ಮೇಷ

ನಿಮ್ಮ ಮನೆಯಲ್ಲಿ ಸಾಮರಸ್ಯ ತರಲು ನಿಕಟ ಸಹಕಾರದೊಂದಿಗೆ ಕೆಲಸ ಮಾಡಬೇಕು. ನಿಮ್ಮ ಪ್ರೇಮಿಯ ಜೊತೆ ಹೊರಹೋದಾಗ ನಿಮ್ಮ ರೂಪ ಮತ್ತು ವರ್ತನೆಯಲ್ಲಿ ನೈಜತೆಯಿರಲಿ. ನಿಮ್ಮ ನೋಟವನ್ನು ವರ್ಧಿಸುವ ಮತ್ತು ಪ್ರಬಲ ಪಾಲುದಾರರನ್ನು ಆಕರ್ಷಿಸಲು ಬದಲಾವಣೆಗಳನ್ನು ಮಾಡಿ. ಹಾಗೆ, ನೀವು ನಿಮ್ಮ ಸಂಗಾತಿಯ ಮೇಲೆ ಇಂದು ಬಹಳ ಹಣ ಖರ್ಚು ಮಾಡುವಂತೆ ತೋರುತ್ತದೆ, ಆದರೆ ಒಳ್ಳೆಯ ಸಮಯವನ್ನಂತೂ ಹೊಂದಿರುತ್ತೀರಿ.

ವೃಷಭ

ಇಂದು ನೀವು ಹಚ್ಚು ಪ್ರಯತ್ನ ಮಾಡಬೇಕಾಗಿ ಬಂದರೂ ಕೂಡ ಮಕ್ಕಳ ಸಂಗದಲ್ಲಿ ನಿಮ್ಮ ಬಿಡುವಿನ ಸಮಯ ಕಳೆಯಲು ಪ್ರಯತ್ನಿಸಬೇಕು. ಇಡೀ ಬ್ರಹ್ಮಾಂಡದ ಭಾವಪರವಶತೆ ಪ್ರೀತಿಯಲ್ಲಿರುವವರ ನಡುವೆ ನಡೆಯುತ್ತದೆ. ಹೌದು, ನೀವು ಅದೃಷ್ಟವಂತರು. ನೀವು ತಪ್ಪು ದಾರಿಗೆಳೆಯಲು ಅಥವಾ ನಿಮಗೆ ಹಾನಿ ಮಾಡುವ ಮಾಹಿತಿ ನೀಡಲು ಪ್ರಯತ್ನಿಸುವ ವ್ಯಕ್ತಿಗಳ ಬಗ್ಗೆ ಎಚ್ಚರಿದಿಂದಿರಿ. ನಿಮ್ಮ ಜೀವನ ಸಂಗಾತಿಯ ಜೊತೆಗೆ ಭಾವನಾತ್ಮಕ ಬಂಧವನ್ನು ಅನುಭವಿಸಲು ನಿಮಗೆ ಸಾಧ್ಯವಾಗುವಾಗ ಪ್ರಣಯ ಅತ್ಯುತ್ತಮವಾಗಿರುತ್ತದೆ.

ಮಿಥುನ

ನಿಮ್ಮ ಸಂತೋಷವನ್ನು ಅನುಭವಿಸಲು ನೀವಿದನ್ನು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಬಹುದು. ಹಣಕಾಸು ಖಂಡಿತವಾಗಿಯೂ ವೃದ್ಧಿಯಾಗುತ್ತದೆ- ಆದರೆ ಅದೇ ಸಮಯದಲ್ಲಿ ಖರ್ಚೂ ತುಂಬಾ ಹೆಚ್ಚಾಗುತ್ತದೆ. ಮಕ್ಕಳು ನೀವು ಅವರೆಡೆಗೆ ಗಮನ ಹರಿಸಬೇಕೆಂಬ ಬೇಡಿಕೆಯಿಟ್ಟರೂ ಅವರು ನಿಮಗೆ ಸಂತೋಷ ತರುತ್ತಾರೆ. ಯಾರಾದರೂ ನಿಮ್ಮನ್ನು ಶ್ಲಾಘಿಸಬಹುದು. ತೆರಿಗೆ ಮತ್ತು ವಿಮೆ ವಿಷಯಗಳ ಬಗ್ಗೆ ಗಮನ ನೀಡುವ ಅಗತ್ಯವಿದೆ. ನಿಮ್ಮ ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಇಂದು ವಿಷಯಗಳು ನಿಜವಾಗಿಯೂ ಅಸಾಧಾರಣವಾಗಿರುತ್ತವೆ.

ಕಟಕ

ನಿಮ್ಮ ಸೃಜನಶೀಲ ಪ್ರತಿಭೆಯನ್ನು ಸರಿಯಾಗಿ ಬಳಸಿದಲ್ಲಿ ಅದು ಅತ್ಯಂತ ಲಾಭದಾಯಕವೆಂದು ಸಾಬೀತಾಗಬಹುದು. ಮಕ್ಕಳು ಅವರ ವೃತ್ತಿಯನ್ನು ಯೋಜಿಸುವುದಕ್ಕಿಂತ ಹೆಚ್ಚಾಗಿ ಹೊರಾಂಗಣ ಚಟುವಟಿಕೆಗಳಲ್ಲೇ ಸಮಯ ಕಳೆಯುವುದರಿಂದ ಅವರು ನಿರಾಸೆ ಉಂಟುಮಾಡಬಹುದು. ಇಂದು ನೀವು ನಿಮ್ಮ ಅತ್ಯುತ್ತಮ ನಡವಳಿಕೆಯನ್ನು ಹೊಂದಿರಬೇಕು - ಏಕೆಂದರೆ ನಿಮ್ಮ ಪ್ರೇಮಿ ಅತ್ಯಂತ ಅನಿರೀಕ್ಷಿತ ಮನಸ್ಥಿತಿಯನ್ನು ಹೊಂದಿರುತ್ತಾರೆ. ಅನಕೂಲಕರ ಗ್ರಹಗಳು ಇಂದು ನೀವು ಸಂತೋಷ ಅನುಭವಿಸಲು ಸಾಕಷ್ಟು ಕಾರಣಗಳನ್ನು ತರುತ್ತವೆ. ನೀವು ಒಂದು ದೊಡ್ಡ ಖರ್ಚಿನಿಂದಾಗಿ ನಿಮ್ಮ ಸಂಗಾತಿಯ ಮೇಲೆ ಸಿಡುಕಬಹುದು.

ಸಿಂಹ

ಗಡಿಬಿಡಿಯಲ್ಲಿ ಮೆಟ್ಟಿಲುಗಳನ್ನು ಹತ್ತಲು ಪ್ರಯತ್ನಿಸದರೆ ಅದು ನಿಮಗೆ ಉಸಿರಾಟದ ಸಮಸ್ಯೆ ಉಂಟುಮಾಡಬಹುದು. ಗದ್ದಲವಿಲ್ಲದಂತೆ ಉಸಿರಾಡಲು ಪ್ರಯತ್ನಿಸಿ. ದೀರ್ಘಕಾಲದ ಲಾಭಗಳಿಗೆ ಸ್ಟಾಕ್‌ಗಳು ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದನ್ನು ಶಿಫಾರಸು ಮಾಡಲಾಗಿದೆ. ನಿಮ್ಮ ಮನೆಯ ವಾತಾವರಣವನ್ನು ಬದಲಾಯಿಸುವ ಮೊದಲು ಅದಕ್ಕೆ ಇತರರ ಅನುಮೋದನೆಯಿದೆಯೆಂದು ಖಾತ್ರಿಪಡಿಸಿಕೊಳ್ಳಿ. ಏಕಪಕ್ಷೀಯ ಪ್ರೇಮ ನಿಮ್ಮನ್ನು ನಿರಾಸೆಗೊಳಿಸುತ್ತದೆ. ದೇವರು ತಮಗೆ ತಾವೇ ಸಹಾಯ ಮಾಡಿಕೊಳ್ಳುವವರಿಗೆ ಸಹಾಯ ಮಾಡುತ್ತಾನೆಂದು ನೆನಪಿಡಬೇಕು. ನಿಮ್ಮ ಸಂಗಾತಿಯ ಆಕ್ರಮಣಶೀಲತೆಗೆ ನೀವು ಸರಿಯಾದ ಸಮಯದಲ್ಲಿ ಗಮನ ನೀಡದಿದ್ದಲ್ಲಿ ಅದನ್ನು ನಿರ್ವಹಿಸುವುದು ಕಷ್ಟವಾಗಬಹುದು.

ಕನ್ಯಾ

ನೀವು ತ್ವರಿತ ಹಣ ಪಡೆಯುವ ಬಯಕೆ ಹೊಂದಿರುತ್ತೀರಿ. ಸಮುದ್ರದಾಚೆಯ ಸಂಬಂಧಿಯಿಂದ ಒಂದು ಉಡುಗೊರೆ ನಿಮ್ಮನ್ನು ಸಂತೋಷಪಡಿಸುತ್ತದೆ. ನೀವು ಏನು ಮಾಡಬೇಕೆಂದು ಆಜ್ಞೆ ನೀಡಿದಲ್ಲಿ ನಿಮ್ಮ ಪ್ರೇಮಿಯ ಜೊತೆ ಗಂಭೀರ ಸಮಸ್ಯೆಗಳನ್ನು ಹೊಂದುತ್ತೀರಿ. ಪ್ರವಾಸಗಳು ಮತ್ತು ಪ್ರಯಾಣಗಳು ಆನಂದ ತರುತ್ತವೆ ಮತ್ತು ಹೆಚ್ಚು ಶಿಕ್ಷಣ ನೀಡುತ್ತವೆ. ನೀವು ಅಥವಾ ನಿಮ್ಮ ಸಂಗಾತಿಗೆ ಇಂದು ಹಾಸಿಗೆಯಲ್ಲಿ ಗಾಯವಾಗಬಹುದಾಗಿದೆ, ಆದ್ದರಿಂದ ಸೌಮ್ಯವಾಗಿ ವರ್ತಿಸಿ.

ತುಲಾ

ನೀವು ಇಂದು ನಿಮಗೆ ನೀಡಲಾದ ಹೂಡಿಕೆಯ ಯೋಜನೆಗಳ ಬಗ್ಗೆ ಚೆನ್ನಾಗಿ ಆಲೋಚಿಸಬೇಕು. ಯುವಕರನ್ನು ಹೊಂದಿರುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಒಳ್ಳೆಯ ಸಮಯ. ನಾಳೆ ಬಹಳ ತಡವಾಗುವುದರಿಂದ ನೀವು ನಿಮ್ಮ ಪ್ರಿಯತಮೆಗೆ ನಿಮ್ಮ ಸಂದೇಶವನ್ನು ಕೂಡಲೇ ತಿಳಿಸಬೇಕು. ನೀವು ಒಂದು ಪರಿಸ್ಥಿತಿಯಿಂದ ಓಡಿಹೋದಲ್ಲಿ - ಇದು ನಿಮ್ಮನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಅನುಸರಿಸುತ್ತದೆ. ನಿಮ್ಮ ಸಂಗಾತಿ ನಿಮ್ಮ ಹೃದಯವನ್ನು ಆಲಿಸಲು ನಿಮಗೆ ಸಮಯ ಸಾಕಷ್ಟು ನೀಡುತ್ತಾರೆ.

ವೃಶ್ಚಿಕ

ನಿಮ್ಮ ವೆಚ್ಚಗಳನ್ನು ನಿಯಂತ್ರಿಸಲು ಪ್ರಯತ್ನಿಸಿ ಮತ್ತು ಇಂದು ತುಂಬಾ ಖರ್ಚು ಮಾಡಬೇಡಿ. ಸ್ನೇಹಿತರೊಂದಿಗಿನ ಸಂಜೆ ಆನಂದ ಹಾಗೂ ಕೆಲವು ರಜಾ ಯೋಜನೆಗಳಿಗೆ ಉತ್ತಮವಾಗಿರುತ್ತದೆ. ಪ್ರಣಯಾನಂದದ ಸಾಧ್ಯತೆಗಳಿವೆ ನಿಮ್ಮ ಸ್ಪರ್ಧಾತ್ಮಕ ಸ್ವಭಾವ ನೀವು ಪ್ರವೇಶಿಸುವ ಯಾವುದೇ ಸ್ಪರ್ಧೆಯಲ್ಲೂ ನಿಮ್ಮನ್ನು ಗೆಲ್ಲಿಸುತ್ತದೆ. ನೀವು ನಿಮ್ಮ ಫಾರ್ಮ್‌ನಲ್ಲಿದಿದ್ದರಿಂದ ನಿಮ್ಮ ಮೇಲಿನವರು ನಿಮ್ಮ ಜೊತೆ ಇಂದು ತಂಬಾ ಕಠಿಣವಾಗಿ ವರ್ತಿಸುತ್ತಿದ್ದಾರೆಂದು ನೀವು ಅಂದುಕೊಳ್ಳಬಹುದು.

ಧನು

ಇಂದು ಮಾಡಿದ ಹೂಡಿಕೆ ನಿಮ್ಮ ಅಭ್ಯುದಯ ಮತ್ತು ಆರ್ಥಿಕ ಭದ್ರತೆಯನ್ನು ಹೆಚ್ಚಿಸುತ್ತದೆ. ಬಿಕ್ಕಟ್ಟಿನ ಸಮಯದಲ್ಲಿ ನಿಮಗೆ ಸಹಾಯ ಮಾಡಿದ ಸಂಬಂಧಿಗಳಿಗೆ ನಿಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿ. ನಿಮ್ಮ ಸಣ್ಣ ಕೃತಜ್ಞತೆ ಅವರಿಗೆ ಚೈತನ್ಯ ನೀಡುತ್ತದೆ. ಕೃತಜ್ಞತೆ ಜೀವನದ ಸೊಗಸನ್ನು ಹೆಚ್ಚಿಸುತ್ತದೆ ಮತ್ತು ಕೃತಘ್ನತೆ ಅದಕ್ಕೆ ಕಲೆಗಳನ್ನು ಹಚ್ಚುತ್ತದೆ. ಕೆಲವರಿಗೆ ಮದುವೆಯಾಗುವ ಸಾಧ್ಯತೆಗಳು ಹಾಗೂ ಇನ್ನೂ ಕೆಲವರಿಗೆ ಪ್ರಣಯ ಕಾಲ. ಹೊರಸ್ಥಳಕ್ಕೆ ಪ್ರಯಾಣ ಆರಾಮದಾಯಕವಾಗಿರುವುದಿಲ್ಲ-ಆದರೆ ಇದು ಪ್ರಮುಖ ಸಂಪರ್ಕಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ನಿಮ್ಮ ಸಂಗಾತಿಯ ಎಂದಿಗೂ ಇಷ್ಟೊಂದು ಅದ್ಭುತವಾಗಿರಲಿಲ್ಲ. ನೀವು ನಿಮ್ಮ ಸಂಗಾತಿಯಿಂದ ಒಂದು ಸಂತೋಷಮಯ ಆಶ್ಚರ್ಯವನ್ನು ಪಡೆಯುತ್ತೀರಿ.

ಮಕರ

ನಿಮ್ಮ ಜ್ಞಾನ ಮತ್ತು ಒಳ್ಳೆಯ ಹಾಸ್ಯ ನಿಮ್ಮ ಬಳಿಯಿರುವ ಜನರನ್ನು ಆಕರ್ಷಿಸಬಹುದು. ಪ್ರೀತಿ ನಿಮ್ಮ ಪ್ರೀತಿಪಾತ್ರರೊಡನೆ ಹಂಚಿಕೊಳ್ಳಬೇಕಾದ ಭಾವನೆ. ದೇವರು ತಮಗೆ ತಾವೇ ಸಹಾಯ ಮಾಡಿಕೊಳ್ಳುವವರಿಗೆ ಸಹಾಯ ಮಾಡುತ್ತಾನೆಂದು ನೆನಪಿಡಬೇಕು. ಇದು ನಿಮ್ಮ ಸಂಗಾತಿಯ ಜೊತೆಗಿನ ನಿಮ್ಮ ಜೀವನದ ಅತ್ಯುತ್ತಮ ದಿನವಾಗಿರಬಹುದು.

ಕುಂಭ

ಹೆಚ್ಚುವರಿ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಬೇಕು. ನಿಮ್ಮ ಸಂಗಾತಿ ಬೆಂಬಲ ನೀಡುತ್ತಾರೆ ಹಾಗೂ ಸಹಾಯ ಮಾಡುತ್ತಾರೆ. ನಿಮ್ಮ ಪ್ರೇಮಿಯಿಂದ ದೂರವುಳಿಯಲು ತುಂಬಾ ಕಷ್ಟವಾಗುತ್ತದೆ. ಜಾಗ್ರತೆಯ ನಡವಳಿಕೆಗಳಿರಬಹುದಾದ ಒಂದು ದಿನ - ಇಲ್ಲಿ ನಿಮ್ಮ ಮನಸ್ಸಿಗಿಂತ ನಿಮ್ಮ ಹೃದಯದ ಅಗತ್ಯ ಹೆಚ್ಚಿರುತ್ತದೆ. ಇಂದು ನಿಮ್ಮ ಜೀವನ ಸಂಗಾತಿಯ ವಟಗುಟ್ಟುವಿಕೆಯಿಂದಾಗಿ ನಿಮಗೆ ಸಿಟ್ಟು ಬರಬಹುದು, ಆದರೆ ಅವನು / ಅವಳು ನಿಮಗೆ ನಿಜವಾಗಿಯೂ ಏನಾದರೂ ಒಳ್ಳೆಯದನ್ನು ಮಾಡುತ್ತಾರೆ.

ಮೀನ

ನಿಮ್ಮ ಮಾತುಗಳು ನಿಮ್ಮ ವಿರುದ್ಧ ಹೋಗಿ ನಿಮ್ಮ ಕುಟುಂಬದ ಖ್ಯಾತಿಯನ್ನು ಹಾಳು ಮಾಡಬಹುದಾದ್ದರಿಂದ ಸಾಧ್ಯವಾದರೆ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಮೊದಲು ಸಾಕಷ್ಟು ಯೋಚಿಸಿ. ಹಣಕಾಸಿನಲ್ಲಿ ಸುಧಾರಣೆ ನೀವು ಅಗತ್ಯ ವಸ್ತುಗಳನ್ನು ಖರೀದಿಸುವುದನ್ನು ಅನುಕೂಲಕರವಾಗಿಸುತ್ತದೆ. ಅತಿಥಿಗಳು ನಿಮ್ಮ ಮನೆಗೆ ಭೇಟಿ ನೀಡಿ ಅದನ್ನು ಆಹ್ಲಾದಕರ ಮತ್ತು ಅದ್ಭುತ ದಿನವನ್ನಾಗಿಸುತ್ತಾರೆ. ಇಂದು ನೀವು ಒಂದು ಹೃದಯ ಒಡೆಯುವುದನ್ನು ತಪ್ಪಿಸುತ್ತೀರಿ. ನೀವು ಒಂದು ವಾದದಲ್ಲಿ ಸಿಲುಕಿಕೊಂಡಲ್ಲಿ ಕಠಿಣ ಮಾತುಗಳನ್ನಾಡದಂತೆ ಎಚ್ಚರಿಕೆ ವಹಿಸಿ. ಸುದೀರ್ಘ ಸಮಯದ ನಂತರ, ನೀವು ಮತ್ತು ನಿಮ್ಮ ಸಂಗಾತಿ ಯಾವುದೇ ಜಗಳಗಳು ಮತ್ತು ವಾದಗಳಿಲ್ಲದೇ ಒಟ್ಟಾಗಿ ಪ್ರೇಮಭರಿತವಾದ ಶಾಂತಿಯುತ ದಿನವನ್ನು ಕಳೆಯುತ್ತೀರಿ.
Astrology
Cricket Score
Poll Questions