ಆಷಾಢ ಶುಕ್ರವಾರ : ಚಾಮುಂಡಿಬೆಟ್ಟಕ್ಕೆ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಭೇಟಿ


Friday, July 20th, 2018 4:41 pm


ಮೈಸೂರು: ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಇಂದು ಮೈಸೂರಿನ ಚಾಮುಂಡಿಬೆಟ್ಟಕ್ಕೆ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಭೇಟಿ ನೀಡಿ ದೇವರ ದರುಶನ ಮಾಡಿದರು. ಪ್ರತಿ ವರ್ಷ ಆಷಾಢ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ತಮ್ಮ ಸ್ನೇಹಿತರೊಂದಿಗೆ ಚಾಮುಂಡಿಬೆಟ್ಟಕ್ಕೆ ಆಗಮಿಸಿ ಚಾಮುಂಡಿ ತಾಯಿಯ ದರ್ಶನ ಪಡೆದಿದ್ದಾರೆ, ಆದೇ ರೀತಿ ಇಂದು ಕೂಡ ನಟ ದರ್ಶನ್ ಭೇಟಿ ನೀಡಿದರು.

ಇದೇ ವೇಳೆ ನಟ ದರ್ಶನ್ ನೋಡಿದ ಅಭಿಮಾನಿಗಳು ಅವರತ್ತ ಧಾವಿಸಿ ಅವರ ಜೊತೆ ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದರು.

ಇದೇ ವೇಳೆ ವೇಳೆ ಅಭಿಮಾನಿಗಳನ್ನು  ನಿಯಂತ್ರಿಸುವಾಗ ದೇವಾಲಯದಲ್ಲಿ ನೂಕುನುಗ್ಗಲು ಏರ್ಪಟ್ಟಿದ್ದು, ಪೊಲೀಸರು ದರ್ಶನ್ ಅವರನ್ನು ಒಳ ಬಿಡಲು ಹರಸಾಹಸ ಪಟ್ಟರು. ಬಳಿಕ ದರ್ಶನ್ ಹರಸಾಹಸ ಪಟ್ಟು ದೇವಾಲಯವನ್ನು ಪ್ರವೇಶಿಸಿದ್ದು, ಕೊನೆಗೂ ಚಾಮುಂಡಿ ತಾಯಿಯ ದರ್ಶನ ಪಡೆದು ದರ್ಶನ್ ವಾಪಸ್ಸಾದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions