ಮೇಷ

ಇಂದು ನಿಮ್ಮ ಪ್ರಿಯತಮೆಯ ಚಿತ್ತ ಓಲಾಡಬಹುದಾದ್ದರಿಂದ ಪ್ರಣಯ ಇಂದು ಅನಿಶ್ಚಿತವಾಗಿರುತ್ತದೆ. ನಿಮ್ಮ ಆಫೀಸ್ ಕೆಲಸ ಇಂದು ಹೆಚ್ಚು ಹಾಳಾಗುವ ಸಾಧ್ಯತೆಯಿದೆ. ನೀವು ತಪ್ಪು ದಾರಿಗೆಳೆಯಲು ಅಥವಾ ನಿಮಗೆ ಹಾನಿ ಮಾಡುವ ಮಾಹಿತಿ ನೀಡಲು ಪ್ರಯತ್ನಿಸುವ ವ್ಯಕ್ತಿಗಳ ಬಗ್ಗೆ ಎಚ್ಚರಿದಿಂದಿರಿ. ನಿಮ್ಮ ಸಂಗಾತಿಯ ಜೊತೆಗಿನ ನಿಮ್ಮ ಭಾವನಾತ್ಮಕ ಬಂಧ ಇಂದು ಬಳಲಬಹುದು.

ವೃಷಭ

ಪ್ರಣಯ ಸಂಬಂಧಗಳಿಗೆ ಇಂದು ಹಿನ್ನೆಡೆಯುಂಟಾಗಬಹುದು. ಕೆಲಸದ ಸ್ಥಳದಲ್ಲಿ ಹಿರಿಯರು ಹಾಗೂ ಸಹೋದ್ಯೋಗಿಗಳಿಂದ ಬೆಂಬಲ ನಿಮ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಬಾಕಿಯಿರುವ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಬೇಕು ಮತ್ತು ನೀವು ಎಲ್ಲಾದರೂ ಆರಂಭಿಸಬೇಕೆಂದು ನಿಮಗೆ ತಿಳಿದಿದೆ - ಆದ್ದರಿಂದ ಸಕಾರಾತ್ಮಕವಾಗಿ ಅಲೋಚಿಸಿ ಮತ್ತು ಇಂದೇ ಪ್ರಯತ್ನಗಳನ್ನು ಆರಂಭಿಸಿ. ನಿಮ್ಮ ಮದುವೆ ಇಂದು ನಿಜವಾಗಿಯೂ ಕಷ್ಟಕರ ಸಮಯವನ್ನು ಅನುಭವಿಸಬಹುದು.

ಮಿಥುನ

ಇಂದು ಯಾರಾದರೂ ನಿಮ್ಮ ಪ್ರೀತಿಯ ನಡುವೆ ಬರಬಹುದು. ನಿಮ್ಮ ಕೆಲಸ ಮತ್ತು ನಿಮ್ಮ ಆದ್ಯತೆಗಳ ಮೇಲೆ ಗಮನವಿಡಿ. ನೀವಿಂದು ತಾರೆಯಂತೆ ಪ್ರಕಾಶಿಸಿ - ಆದರೆ ಕೇವಲ ಪ್ರಶಂಸಾರ್ಹ ಕೆಲಸಗಳನ್ನು ಮಾತ್ರ ಮಾಡಿ. ಇಂದು, ನೀವು ಮತ್ತು ನಿಮ್ಮ ಸಂಗಾತಿಯ ನಡುವಿನ ಸಿಡುಕು ಕೇವಲ ಒಂದು ಸುಂದರವಾದ ನೆನಪಿನ ಕಾರಣದಿಂದಾಗಿ ಸ್ಥಗಿತಗೊಳ್ಳಬಹುದು. ಆದ್ದರಿಂದ, ಒಂದು ಬಿಸಿಯೇರಿದ ವಾದದ ಸಂದರ್ಭದಲ್ಲಿ ಹಳೆಯ ಸುಂದರ ದಿನಗಳನ್ನು ನೆನಪು ಮಾಡಿಕೊಳ್ಳುವುದನ್ನು ತಪ್ಪಿಸಿಕೊಳ್ಳಬೇಡಿ.

ಕಟಕ

ಸಾಧ್ಯವಾದಷ್ಟೂ ಸಕಾರಾತ್ಮಕವಾಗಿರಿ. ಇಂದು ತಕ್ಷಣ ಗಮನ ಬೇಕಾಗಿರುವ ಬಹಳಷ್ಟು ಸಮಸ್ಯೆಗಳಿರುತ್ತವೆ. ಇಂದು, ಪ್ರೀತಿಯ ಅಮಲು ನಿಮ್ಮನ್ನು ಆವರಿಸಿರುವುದರಿಂದ ಗುಲಾಬಿಗಳು ಇನ್ನೂ ಕೆಂಪಾಗಿ ಕಾಣುತ್ತವೆ ಮತ್ತು ವಯೋಲ ಹೂಗಳು ಇನ್ನೂ ನೀಲಿಯಾಗುತ್ತವೆ.

ಸಿಂಹ

ನೀವು ಏನು ಮಾಡಬೇಕೆಂದು ಆಜ್ಞೆ ನೀಡಿದಲ್ಲಿ ನಿಮ್ಮ ಪ್ರೇಮಿಯ ಜೊತೆ ಗಂಭೀರ ಸಮಸ್ಯೆಗಳನ್ನು ಹೊಂದುತ್ತೀರಿ. ನಿಮ್ಮ ಮನೋಧರ್ಮ ಕೆಲಸದಲ್ಲಿ ಇಂದು ನಿಮ್ಮನ್ನು ಒಂದು ತ್ರಾಸದಾಯಕ ಪರಿಸ್ಥಿತಿಗೆ ತಳ್ಳಬಹುದು. ಶಾಂತವಾಗಿಸಲು ಪ್ರಯತ್ನಿಸಿ. ವೈಯಕ್ತಿಕ ಮತ್ತು ಗೌಪ್ಯವಾದ ಮಾಹಿತಿಯನ್ನು ಬಹಿರಂಗಪಡಿಸಬೇಡಿ. ಇಂದು ತುಂಬಾ ನಿರೀಕ್ಷೆಗಳು ನಿಮ್ಮ ವೈವಾಹಿಕ ಜೀವನವನ್ನು ದುಃಖದೆಡೆಗೆ ನಡೆಸಬಹುದು.

ಕನ್ಯಾ

ನಿಮ್ಮ ಪ್ರೀತಿಯ ಸಂಗಾತಿ ಇಂದು ಏನಾದರೂ ಸುಂದರವಾದದ್ದನ್ನು ಮಾಡಿ ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತಾರೆ. ಸಹೋದ್ಯೋಗಿಗಳನ್ನು ನಿರ್ವಹಿಸುವಾಗ ಜಾಣತನದ ಅಗತ್ಯವಿದೆ. ನೀವೇನಾದರೂ ಮೋಸದ್ದನ್ನು ಮಾಡಿದಲ್ಲಿ ಅಧಿಕಾರಿಗಳು ನಿಮ್ಮನ್ನು ಅರ್ಥ ಮಾಡಿಕೊಳ್ಳುವ ಸಾಧ್ಯತೆ ಕಡಿಮೆಯಿರುವುದರಿಂದ ನಿಮ್ಮ ಕಾರ್ಯಗಳು ಹಾಗೂ ಮಾತುಗಳ ಬಗ್ಗೆ ಎಚ್ಚರವಿರಲಿ. ಹಲವಾರು ವಿಷಯಗಳ ಬಗ್ಗೆ ಹಲವಾರು ಭಿನ್ನಾಭಿಪ್ರಾಯಗಳು ಇರಬಹುದಾದ್ದರಿಂದ ಈ ದಿನ ನಿಮಗೆ ಚೆನ್ನಾಗಿರುವುದಿಲ್ಲ. ಈ ನಿಮ್ಮ ಸಂಬಂಧವನ್ನು ದುರ್ಬಲಗೊಳಿಸುತ್ತದೆ.

ತುಲಾ

ಪ್ರಣಯ ಸಂತೋಷಕರವೂ ಮತ್ತು ಅದ್ಭುತವೂ ಆಗಬಹುದು. ವೃತ್ತಿಪರ ರಂಗದಲ್ಲಿ ಜವಾಬ್ದಾರಿ ಹೆಚ್ಚಾಗುವ ಸಾಧ್ಯತೆಯಿದೆ. ನೀವು ಸಹಾಯಕ್ಕಾಗಿ ನಿಮ್ಮ ಬಳಿ ಬರುವ ಜನರಿಗೆ ಬದ್ಧತೆ ನೀಡುತ್ತೀರಿ. ಇಂದು, ನೀವು ಮತ್ತೆ ನಿಮ್ಮ ಸಂಗಾತಿಯ ಜೊತೆ ಪ್ರೀತಿಯಲ್ಲಿ ಬೀಳುತ್ತೀರಿ.

ವೃಶ್ಚಿಕ

ಹೆಚ್ಚುವರಿ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಬೇಕು. ಜನರು ನಿಮಗೆ ಹೊಸ ಭರವಸೆ ಹಾಗೂ ಕನಸುಗಳನ್ನು ನೀಡುತ್ತಾರೆ –ಇದು ನಿಮ್ಮ ಸ್ವಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ವಿಭಿನ್ನ ರೀತಿಯ ಪ್ರಣಯವನ್ನು ಅನುಭವಿಸುವ ಸಾಧ್ಯತೆಯಿದೆ. ಇಂದು ನಿಮಗೆ ನಿಮ್ಮ ಕುಟುಂಬದ ಬೆಂಬಲದಿಂದ ನೀವು ಚೆನ್ನಾಗಿ ಕೆಲಸ ಮಾಡುತ್ತಿದ್ದೀರಿ ಎಂದು ಅರಿವಾಗುತ್ತದೆ. ಒಬ್ಬ ಆಧ್ಯಾತ್ಮಿಕ ನಾಯಕರು ಅಥವಾ ಹಿರಿಯರು ಮಾರ್ಗದರ್ಶನ ಒದಗಿಸುತ್ತಾರೆ. ಈ ದಿನ ನಿಮ್ಮ ಜೀವನ ಸಂಗಾತಿಗೆ ಸಾಮಾನ್ಯ ದಿನಗಳಿಗಿಂತ ಉತ್ತಮವಾಗಿರುವಂತೆ ತೋರುತ್ತದೆ.

ಧನು

ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ ಸಂಧರ್ಭದಲ್ಲಿ ನಿಮ್ಮನ್ನು ಸಿಲುಕಿಸುತ್ತಾರೆ- ಯಾವುದೇ ಕ್ರಮ ಕೈಗೊಳ್ಳುವ ಮೊದಲು ಸತ್ಯಾಸತ್ಯತೆಗಳನ್ನು ಪರಿಶೀಲಿಸಿ. ನಿಮ್ಮನ್ನು ಯಾರಾದರೂ ಆಕರ್ಷಿಸಲು ಪ್ರಯತ್ನಿಸಬಹುದಾದ್ದರಿಂದ ಎಚ್ಚರಿಕೆಯಿಂದಿರಿ. ಹೊಸ ಗ್ರಾಹಕರೊಂದಿಗೆ ಮಾತುಕತೆಗೆ ಇದೊಂದು ಅದ್ಭುತ ದಿನ. ಕಟ್ಟುಕತೆಗಳು ಮತ್ತು ವದಂತಿಗಳಿಂದ ದೂರವಿರಿ. ನಿಮ್ಮ ಸಂಗಾತಿ ನಿಮ್ಮ ಜೊತೆಗಿರುವ ಬಗ್ಗೆ ನಿಮಗೆ ಕೆಲವು ಅಷ್ಟೇನೂ ಒಳ್ಳೆಯದಲ್ಲದ ವಿಷಯಗಳನ್ನು ಹೇಳಬಹುದು.

ಮಕರ

ಸಂಪರ್ಕಗಳು ಮತ್ತು ಚರ್ಚೆಗಳು ಚೆನ್ನಾಗಿ ನಡೆಯದಿದ್ದಲ್ಲಿ – ನೀವು ನಿಮ್ಮ ಶಾಂತತೆ ಕಳೆದುಕೊಳ್ಳಬಹುದು ಮತ್ತು ಏನಾದರೂ ಹೇಳಬಹುದು – ನಂತರ ನೀವು ಇವುಗಳ ಬಗ್ಗೆ ವಿಷಾದಿಸುತ್ತೀರಿ –ಮಾತನಾಡುವ ಮೊದಲು ಯೋಚಿಸಿ. ನೀವು ಪ್ರೀತಿಯ ನೋವನ್ನು ಅನುಭವಿಸಬಹುದು. ಕೆಲಸದಲ್ಲಿ ವಿಚಿತ್ರಗಳಾಗಬಹುದು; ನೀವು ಎಲ್ಲವೂ ನಿಮ್ಮ ವಿರುದ್ಧ ಹೋಗುವುದನ್ನು ನೋಡುತ್ತೀರಿ. ಆದರೆ, ಇದು ನಿಜವಲ್ಲ. ವೈಯಕ್ತಿಕ ಮತ್ತು ಗೌಪ್ಯವಾದ ಮಾಹಿತಿಯನ್ನು ಬಹಿರಂಗಪಡಿಸಬೇಡಿ. ಯಾರೋ ಒಬ್ಬ ವ್ಯಕ್ತಿ ಇಂದು ನಿಮ್ಮ ಸಂಗಾತಿಯಲ್ಲಿ ತುಂಬಾ ಆಸಕ್ತಿ ತೋರಿಸಬಹುದು, ಆದರೆ ಕೊನೆಗೆ ಇಲ್ಲಿ ಏನೂ ತಪ್ಪು ನಡೆಯುತ್ತಿಲ್ಲ ಎಂದು ನಿಮಗೆ ಅರಿವಾಗುತ್ತದೆ.

ಕುಂಭ

ನೀವು ಕುಟುಂಬದ ಸದಸ್ಯರ ಜೊತೆ ಸ್ವಲ್ಪ ತೊಂದರೆ ಹೊಂದಿದ್ದರೂ ಇದು ನಿಮ್ಮ ಮನಶ್ಶಾಂತಿಯನ್ನು ಹಾಳು ಮಾಡಲು ಅವಕಾಶ ನೀಡಬೇಡಿ. ಪ್ರೇಮ ಜೀವನ ಸ್ವಲ್ಪ ಕಠಿಣವಾಗಿರಬಹುದು. ನಿಮ್ಮ ಆಫೀಸ್ ಕೆಲಸ ಇಂದು ಹೆಚ್ಚು ಹಾಳಾಗುವ ಸಾಧ್ಯತೆಯಿದೆ. ಪ್ರಯಾಣ ಸಂತೋಷಕರ ಮತ್ತು ಹೆಚ್ಚು ಅನುಕೂಲಕರವಾಗಿರುತ್ತದೆ. ನಿಮ್ಮ ಸಂಗಾತಿಯ ಒರಟು ವರ್ತನೆ ನಿಮ್ಮ ಮೇಲೆ ಒತ್ತಡ ಹಾಕಬಹುದು.

ಮೀನ

ನಿಮ್ಮ ಪ್ರೀತಿಪಾತ್ರರಿಂದ ಕರೆ ಪಡೆಯುತ್ತೀರಿ ಹಾಗೂ ಇದು ನಿಮಗೆ ರೋಮಾಂಚಕ ದಿನವಾಗಿರುತ್ತದೆ. ನೀವು ಸ್ವಲ್ಪ ಪ್ರೀತಿ ಹಂಚಿಕೊಂಡಲ್ಲಿ ಇಂದು ನಿಮ್ಮ ಪ್ರಿಯತಮೆ ನಿಮ್ಮ ದೇವತೆಯಾಗುತ್ತಾಳೆ. ಇಂದು ನೀವು ನಿಜವಾಗಿಯೂ ಲಾಭ ಪಡೆಯಬಯಸಿದರೆ – ಇತರರು ನೀಡಿದ ಸಲಹೆಯನ್ನು ಕೇಳಿ. ವೈವಾಹಿಕ ಜೀವನವನ್ನು ಉತ್ತಮವಾಗಿಸುವ ನಿಮ್ಮ ಪ್ರಯತ್ನಗಳು ಇವತ್ತು ನಿರೀಕ್ಷೆಗೂ ಮೀರಿ ಫಲ ನೀಡುತ್ತವೆ.
Astrology
Cricket Score
Poll Questions