ಬಾದಾಮಿ ಎಣ್ಣೆಯಿಂದ ಆರೋಗ್ಯದೊಂದಿಗೆ ಸೌಂದರ್ಯ ವರ್ಧನೆ


Thursday, July 12th, 2018 10:13 am

ಸ್ಪೆಷಲ್ ಡೆಸ್ಕ್ : ಬಾದಾಮಿ ಎಣ್ಣೆ ಇದು ತ್ವಚೆಗೂ ಅಗತ್ಯ, ನಿಮ್ಮ ಹೃದಕ್ಕೂ ಅಗತ್ಯ. ಅತ್ಯಂತ ಹೆಚ್ಚು ನ್ಯೂಟ್ರಿಷಿಯನ್ ಹೊಂದಿದ ಎಣ್ಣೆ ಇದಾಗಿದೆ. ಇದು ತನ್ನ ಹಲವಾರು ವಿಶಿಷ್ಟ ಗುಣದಿಂದಾಗಿ ಒಬ್ಬ ವ್ಯಕ್ತಿಯ ಅರೋಗ್ಯ ವರ್ಧನೆಯಲೂ ಸೌಂದರ್ಯ ವರ್ಧನೆಯಲೂ ಸಹಾಯ ಮಾಡುತ್ತದೆ. ಹೇಗೆ ಅನ್ನೋದನ್ನು ನೀವು ತಿಳಿದುಕೊಳ್ಳಬೇಕೇ?

ಹೊಳೆಯುವ ತ್ವಚೆ : ಒಂದು ಚಮಚ ಲಿಂಬೆ ರಸಕ್ಕೆ ಎರಡು ಚಮಚ ಬಾದಾಮಿ ಎಣ್ಣೆ ಸೇರಿಸಿ ಫೇಸ್ ಪ್ಯಾಕ್ ರೀತಿ ಮುಖಕ್ಕೆ ಹಚ್ಚಿಕೊಳ್ಳಬೇಕು. ಬಳಿಕ ಉಗುರು ಬಿಸಿ ನೀರಿನಲ್ಲಿ ಮುಖ ತೊಳೆದುಕೊಳ್ಳಬೇಕು. ಇದರಿಂದ ಮುಖ ಇನ್ನಷ್ಟು ಹೊಳೆಯುತ್ತದೆ.

ಮೊಡವೆ ನಿವಾರಣೆ : ಬಾದಾಮಿ ಎಣ್ಣೆಯಲ್ಲಿ ವಿಟಾಮಿನ್ ಈ ಹೆಚ್ಚಿನ ಪ್ರಮಾಣದಲ್ಲಿದೆ. ಇದನ್ನು ದಿನ ನಿತ್ಯ ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಮೂಡಿದ ಮೊಡವೆಗಳು ನಿವಾರಣೆಯಾಗುತ್ತವೆ.

ಡಾರ್ಕ್ ಸರ್ಕಲ್ : ಪ್ರತಿ ದಿನ ಮಲಗುವ ಮುನ್ನ ೨ ವಾರಗಳ ಕಾಲ ತಪ್ಪದೆ ಬಾದಾಮಿ ಎಣ್ಣೆಯನ್ನು ಕಣ್ಣಿನ ಕೆಳಗೆ ಹಚ್ಚಿ ಮಲಗಿ. ಎರಡು ವಾರದಲ್ಲಿ ಉತ್ತಮ ಫಲಿತಾಂಶ ಸಿಕ್ಕೇ ಸಿಗುತ್ತದೆ.

ಕೂದಲಿನ ಬೆಳವಣಿಗೆ : ಹರಳೆಣ್ಣೆ ಮತ್ತು ಬಾದಾಮಿ ಎಣ್ಣೆಯ ಮಿಶ್ರಣವನ್ನು ಕೂದಲಿಗೆ ಹಚ್ಚಿ ಆರ್ಧ ಗಂಟೆಯ ಬಳಿಕ ಕೂದಲನ್ನು ಶ್ಯಾಂಪೂವಿನಿಂದ ತೊಳೆದರೆ ಕೂದಲು ಸುಂದರವಾಗಿ ಕಾಣುತ್ತದೆ. ಜೊತೆಗೆ ದಟ್ಟವಾಗಿ ಬೆಳೆಯುತ್ತದೆ.

ಸಾಫ್ಟ್ ತ್ವಚೆ : ಬಾದಾಮಿ ಎಣ್ಣೆ ಮತ್ತು ಜೇನನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿದರೆ ಮುಖದ ತ್ವಚೆ ಮೃದುವಾಗುತ್ತದೆ.

ವಯಸ್ಸಾಗುವಿಕೆ ಲಕ್ಷಣ : ವಯಸ್ಸಾಗುವಿಕೆಯ ಲಕ್ಷಣವನ್ನು ತಡೆಗಟ್ಟಲು ಬಾದಾಮಿ ಎಣ್ಣೆಗೆ ವಿಟಾಮಿನ್ ಈ ಬೆರೆಸಿ ಮುಖಕ್ಕೆ ಹಚ್ಚಿ ಇದರಿಂದ ನೆರಿಗೆ ಉಂಟಾಗದ ಮುಖ ಸುಂದರವಾಗಿ ಕಾಣುತ್ತದೆ.

ಹಿಮ್ಮಡಿ ಒಡೆತ : ಹಿಮ್ಮಡಿ ಒಡೆದಿದ್ದರೆ ರಾತ್ರಿ ಮಲಗುವ ಮುನ್ನ ಹಿಮ್ಮಡಿಗೆ ಬಾದಾಮಿ ಎಣ್ಣೆ ಹಚ್ಚಿ ಮಸಾಜ್ ಮಾಡಿ. ಬೆಳಗ್ಗೆ ಬಿಸಿ ನೀರಿನಲ್ಲಿ ಕಾಲು ತೊಳೆಯಿರಿ.

ಸ್ಟ್ರೆಚ್ ಮಾರ್ಕ್ : ಹೌದು ಸ್ಟ್ರೆಚ್ ಮಾರ್ಕ್ ನಿವಾರಣೆಗೂ ಇದು ಸಹಾಯ ಮಾಡುತ್ತದೆ. ಪ್ರತಿದಿನ ಸ್ನಾನ ಮಾಡಿದ ಕೂಡಲೇ ಸ್ಟ್ರೆಚ್ ಮಾರ್ಕ್ ಮೇಲೆ ಚೆನ್ನಾಗಿ ಒರೆಸಿ ಬಾದಾಮಿ ಎಣ್ಣೆ ಹಚ್ಚಿ ಮಸಾಜ್ ಮಾಡಿ. ಇದರಿಂದ ಕಲೆ ಬೇಗನೆ ಮಾಸುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Gadgets
State
Astrology
Cricket Score
Poll Questions