ಲೋಕಾಯುಕ್ತರಿಗೆ ಚೂರಿ ಇರಿದ ಪ್ರಕರಣ : ತೇಜ್‌ರಾಜ್‌ನನ್ನು ತುಮಕೂರಿಗೆ ಕರೆತಂದು ಮಹಜರು


Thursday, March 8th, 2018 3:34 pm

ತುಮಕೂರು: ಲೋಕಾಯುಕ್ತ ನ್ಯಾಯಮೂರ್ತಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತೇಜರಾಜ್ ಶರ್ಮಾನನ್ನು ಪೊಲೀಸರು ತುಮಕೂರು ಜಿಲ್ಲೆಗೆ ಕರೆ ತಂದಿದ್ದಾರೆ.

ಬಿದಿರು ಮಳೆ ತೋಟದ ಮನೆಗೆ ತೇಜ್‌ರಾಜ್‌ನನ್ನು ಕರೆ ತಂದಿರುವ ಪೊಲೀಸರು, ಸ್ಥಳ ಮಹಜರು ನಡೆಸಿದರು. ಈ ಹಿಂದೆ ಇದೇ ತೋಟದಲ್ಲಿ ತೇಜರಾಜ್ ವಾಸವಾಗಿದ್ದ. ಅವನನ್ನು ಕರೆ ತಂದಿರುವ ಹಿನ್ನಲೆಯಲ್ಲಿ ತೇಜ್‌ರಾಜ್ ವಾಸವಿದ್ದ ಮನೆ ಬಳಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ತೇಜರಾಜ್ ವಾಸವಿದ್ದ ಬಾಡಿಗೆ ಮನೆ ಸುತ್ತ ಬ್ಯಾರಿಕೇಡ್ ಆಳವಡಿಸಲಾಗಿದೆ.

ಬಾಡಿಗೆ ಮನೆಯಲ್ಲಿ ಹಲವು ಕಡತಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆ ಮನೆಯಲ್ಲಿ ಪುಸ್ತಕಗಳು ಫೈಲ್‌ಗಳನ್ನು ಬಿಟ್ಟರೆ ಇನ್ನೇನು ಇಲ್ಲವೆಂದು ತಿಳಿದುಬಂದಿದೆ. ಅಲ್ಲದೆ, ಪರಿಶೀಲನೆಯ ವೇಳೆ ಪೊಲೀಸರು ವಿಡಿಯೋ ಚಿತ್ರೀಕರಣ ಮಾಡಿದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions