ಸುಭಾಷಿತ :

Monday, September 23 , 2019 3:50 PM

‘ಪ್ರೀತ್ಸೆ..ಪ್ರೀತ್ಸೆ’ ಎಂದು ಪೀಡಿಸಿದ ಯುವಕ…ಅಪ್ರಾಪ್ತ ಬಾಲಕಿ ಮಾಡಿದ್ದೇನು..?


Friday, June 14th, 2019 7:45 pm

ಬೆಂಗಳೂರು  : ಪ್ರೀತಿಸುವಂತೆ ಹಿಂಸೆ ನೀಡುತ್ತಿದ್ದ ಯುವಕನೊಬ್ಬನ ಕಾಟದಿಂದ ಬೇಸತ್ತ ಅಪ್ರಾಪ್ತೆಯೊಬ್ಬಳು ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

14 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದು,  ಜಗದೀಶ್​ (22) ಪ್ರೀತಿಸುವಂತೆ ಕಾಟ ನೀಡುತ್ತಿದ್ದ ಯುವಕ. ಆರೋಪಿ ಜಗದೀಶ್​ ಬಾಲಕಿಗೆ ಅಶ್ಮೀಲ ಚಿತ್ರಗಳನ್ನ ತೋರಿಸಿ ಮದುವೆಯಾಗುವಂತೆ ಪ್ರತಿನಿತ್ಯ ಚಿತ್ರಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.ಇಲ್ಲವಾದಲ್ಲಿ ಮನೆಯವರನ್ನ ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದ ಎನ್ನಲಾಗಿದ್ದು ಇದಕ್ಕೆ ಹೆದರಿ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ಬೆಂಕಿ ಹಚ್ಚಿಕೊಂಡು ಗಂಭೀರ ಗಾಯಗೊಂಡಿದ್ದ ಬಾಲಕಿಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದ್ದು,  ಬಾಲಕಿ ಮೃತಪಟ್ಟಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions