ಗಣಪತಿ ನಿಮಜ್ಜನ ವೇಳೆ ಕೆರೆಯಲ್ಲಿ ಮುಳುಗಿ ನಾಲ್ವರು ಸಾವು


Friday, September 21st, 2018 12:11 pm

ಗ್ವಾಲಿಯಾರ್ : ಗಣಪತಿ ನಿಮಜ್ಜನಕ್ಕೆ ತೆರಳಿದ್ದ ನಾಲ್ವರು ಯುವಕರು ಕೆರೆಯಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಹಾರಾಜಪುರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೃತಪಟ್ಟವರನ್ನು ಅಜಯ್ ಪಾಲ್, ಸತೀಶ್ ಬಾಘೆಲ್, ಸೂರಜ್ ಪಾಲ್ ಹಾಗೂ ಶುಭಂ ಗೌರ್ ಎಂದು ಗುರುತಿಸಲಾಗಿದೆ. ಇದರಲ್ಲಿ ಇಬ್ಬರು ಸಹೋದರರು ಎಂದು ತಿಳಿದುಬಂದಿದೆ.

ಮಹಾರಾಜಪುರ ಗ್ರಾಮದ ಯುವಕರು ಸೇರಿ ಸಂಭ್ರಮದಿಂದ ಗಣಪತಿ ಮೆರವಣಿಗೆ ಮಾಡಿಕೊಂಡು ನಿಮಜ್ಜನಕ್ಕಾಗಿ ಕೆರೆಗೆ ಬಂದಿದ್ದಾರೆ. ಈ ಕೆರೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಕಾರಣ ಗಣಪತಿ ಮೂರ್ತಿ ಮುಳುಗಿಸಲು ಕೊಂಚ ದೂರ ತೆರಳಿದ್ದ ಯುವಕರಲ್ಲಿ ಇಬ್ಬರು ಅಲ್ಲೇ ಮುಳುಗಿದ್ದಾರೆ. ಇವರ ರಕ್ಷಣೆಗಾಗಿ ಬಂದ ಮತ್ತಿಬ್ಬರು ಯುವಕರು ಸಹ ಮುಳುಗಿದ್ದಾರೆ. ನೋಡುನೋಡುತ್ತಿದಂತೆ ನಾಲ್ವರು ಯುವಕರು ಜಲಸಮಾಧಿಯಾಗಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions