ಸುಭಾಷಿತ :

Thursday, January 23 , 2020 5:58 PM

ಹಳ್ಳಿ ಹುಡುಗಿಯಾಗಿ ‘ಸಿಂಗನ ತಲೆ ಕೆಡಿಸಿದ ನಾಗಕನ್ನಿಕೆ!


Tuesday, July 16th, 2019 11:28 am

ಸಿನಿಮಾಡೆಸ್ಕ್: ಅದಿತಿ ಪ್ರಭುದೇವ ಎಂಬುದು ಇದೀಗ ಕನ್ನಡದ ಬಹು ಬೇಡಿಕೆಯ ನಟಿಯರ ಸಾಲಿನಲ್ಲಿ ಕೇಳಿ ಬರುತ್ತಿರೋ ಪ್ರಧಾನವಾದ ಹೆಸರು. ಕಿರುತೆರೆಯಲ್ಲಿ ನಾಗಕನ್ನಿಕೆಯಾಗಿ ಪ್ರಸಿದ್ಧಿ ಪಡೆದುಕೊಂಡಿದ್ದ ಅದಿತಿ ಹಿರಿತೆರೆಗೆ ಪರಿಚಯವಾಗಿ ಹೆಚ್ಚೇನು ವರ್ಷಗಳಾಗಿಲ್ಲ. ಆದರೆ ಅವಕಾಶಗಳು ಮಾತ್ರ ಸರದಿ ಸಾಲಿನಲ್ಲಿ ಅವರನ್ನು ಅರಸಿ ಬರುತ್ತಿವೆ. ಆ ಸಾಲಿನಲ್ಲಿ ಸಿಂಗ ಇದೇ ತಿಂಗಳ ಹತ್ತೊಂಬತ್ತರಂದು ಬಿಡುಗಡೆಗೆ ರೆಡಿಯಾಗಿದೆ.

ವಿಜಯ್ ಕಿರಣ್ ನಿರ್ದೇಶನದ ಈ ಚಿತ್ರವನ್ನು ಉದಯ್ ಮೆಹ್ತಾ ನಿರ್ಮಾಣ ಮಾಡಿದ್ದಾರೆ. ಸಿಂಗ ಹಳ್ಳಿ ಹಿನ್ನೆಲೆಯ ಕಥಾನಕ ಹೊಂದಿದೆ ಅಂತೊಂದು ವಿಚಾರವನ್ನು ಚಿತ್ರತಂಡ ಅನಾವರಣಗೊಳಿಸಿದೆ. ಚಿರಂಜೀವಿ ಸರ್ಜಾ ಕೂಡಾ ಹಳ್ಳಿ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಅದಿತಿ ಪ್ರಭುದೇವ ಅವರಿಗೂ ಕೂಡಾ ಈ ಮೂಲಕ ಬಹು ಕಾಲದ ಕನಸಿನಂಥಾ ಪಾತ್ರವೇ ಅರಸಿ ಬಂದಿದೆ.

ಅದಿತಿ ಪ್ರಭುದೇವ ಅವರಿಲ್ಲಿ ಹಳ್ಳಿ ಹುಡುಗಿಯಾಗಿ ನಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಫ್ಯಾಷನ್ನೆಂಬುದು ಹಳ್ಳಿಗಳಿಗೂ ನುಗ್ಗಿಕೊಂಡಿದೆ. ಹಳ್ಳಿಗಳಿಂದಲೂ ನಿಜವಾದ ಫ್ಲೇವರ್ ಮರೆಯಾಗುತ್ತಿದೆ. ಅದಿತಿ ಇಲ್ಲಿ ಅಂಥಾ ಹಳ್ಳಿಗಳ ತುಂಬಾ ಒಂದು ಕಾಲದಲ್ಲಿ ಲಂಗ ದಾವಣಿ ಹಾಕಿಕೊಂಡು ಹುಡುಗೀರು ಕಂಗೊಳಿಸುತ್ತಿದ್ದಂಥಾ ಪಾತ್ರವನ್ನು ನಿರ್ವಹಿಸಿದ್ದಾರೆ. ಅದರ ಸಣ್ಣ ಸೂಚನೆಗಳು ಹಾಡು, ಟ್ರೈಲರ್ ಮೂಲಕ ಪ್ರೇಕ್ಷಕರನ್ನು ತಲುಪಿಕೊಂಡಿವೆ.

ಈವರೆಗೂ ಪ್ರತೀ ಚಿತ್ರದಲ್ಲಿಯೂ ಒಂದಕ್ಕಿಂತ ಒಂದು ಡಿಫರೆಂಟ್ ಎಂಬಂಥಾ ಪಾತ್ರಗಳೇ ಅದಿತಿಗೆ ಸಿಗುತ್ತವೆ. ಇಂಥಾ ವಿಭಿನ್ನ ಪಾತ್ರಗಳತ್ತಲೇ ಆಸಕ್ತಿ ಹೊಂದಿರೋ ಅವರು ಬಯಸಿದ್ದಂಥಾದ್ದೇ ಪಾತ್ರ ಸಿಂಗ ಚಿತ್ರದಲ್ಲಿ ಸಿಕ್ಕಿದೆ. ಹಳ್ಳಿಗಾಡಿನ ವಾತಾವರಣ, ಆ ಸಹಜ ಸ್ಥಿತಿಯಲ್ಲಿಯೇ ಬೆಳೆದು ಈ ಕ್ಷಣಕ್ಕೂ ಅದನ್ನೇ ಧ್ಯಾನಿ ಸೋ ಮನಸ್ಥಿತಿಯ ಅದಿತಿ ಸಿಂಗನ ಬಗ್ಗೆ ಶ್ಯಾನೆ ಹೋಪ್ ಇಟ್ಟುಕೊಂಡಿದ್ದಾರಂತೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions