ಸುಭಾಷಿತ :

Sunday, January 26 , 2020 4:20 AM

ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಮತ ಚಲಾಯಿಸುವ ಒಂದು ದಿನ ಮಾತ್ರ ನಮಗೆ ಬೆಲೆ – ನಟ ಉಪೇಂದ್ರ


Thursday, July 18th, 2019 11:02 am


ಬೆಂಗಳೂರು : ಇಂದು ದೋಸ್ತಿ ಸರ್ಕಾರ ಭವಿಷ್ಯ ವಿದಾಯವೋ, ವಿಶ್ವಾಸವೋ ಎಂಬಂತ ಸ್ಥಿತಿಯನ್ನು ತಲುಪಿದೆ. ಇಂತಹ ಸನ್ನಿವೇಶದಲ್ಲಿ ನಟ ಉಪೇಂದ್ರ, ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಮತ ಚಲಾಯಿಸುವ ಒಂದು ದಿನ ಮಾತ್ರ ನಮಗೆ ಬೆಲೆ ಇರುತ್ತದೆ. ಆನಂತ್ರ ನಾವು ಮೂಕ ಪ್ರೇಕ್ಷಕರು ಎಂಬುದಾಗಿ ಟ್ವಿಟ್ ಮಾಡಿ ರಾಜ್ಯ ರಾಜಕೀಯದ ಹೈ ಡ್ರಾಮವನ್ನು ವ್ಯಂಗ್ಯ ಮಾಡಿದ್ದಾರೆ.

ರಾಜ್ಯ ರಾಜಕೀಯದ ಹೈ ಡ್ರಾಮಕ್ಕೆ ಇಂದು ತೆರೆ ಬೀಳಲಿದೆ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಇಂದು ವಿಶ್ವಾಸ ಮತವನ್ನು ಸಾಭೀತು ಪಡೆಸಿ ಗೆಲ್ಲುವರೋ ಅಥವಾ ವಿಶ್ವಾಸ ಮತ ಸಾಭೀತು ಪಡಿಸದೇ ವಿದಾಯದ ಭಾಷಣ ಮಾಡಿ ನಿರ್ಗಮಿಸುವರೋ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಇಂತಹ ಸಂದರ್ಭದಲ್ಲಿ ನಟ ಉಪೇಂದ್ರ, ಈ ರಾಜಕೀಯ ನಾಟಕವನ್ನು ತಮ್ಮದೇ ಆದ ಶೈಲಿಯಲ್ಲಿ ಟ್ವಿಟರ್ ನಲ್ಲಿ ವ್ಯಂಗ್ಯಮಾಡಿದ್ದಾರೆ. ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಮತ ಚಲಾಯಿಸುವ ಒಂದು ದಿನ ಮಾತ್ರ ನಮಗೆ ಬೆಲೆ ಇರುತ್ತದೆ. ಆನಂತ್ರ ನಾವು ಮೂಕ ಪ್ರೇಕ್ಷಕರು ಎಂದು ಟೀಕಿಸಿದ್ದಾರೆ.

ಇನ್ನೂ ಮುಂದುವರೆದು.. ನಾಯಕರಿಂದ ಪ್ರಜೆಗಳಿಗೆ ಸಂಪೂರ್ಣ ಅಧಿಕಾರ ಹಸ್ತಾಂತರ ಮಾಡಲು ಬಹುಮತ ಬೇಕು. ಅದಕ್ಕೆ ಪ್ರಜೆಗಳೇ ಪ್ರಜಾಕೀಯ ಪಕ್ಷಕ್ಕೆ ಸ್ಪರ್ಧಿ ಹಾಗೂ ಕಾರ್ಯಕರ್ತರಾಗಬೇಕು. ಅಲ್ಲದೇ ನಾವು ಮತ್ತೊಬ್ಬ ನಾಯಕ ಮಾಡಲಿ ಎಂದು ಕಾಯಬಾರದು ಎಂಬುದಾಗಿ ಪ್ರಜೆಗಳನ್ನು ಎಚ್ಚರಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions