ಸುಭಾಷಿತ :

Tuesday, September 17 , 2019 7:00 AM

-->

ಟಾಯ್ಲೆಟ್ ಮ್ಯಾಟ್ ಮೇಲೆ ಗಣೇಶನ ಚಿತ್ರ : ಅಮೆಜಾನ್ ವಿರುದ್ಧ ಎಫ್ ಐ ಆರ್ ದಾಖಲು


Saturday, May 18th, 2019 10:46 am

ನೋಯ್ಡಾ: ಆನ್ ಲೈನ್ ಮಾರಾಟ ತಾಣ ಅಮೆರಿಕ ಮೂಲದ ಅಮೆಜಾನ್ ಮತ್ತೆ ಭಾರತೀಯರ ಕೋಪಕ್ಕೆ ಗುರಿಯಾಗಿದ್ದಾರೆ. ಅಲ್ಲದೆ ಅಮೆಜಾನ್ ವಿರುದ್ಧ ನೋಯ್ಡಾ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.

ಮಹಾತ್ಮ ಗಾಂಧಿ ಚಿತ್ರವಿರುವ ಚಪ್ಪಲಿ ಮಾರಾಟಕ್ಕೆ ಮಂದಾಗಿ ಭಾರತೀಯರಿಂದ ಉಗಿಸಿಕೊಂಡಿದ್ದ ಅಮೆಜಾನ್ ಇದೀಗ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಕೆಲಸ ಮಾಡಿದೆ. ಶೌಚಗೃಹಗಳಿಗೆ ಬಳಸುವ ಟೈಲ್ಸ್ ಮತ್ತು ಮ್ಯಾಟ್ ಗಳ ಮೇಲೆ ಗಣೇಶನ ಚಿತ್ರ ಹಾಕಿರುವ ಅಮೆಜಾನ್ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಅಮೆಜಾನ್ ಬಾಯ್ಕಾಟ್ ಆನ್ ಲೈನ್ ಅಭಿಯಾನ ಆರಂಭವಾಗಿದೆ.

ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಿರುವ ಅಮೆಜಾನ್ ವಕ್ತಾರ, ಮಾರಾಟಗಾರರು ಕಂಪನಿಯ ಮಾರ್ಗದರ್ಶಿ ಸೂಚಕಗಳನ್ನು ಪಾಲಿಸಬೇಕು, ಕಾರ್ಯರೂಪಕ್ಕೆ ತರದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ, ಜೊತೆಗೆ ಅವರ ಖಾತೆಯನ್ನು ವಜಾಗೊಳಿಸುವುದಾಗಿ ತಿಳಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions