ಬಗ್ಗೆ ಪ್ರೇಕ್ಷಕರು ಸದಾ ಕಾತರರಾಗಿರೋದರಿಂದ ಬಹುತೇಕವುಗಳು ಗೆದ್ದಿವೆ. ಹಾಗಿದ್ದಮೇಲೆ ಹೊಸಾ ಪ್ರಯೋಗಗಳನ್ನು ಹೊಂದಿರುವ, ಈ ವರೆಗೆ ಕನ್ನಡದಲ್ಲಿ ಬೆಳಕು ಚೆಲ್ಲದಂಥಾ ಕಥೆಯನ್ನು ಹೊಂದಿರುವ ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರ ಕೇವಲ ಕಥೆಯ ಕಾರಣದಿಂದ ವಿಶೇಷವಾಗಿದೆ ಅಂದುಕೊಳ್ಳಬೇಕಿಲ್ಲ. ತಾಂತ್ರಿಕವಾಗಿಯೂ ಪ್ರೇಕ್ಷಕರನ್ನೆಲ್ಲ ಬೆರಗುಗೊಳಿಸುವಂತೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರ ಮೂಡಿ ಬಂದಿದೆ.

ಇದರಲ್ಲಿ ಗ್ರಾಫಿಕ್ಸ್‌ಗೂ ಕೂಡಾ ಹೆಚ್ಚಿನ ಒತ್ತು ನೀಡಲಾಗಿದೆ. ಪ್ರತಿಭಾವಂತ ತಾಂತ್ರಿಕ ತಂಡವೊಂದು ಗ್ರಾಫಿಕ್ಸ್ ಕಾರ್ಯವನ್ನು ಮಾಡಿಕೊಟ್ಟಿದೆ. ಇದರಲ್ಲಿ ಮೂವತೈದು ನಿಮಿಷಗಳ ಗ್ರಾಫಿಕ್ಸ್ ಕಾಣಿಸಿಕೊಳ್ಳಲಿದೆಯಂತೆ. ಇನ್ನುಳಿದಂತೆ ಸ್ಕ್ರೀನ್ ಪ್ಲೇನಲ್ಲಿಯೂ ಕೂಡಾ ನವೀನ ಶೈಲಿಯನ್ನು ಪ್ರಯೋಗಿಸಲಾಗಿದೆ. ಅದು ಈ ಚಿತ್ರದ ಜೀವಾಳವೂ ಹೌದು. ಗಟ್ಟಿ ಕಥೆ, ಅದಕ್ಕೆ ತಕ್ಕುದಾದ ನಿರೂಪಣೆ ಮತ್ತು ನವೀನ ತಾಂತ್ರಿಕ ಸ್ಪರ್ಶಗಳೊಂದಿಗೆ ಆಟಕ್ಕುಂಡು ಲೆಕ್ಕಕ್ಕಿಲ್ಲ ದೊಡ್ಡ ಗೆಲುವಿನ ಭರವಸೆಯೊಂದಿಗೆ ಥಿಯೇಟರಿನತ್ತ ಹೆಜ್ಜೆ ಹಾಕುತ್ತಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions