ಸುಭಾಷಿತ :

Saturday, October 19 , 2019 4:29 PM

ನಿಮ್ಮ ಲೈಂಗಿಕ ಜೀವನವನ್ನು ಹೆಚ್ಚಿಸಲು ಈ 7 ಆಹಾರಗಳು ಸಹಾಯ ಮಾಡುತ್ತವೆ


Sunday, September 15th, 2019 6:04 pm

ಸ್ಪೆಷಲ್‌ಡೆಸ್ಕ್: ನಿಮ್ಮ ಸಂಗಾತಿ ಜೊತೆಗಿನ ಸೆಕ್ಸ್ ನಿಮ್ಮನ್ನು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಆರೋಗ್ಯಕರವಾಗಿ ಇಡಲು ಸಹಾಯವಾಗುತ್ತದೆ ಎನ್ನುತ್ತವೆ ಸಂಶೋಧನೆಗಳು. ಸೋ ನಿಮ್ಮ ಸೆಕ್ಸ್ ಜೀವನವನ್ನು ಉತ್ತಮ ಪಡಿಸುವುದರಲ್ಲಿ ನೀವು ಸೇವಿಸುವ ಆಹಾರಗಳು ಕೂಡ ಉಪಯುಕ್ತ ಅಂದ್ರೆ ನೀವು ನಂಬಲೇ ಬೇಕು.

ನೀವು ನಿಮ್ಮ ಸಂಗಾತಿಯೊಂದಿಗೆ ಸೆಕ್ಸ್ ಜೀವನದಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ನೀವು ಸೇವನೆ ಮಾಡುತ್ತಿರುವ ಆಹಾರದಲ್ಲಿ ನಿಮಗೆ ಬೇಕಾಗಿರುವ ಅವಶ್ಯಕ ಪೋಷಕಾಂಶಗಳು ಸಿಗುತ್ತಿಲ್ಲ ಅಂತನೇ ಹೇಳಬಹುದು.

ನಾವು ಇಲ್ಲಿ ಹೇಳುತ್ತಿರುವ ಈ ಏಳು ಆಹಾರಗಳು ನಿಮ್ಮ ಸೆಕ್ಸ್ ಜೀವನವನ್ನು ಉತ್ತಮಪಡಿಸುವಲ್ಲಿ ಸಹಕಾರಿಯಾಗಲಿದೆ ಎನ್ನುವುದು ಸಂಶೋಧಕರ ಅಭಿಪ್ರಾಯ. ಸೋ ನಿಮಗೆ ಇಲ್ಲಿದೆ ಮಾಹಿತಿ

ಮಾಂಸ : ನೀವು ಮಾಂಸಹಾರಿಯಾಗಿದ್ದಾರೆ. ನಿಮ್ಮ ಲೈಂಗಿಕ ಜೀವನವನ್ನು ಸುಧಾರಿಸಲು ನಿಮ್ಮ ಆಹಾರದಲ್ಲಿ ವಿವಿಧ ಮಾಂಸ ಸೇವನೆ ಕೂಡ ಉತ್ತಮವಾಗಿದ್ದು, ಈ ಪೈಕಿ ಕೆಂಪು ಮಾಂಸ, ಕೋಳಿ ಮತ್ತು ಹಂದಿಮಾಂಸ ಉತ್ತಮ ಎನ್ನಲಾಗಿದೆ. ಈ ಮಾಂಸದಲ್ಲಿ ಕಾರ್ನಿಟೈನ್, ಎಲ್-ಅರ್ಜಿನೈನ್ ಮತ್ತು ಸತುವು ಹೆಚ್ಚಾಗಿದ್ದು, ಕಾರ್ನಿಟೈನ್ ಮತ್ತು ಎಲ್-ಅರ್ಜಿನೈನ್ ಅಮೈನೋ ಆಮ್ಲಗಳಾಗಿದ್ದು, ಇವು ರಕ್ತದ ಹರಿವನ್ನು ಸುಧಾರಿಸುತ್ತದೆ. ಹೀಗಾಗಿ ಪುರುಷರು ಮತ್ತು ಮಹಿಳೆಯರಲ್ಲಿ ಲೈಂಗಿಕ ಪ್ರತಿಕ್ರಿಯೆಗೆ ಈ ಆಹಾರ ಸಹಾಯವಾಗಲಿದೆ ಎನ್ನಲಾಗಿದೆ. ಇನ್ನು ನೀವು ಸಸ್ಯಹಾರಿಯಾಗಿದ್ದರೆ, ಕೆಲವು ಪ್ರಾಣಿ ಆಧಾರಿತ ಪ್ರೋಟೀನ್‌ಗಳಿರುವ ಧಾನ್ಯಗಳು, ಬೀಜಗಳು ಮತ್ತು ಡೈರಿ ಉತ್ಪನ್ನಗಳನ್ನು ಸಹ ನೀವು ಉಪಯೋಗಿಸಬಹುದಾಗಿದೆ.

ಸಿಂಪಿಗಳು : ಸಿಂಪಿಗಳ ಕಾಮೋತ್ತೇಜಕ ಗುಣಲಕ್ಷಣಗಳನ್ನು ಹೊಂದಿದ್ದಾವೆ ಎನ್ನಲಾಗಿದ್ದು,. ಸಿಂಪಿಗಳು, ಕ್ಲಾಮ್‌ಗಳು ಮತ್ತು ಸ್ಕಲ್ಲೊಪ್‌ಗಳಲ್ಲಿ ಟೆಸ್ಟೋಸ್ಟೆರಾನ್ ಮತ್ತು ಈಸ್ಟ್ರೊಜೆನ್ ಮಟ್ಟವನ್ನು ಹೆಚ್ಚಿಸುವುದಕ್ಕೆ ಸಹಾಯವಾಗಿದೆ ಅಂತ ಅಮೆರಿಕನ್ ಕೆಮಿಕಲ್ ಸೊಸೈಟಿಯ 2005 ರ ಸಮ್ಮೇಳನದಲ್ಲಿ ಸಂಶೋಧಕರು ಹೇಳಿಕೊಂಡಿದ್ದಾರೆ.

ಸಾಲ್ಮನ್ : ವಿಶ್ವದ ಅತಿ ನೆಚ್ಚಿನ ಮತ್ತು ದುಬಾರಿ ಮೀನು ಎಂದರೆ ಸಾಲ್ಮನ್ ಆಗಿದೆ. ಹೀಗಾಗಿ ಸಾಲ್ಮನ್ ಹೃದಯ-ಆರೋಗ್ಯಕರ ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿದ್ದು, ಗುಲಾಬಿ-ಮಾಂಸದ ಮೀನುಗಳು, ಜೊತೆಗೆ ಟ್ಯೂನ ಮತ್ತು ಹಾಲಿಬಟ್ ನಿಮ್ಮ ಲೈಂಗಿಕ ಜೀವನವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಇದಲ್ಲದೇ ಒಮೆಗಾ -3 ಗಳು ನಿಮ್ಮ ಅಪಧಮನಿಗಳಲ್ಲಿ ರಕ್ತವನ್ನು ಗಟ್ಟಿಮಾಡದಂತೆ ಸಹಾಯ ಮಾಡುತ್ತದೆ, ಇದರಿಂದಾಗಿ ನಿಮ್ಮ ದೇಹದಾದ್ಯಂತ ರಕ್ತದ ಹರಿವು ಸುಧಾರಿಸುತ್ತದೆ.ಅಮೇರಿಕನ್ ಜರ್ನಲ್ ಆಫ್ ಎಪಿಡೆಮಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನಗಳ ಪ್ರಕಾರ ಒಮೆಗಾ -3 ಕೊಬ್ಬಿನಾಮ್ಲಗಳು ರೋಗದ ಆಕ್ರಮಣಕಾರಿ ರೂಪಕ್ಕೆ ಅಪಾಯವನ್ನು ಹೆಚ್ಚಿಸಬಹುದು ಎನ್ನಲಾಗಿದ್ದು, ವೈದ್ಯರನ್ನು ಭೇಟಿಯಾದ ಬಳಿಕ ಅವರಿಂದ ಮಾಹಿತಿಪಡೆದಕೊಂಡು ಸೇವಿಸಬಹುದಾಗಿದೆ.

ಒಣ ಹಣ್ಣುಗಳು ಮತ್ತು ಬೀಜಗಳು : ಗೋಡಂಬಿ ಮತ್ತು ಬಾದಾಮಿ ನಿಮ್ಮ ಲೈಂಗಿಕ ಜೀವನವನ್ನು ಉತ್ತಮ ಪಡಿಸುವಲ್ಲಿ ಸಹಾಯಕಾರಿಯಾಗಲಿದೆ ಎನ್ನಲಾಗಿದೆ. ಹೀಗಾಗಿ ವಾಲ್‌ನಟ್ಸ್‌, ಕುಂಬಳಕಾಯಿ ಬೀಜಗಳು, ಸೂರ್ಯಕಾಂತಿ ಬೀಜಗಳು, ಕಡಲೆಕಾಯಿಗಳನ್ನು ತಿನ್ನಿ

ಸೇಬು : ದಿನಕ್ಕೆ ಒಂದು ಸೇಬು ವೈದ್ಯರನ್ನು ದೂರವಿರಿಸುತ್ತದೆ, ಇಷ್ಟೆ ಅಲ್ಲ ಇದು ನಿಮ್ಮ ಪ್ರೀತಿಯ ಜೀವನವನ್ನು ಸಹ ಸುಧಾರಿಸುತ್ತದೆ ಎನ್ನಲಾಗಿದೆ.

ಬೆಳ್ಳುಳ್ಳಿ : ತೀವ್ರವಾದ ರಕ್ತದೊತ್ತಡವು ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಮತ್ತು ಹೃದ್ರೋಗವನ್ನು ತಡೆಗಟ್ಟಲು ಬೆಳ್ಳುಳ್ಳಿಯನ್ನು ಬಳಸಬಹುದಾಗಿದ್ದು, ಇದಲ್ಲದೇ ಇದು ನಿಮ್ಮ ಲೈಂಗಿಕ ಜೀವನಕ್ಕೂ ಕೂಡ ಸಹಕಾರಿಯಾಗಲಿದೆ ಎನ್ನಲಾಗಿದೆ.

ರೆಡ್‌ ವೈನ್‌ : ಒಂದು ಗ್ಲಾಸ್ ರೆಡ್ ವೈನ್ ಹೆಂಗಸರನ್ನು ಮೂಡ್‌ಗೆ ಬರಲು ಸಹಾಯವಾಗುತ್ತದೆ ಎನ್ನಲಾಗಿದೆ. . ದಿ ಜರ್ನಲ್ ಆಫ್ ಸೆಕ್ಸ್ಯುಯಲ್ ಮೆಡಿಸಿನ್ ಟ್ರಸ್ಟೆಡ್ ಸೋರ್ಸ್ನಲ್ಲಿ ಪ್ರಕಟವಾದ ಸಂಶೋಧನೆಯು ದಿನಕ್ಕೆ ಒಂದರಿಂದ ಎರಡು ಗ್ಲಾಸ್ ರೆಡ್ ವೈನ್ ಮಹಿಳೆಯರಲ್ಲಿ ಲೈಂಗಿಕ ಬಯಕೆಯನ್ನು ಹೆಚ್ಚು ಮಾಡುತ್ತದೆ ಎನ್ನಲಾಗಿದೆ.

ಕೊನೆ ಮಾತು : ಕೆಲವು ಆಹಾರಗಳು ನಿಮ್ಮ ರಕ್ತವನ್ನು ಪಂಪ್ ಮಾಡಲು ಮತ್ತು ಹಾರ್ಮೋನ್ ಮಟ್ಟವನ್ನು ಹೆಚ್ಚಿಸಲು ಸಾಧ್ಯವಾದರೂ, ನಿಮ್ಮ ಲೈಂಗಿಕ ಜೀವನವನ್ನು ಸುಧಾರಿಸಲು ಆಹಾರ ಮಾತ್ರ ಯಾವಾಗಲೂ ಸಾಕಾಗುವುದಿಲ್ಲ ಇದರ ಜೊತೆಗೆ ನಿಮ್ಮ ಬಯಕೆಸಂಗಾತಿಯೊಂದಿಗೆ ಆತ್ಮೀಯ ಸಂಬಂಧವನ್ನು ಆನಂದಿಸುವುದು ಕೂಡ ನಿಮ್ಮ ಸೆಕ್ಸ್ ಜೀವವನ್ನು ಹೆಚ್ಚು ಮಾಡುತ್ತದೆ.
(ವಿ.ಸೂ : ಈ ಎಲ್ಲಾ ಆಹಾರವನ್ನು ಸೇವಿಸುವ ಮುನ್ನ ನಿಮ್ಮ ಕುಟುಂಬ ವೈದ್ಯರು ಅಥಾವ ಲೈಂಗಿಕ ತಜ್ಞನರನ್ನು ಭೇಟಿ ಮಾಡಿ ಸಲಹೆ ಸೂಚನೆ ಪಡೆದುಕೊಂಡು ಮುಂದುವರೆಯಿರಿ)

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions