ಸುಭಾಷಿತ :

Monday, September 23 , 2019 3:50 PM

ಮಕ್ಕಳ ಬಾಯಲ್ಲಿ ನೀರೂರುವಂತೆ ಮಾಡುವ ಆಲೂ ಟಿಕ್ಕಿ


Monday, May 20th, 2019 5:16 pm

ಫುಡ್ ಡೆಸ್ಕ್ : ಸಂಜೆ ಕಾಫಿಗೆ ಮಕ್ಕಳಿಗೆ ಇಷ್ಟವಾಗುವಂತಹ ತಿಂಡಿ ಮಾಡಿ ಬಳಸಬೇಕು ಎಂದು ನೀವು ಅಂದುಕೊಂಡರೆ ನಿಮಗಾಗಿ ಸ್ಪೆಷಲ್ ರೆಸಿಪಿ ಇಲ್ಲಿದೆ. ಅದೇನೆಂದರೆ ಆಲೂ ಟಿಕ್ಕಿ. ಟೇಸ್ಟಿಯಾಗಿ ಕ್ರಂಚಿ ಟಿಕ್ಕಿ ತಯಾರಿಸೋದು ಹೇಗೆ ನೋಡೋಣ…

ಬೇಕಾಗುವ ಸಾಮಾಗ್ರಿಗಳು : ಬೇಯಿಸಿದ ಆಲೂಗಡ್ಡೆ ೨, ಬೇಯಿಸಿದ ಬಟಾಣಿ ,ಅರ್ಧ ಕಪ್ ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ 2, ಉಪ್ಪು, ಚಿಟಿಕೆ ಇಂಗು, ಶುಂಠಿ ಸಣ್ಣ ತುಂಡು, ಮೆಣಸಿನ ಪುಡಿ ಅರ್ಧ ಚಮಚ/1 ಚಮಚ, ಎಣ್ಣೆ 2 ಚಮಚ , ಜೀರಿಗೆ 1/4 ಚಮಚ, ಕಾರ್ನ್ ಫ್ಲೋರ್ ೨ ಚಮಚ, ಬ್ರೆಡ್ ಪುಡಿ

ತಯಾರಿಸುವ ವಿಧಾನ :
ಬೇಯಿಸಿದ ಆಲೂಗಡ್ಡೆ ಮತ್ತು ಬಟಾಣಿಯನ್ನು ಚೆನ್ನಾಗಿ ಮ್ಯಾಶ್ ಮಾಡಿ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಮಿಕ್ಸ್ ಮಾಡುವಾಗ ನೀರು ಸೇರಿಸಬೇಡಿ. ಈಗ ಅದನ್ನು ಟಿಕ್ಕಿ ಆಕಾರದಲ್ಲಿ ವೃತ್ತಾಕಾರದಲ್ಲಿ ಶೇಪ್ ಮಾಡಿ.
ಜೋಳದ ಪುಡಿಗೆ ಸ್ವಲ್ಪ ನೀರು ಮಿಕ್ಸ್ ಮಾಡಿ ಹಿಟ್ಟು ತಯಾರಿಸಿ. ಈ ಹಿಟ್ಟು ನೀರಾಗಿದ್ದರು ಪರವಾಗಿಲ್ಲ.
ಈಗ ತಯಾರಿಸಿ ಇಟ್ಟ ಟಿಕ್ಕಿ ಯನ್ನು ಜೋಳದ ಹಿಟ್ಟಿನಲ್ಲಿ ಒಂದು ಬಾರಿ ಡಿಪ್ ಮಾಡಿ ತೆಗೆಯಿರಿ.
ನಂತರ ಬ್ರೆಡ್ ಕ್ರಂಬ್ಸ್ ನಲ್ಲಿ ರೋಲ್ ಮಾಡಿ ಎಣ್ಣೆಯಲ್ಲಿ ಕಾಯಿಸಿ.
ಎರಡು ಬದಿ ಚೆನ್ನಾಗಿ ಕಾದ ಮೇಲೆ ಇಳಿಸಿ.
ಈಗ ರುಚಿ ರುಚಿಯಾದ ಆಲೂ ಟಿಕ್ಕಿ ಸವಿಯಲು ರೆಡಿ. ಇದನ್ನು ಸಾಸ್ ಅಥವಾ ಗ್ರೀನ್ ಚಟ್ನಿ ಜೊತೆ ಸೇವಿಸಬಹುದು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions