ಮೇಷ

ಯಾವುದೇ ಭಿನ್ನಾಭಿಪ್ರಾಯದ ವಿಷಯಗಳಿದ್ದಲ್ಲಿ - ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳಿ. ಇಂದು ಪ್ರಣಯಕ್ಕಾಗಿ ಸಂಕೀರ್ಣ ಜೀವನವನ್ನು ತ್ಯಜಿಸಿ. ನಿಮ್ಮ ಕೆಲಸ ಮತ್ತು ನಿಮ್ಮ ಆದ್ಯತೆಗಳ ಮೇಲೆ ಗಮನವಿಡಿ. ಜಾಗ್ರತೆಯ ನಡವಳಿಕೆಗಳಿರಬಹುದಾದ ಒಂದು ದಿನ - ಇಲ್ಲಿ ನಿಮ್ಮ ಮನಸ್ಸಿಗಿಂತ ನಿಮ್ಮ ಹೃದಯದ ಅಗತ್ಯ ಹೆಚ್ಚಿರುತ್ತದೆ. ನಿಮ್ಮ ವೈವಾಹಿಕ ಜೀವನ ಈ ದಿನಗಳಲ್ಲಿ ಯಾವುದೇ ರೋಮಾಂಚನವನ್ನು ಹೊಂದಿಲ್ಲ; ನಿಮ್ಮ ಸಂಗಾತಿಯ ಜೊತೆ ಮಾತನಾಡಿ ಮತ್ತು ಆನಂದಕರವಾದ್ದೇನಾದರೂ ಯೋಜಿಸಿ.

ವೃಷಭ

ಕುಟುಂಬದ ಸದಸ್ಯರ ಸಹಾಯ ನಿಮ್ಮ ಅಗತ್ಯಗಳನ್ನು ಪೂರೈಸುತ್ತದೆ. ನಿಮ್ಮ ಪ್ರೇಮಮಯ ವೀಕ್ಷಣೆಗಳನ್ನು ಅಭಿವ್ಯಕ್ತಿಗೊಳಿಸಿ. ಉನ್ನತ ಮಟ್ಟದಲ್ಲಿ ಕೆಲಸ ಮಾಡುವ ಕೆಲವರಿಂದ ಸ್ವಲ್ಪ ವಿರೋಧ ಬರಬಹುದಾದರೂ ನ ಶಾಂತವಾಗಿರುವುದು ಮುಖ್ಯ. ಸಮಸ್ಯೆಗಳಿಗೆ ಬಲುಬೇಗನೆ ಪರಿಹಾರ ಕಂಡುಹಿಡಿಯುವ ನಿಮ್ಮ ಸಾಮರ್ಥ್ಯ ನಿಮಗೆ ಗುರುತಿಸುವಿಕೆ ತರುತ್ತದೆ. ನೀವು ಅಥವಾ ನಿಮ್ಮ ಸಂಗಾತಿಗೆ ಇಂದು ಹಾಸಿಗೆಯಲ್ಲಿ ಗಾಯವಾಗಬಹುದಾಗಿದೆ, ಆದ್ದರಿಂದ ಸೌಮ್ಯವಾಗಿ ವರ್ತಿಸಿ.

ಮಿಥುನ

ನಿಮ್ಮ ಸಂಗಾತಿಗೆ ಸಾಕಷ್ಟು ಗಮನ ನೀಡಲಾಗದಿದ್ದಲ್ಲಿ ಅದು ಅವರ ಅಸಮಾಧಾನಕ್ಕೆ ಕಾರಣವಾಗಬಹುದು. ನೀವು ಕೆಲಸ ಮಾಡುವ ಬಗ್ಗೆ ಖಚಿತವಾಗಿಲ್ಲದಿದ್ದರೆ ಯಾವ ಭರವಸೆಯನ್ನೂ ನೀಡಬೇಡಿ. ವೈಯಕ್ತಿಕ ಮತ್ತು ಗೌಪ್ಯವಾದ ಮಾಹಿತಿಯನ್ನು ಬಹಿರಂಗಪಡಿಸಬೇಡಿ. ನಿಮ್ಮ ಸಂಗಾತಿ ನಿಮ್ಮ ಬಗ್ಗೆ ಗಮನ ಹರಿಸುತ್ತಿಲ್ಲವೆಂದು ನಿಮಗನಿಸಬಹುದು, ಆದರೆ ಕೊನೆಯಲ್ಲಿ ಅವರು ನಿಮಗಾಗಿಯೇ ವ್ಯವಸ್ಥೆಗಳನ್ನು ಮಾಡುತ್ತಿದ್ದರೆಂದು ನಿಮಗೆ ಅರಿವಾಗುತ್ತದೆ

ಕಟಕ

ಇಂದು ನಿಮ್ಮ ಪ್ರೇಮಿಯು ಅನಗತ್ಯ ಬೇಡಿಕೆಗಳನ್ನು ಮಾಡಲು ಬಿಡಬೇಡಿ. ಕೆಲಸದ ಬಗ್ಗೆ ಅಸಮಾಧಾನ ಹೊಂದಿರಲು ಜೀವನ ತುಂಬಾ ಅಮೂಲ್ಯವಾಗಿದೆ. ಪರಿಸ್ಥಿತಿಗಳು ನಿಮ್ಮ ತಾಳ್ಮೆ ಪರೀಕ್ಷಿಸಬಹುದು. ನಿಮ್ಮ ಸ್ಪರ್ಧಾತ್ಮಕ ಸ್ವಭಾವ ನೀವು ಪ್ರವೇಶಿಸುವ ಯಾವುದೇ ಸ್ಪರ್ಧೆಯಲ್ಲೂ ನಿಮ್ಮನ್ನು ಗೆಲ್ಲಿಸುತ್ತದೆ. ನಿಮ್ಮ ಸಂಗಾತಿಯ ಜೊತೆಗಿನ ನಿಮ್ಮ ಭಾವನಾತ್ಮಕ ಬಂಧ ಇಂದು ಬಳಲಬಹುದು.

ಸಿಂಹ

ನೀವು ಇಂದು ಪಡೆದ ಹೆಚ್ಚುವರಿ ಜ್ಞಾನವು ಸಮಕಾಲೀನರೊಂದಿಗೆ ವ್ಯವಹರಿಸುವಾಗ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಜೀವನದಲ್ಲಿ ನಂತರ ವಿಷಾದಿಸಬಹುದಾದ ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ. ನಿಮ್ಮ ವೈವಾಹಿಕ ಜೀವನದಲ್ಲಿ ಇಂದು ಪರಿಸ್ಥಿತಿಗಳು ನಿಮ್ಮ ಪರವಾಗಿರಬಹುದು.

ಕನ್ಯಾ

ಇಂದು, ನೀವು ಮತ್ತು ನಿಮ್ಮ ಪ್ರೀತಿ ಸಂಗಾತಿ ಪ್ರೀತಿಯ ಸಾಗರದಲ್ಲಿ ತೇಲುತ್ತೀರಿ ಮತ್ತು ಪ್ರೀತಿಯ ಔನ್ನತ್ಯವನ್ನು ಅನುಭವಿಸುತ್ತೀರಿ. ಇತರರನ್ನು ನಿಮಗೆ ಬೇಕಾದ ಕೆಲಸಗಳನ್ನು ಮಾಡಲು ಒತ್ತಾಯಿಸಲು ಪ್ರಯತ್ನಿಸಬೇಡಿ. ಕೆಲವರಿಗೆ ಅನಿರೀಕ್ಷಿತ ಪ್ರಯಾಣ ಒತ್ತಡಭರಿತವೂ ಮತ್ತು ಉದ್ವೇಗಭರಿತವೂ ಆಗಿರುತ್ತದೆ. ಉತ್ತಮ ಆಹಾರ, ಪ್ರಣಯದ ಕ್ಷಣಗಳು; ಇವೆಲ್ಲವನ್ನೂ ನೀವು ಇಂದು ನಿರೀಕ್ಷಿಸಬಹುದಾಗಿದೆ.

ತುಲಾ

ಇಂದು ಯಾರನ್ನೂ ಚುಡಾಯಿಸಬೇಡಿ. ತೃಪ್ತಿಕರ ಫಲಿತಾಂಶಗಳನ್ನು ಪಡೆಯಲು ಸರಿಯಾಗಿಒ ಯೋಜನೆ ಹಾಕಿ - ನೀವು ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸುತ್ತಿದ್ದಂತೆ ಒತ್ತಡ ನಿಮ್ಮ ಮನಸ್ಸನ್ನು ಅವರಿಸುತ್ತದೆ. ನಿಮ್ಮ ಸಮಯ ಮತ್ತು ಶಕ್ತಿಯನ್ನು ಇತರರಿಗೆ ಸಹಾಯ ಮಾಡಲು ಸಮರ್ಪಿಸಿ - ಆದರೆ ನಿಮಗೆ ಸಂಬಂಧಿಸಿರದ ವಿಷಯಗಳಲ್ಲಿ ತೊಡಗಿಸಿಕೊಳ್ಳಬೇಡಿ. ನಿಮ್ಮ ಸಂಗಾತಿ ನೀವು ಹೊಂದಿರುವ ಅಷ್ಟೇನೂ ಸಾಮರಸ್ಯವಿರದ ವೈವಾಹಿಕ ಜೀವನದ ಬಗ್ಗೆ ನಿಮ್ಮ ಜೊತೆ ಜಗಳವಾಡಬಹುದು.

ವೃಶ್ಚಿಕ

ನಿಮ್ಮ ಪ್ರಿಯತಮೆಯ ಜೊತೆ ತಿಳುವಳಿಕೆ. ನಿಮ್ಮ ವೃತ್ತಿ ಅವಕಾಶಗಳನ್ನು ಹೆಚ್ಚಿಸಲು ನಿಮ್ಮ ವೃತ್ತಿಪರ ಶಕ್ತಿಯನ್ನು ಬಳಸಿ. ನಿಮ್ಮ ಚಟುವಟಿಕೆಯ ಕ್ಷೇತ್ರದಲ್ಲಿ ನೀವು ಅಪರಿಮಿತ ಯಶಸ್ಸು ಸಾಧಿಸುವ ಸಾಧ್ಯತೆಯಿದೆ. ಮೇಲುಗೈ ಸಾಧಿಸಲು ನಿಮ್ಮ ಎಲ್ಲಾ ಕೌಶಲನ್ನು ಬಳಸಿ. ಹೆಚ್ಚಿನ ವಿಷಯಗಳು ನೀವು ಬಯಸಿದಂತೆ ಅಗುವ –ಒಂದು ಉಜ್ವಲವಾದ ಹಾಸ್ಯದಿಂದ ತುಂಬಿದ ದಿನ. ನಿಮ್ಮ ಸಂಗಾತಿಯು ಇಂದು ಕೆಲವು ಕುಖ್ಯಾತ ವಿಷಯಗಳ ಜೊತೆಗೆ ನಿಮ್ಮ ಹದಿಹರೆಯದ ದಿನಗಳನ್ನು ನೆನಪಿಸುತ್ತಾರೆ.

ಧನು

ಎಚ್ಚರಿಕೆಯಿಂದ ನಡೆಗಳ ಒಂದು ದಿನ - ನಿಮ್ಮ ಕಲ್ಪನೆಗಳು ವಿಫಲಗೊಳ್ಳುವುದಿಲ್ಲವೆಂದು ನಿಮಗೆ ಖಚಿತವಾಗುವವರೆಗೂ ಅವುಗಳನ್ನು ಪ್ರಸ್ತುತಪಡಿಸಬೇಡಿ. ಪ್ರಯಾಣ ಅನುಕೂಲಕರವಾಗಿದ್ದರೂ ದುಬಾರಿಯಾಗಿರುತ್ತದೆ. ನಿಮ್ಮ ಹಳೆಯ ಸ್ನೇಹಿತರೊಬ್ಬರು ನಿಮ್ಮ ಜೀವನ ಸಂಗಾತಿಯ ಜೊತೆ ನೀವು ಹೊಂದಿದ ಹಳೆಯ ಸುಂದರ ನೆನಪುಗಳನ್ನು ಮತ್ತೆ ನೆನಪಿಸಬಹುದು.

ಮಕರ

ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ನಿಮಗೆ ನೆರವು ಮತ್ತು ಪ್ರೀತಿ ಒದಗಿಸುತ್ತಾರೆ. ನೀವು ಇಂದು ಪ್ರೀತಿಯ ಸಮೃದ್ಧ ಚಾಕೊಲೇಟ್‌ನ ರುಚಿ ಸವಿಯುತ್ತೀರಿ. ನೀವು ನೇರವಾದ ಉತ್ತರ ಕೊಡದಿದ್ದರೆ ನಿಮ್ಮ ಸಹವರ್ತಿಗಳು ಸಿಟ್ಟಾಗುವ ಸಂಭವವಿದೆ. ಇಂದು ವಿಷಯಗಳು ನೀವು ಬಯಸುವ ರೀತಿಯಲ್ಲಿ ನಡೆಯದ ದಿನಗಳಲ್ಲಿ ಒಂದು. ಮದುವೆಯ ನಂತರ, ಪಾಪವೇ ಪೂಜೆಯಾಗುತ್ತದೆ, ಮತ್ತು ನೀವು ಇಂದು ಬಹಳಷ್ಟು ಪೂಜೆ ಮಾಡಬಹುದು.

ಕುಂಭ

ನಿಮ್ಮ ಹಠಾತ್ ಪ್ರವೃತ್ತಿ ನಿಮ್ಮ ಸ್ನೇಹವನ್ನು ಹಾಳು ಮಾಡಬಹುದಾದ್ದರಿಂದ ನಿಮ್ಮ ಸ್ವಭಾವವನ್ನು ನಿಯಂತ್ರಿಸಿ. ನಿಮ್ಮ ಕೆಲಸ ಮತ್ತು ನಿಮ್ಮ ಆದ್ಯತೆಗಳ ಮೇಲೆ ಗಮನವಿಡಿ. ಹೊರಸ್ಥಳಕ್ಕೆ ಪ್ರಯಾಣ ಆರಾಮದಾಯಕವಾಗಿರುವುದಿಲ್ಲ-ಆದರೆ ಇದು ಪ್ರಮುಖ ಸಂಪರ್ಕಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ನಿಮ್ಮ ಸಂಗಾತಿಯ ಮೇಲೆ ಕೋಪಗೊಂಡಲ್ಲಿ, ನಿಮಗೆ ತ್ವರಿತ ಪ್ರತಿಕ್ರಿಯೆ ಸಿಗುತ್ತದೆ. ಆದ್ದರಿಂದ, ನಿಯಂತ್ರಣದಲ್ಲಿರಿ.

ಮೀನ

ನೀವು ಇಂದು ಕೆಲಸದಲ್ಲಿ ತಲೆನೋವು ಅನುಭವಿಸಬಹುದಾಗಿದ್ದು ಮುಖ್ಯವಾದ ಕೆಲಸಗಳನ್ನು ಮಾಡಲು ನೀವು ಇಂದು ಫಾರ್ಮ್‌ನಲ್ಲಿಲ್ಲವೆಂದು ನಿಮಗನಿಸಬಹುದು. ನೀವು ಶಕ್ತಿಶಾಲಿ ಸ್ಥಳಗಳಲ್ಲಿರುವವರ ಜೊತೆ ಒಡನಾಡುವ ಅಗತ್ಯವಿದೆ. ಇಂದು ನಿಮ್ಮ ಸಂಗಾತಿ ತನ್ನ ಸ್ನೇಹಿತರು ಜೊತೆ ವ್ಯಸ್ತವಾಗಬಹುದು ಹಾಗೂ ಇದು ನಿಮಗೆ ಅಸಮಾಧಾನ ತರಬಹುದು.
Astrology
Cricket Score
Poll Questions