ಸುಭಾಷಿತ :

Thursday, January 23 , 2020 6:00 PM

2 ನಿಮಿಷದಲ್ಲಿ ಈ ದಿರಿಸು ತಯಾರಿಸಿ ಧರಿಸಿದ್ರಾ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ..?


Saturday, September 7th, 2019 9:08 pm

ಸಿನಿಮಾ ಡೆಸ್ಕ್ : ಬಾಲಿವುಡ್​ ನಟಿ ಕಿಯಾರಾ ಅಡ್ವಾಣಿ ಇತ್ತೀಚೆಗೆ ಧರಿಸಿದ್ದ ದಿರಿಸೊಂದು ಸಖತ್ ಚರ್ಚೆಗೆ ಕಾರಣವಾಗಿದೆ.

 ಹಕ್ಕಿಯ ಪುಕ್ಕಗಳನ್ನು ಜೋಡಿಸಿ ಎಳೆಎಳೆಯಾಗಿ ರೂಪಿಸಲಾಗಿರುವ ಹಳದಿ ಬಣ್ಣದ ದಿರಿಸು ಧರಿಸಿ ಫೋಸ್​ ನೀಡಿದ್ದರು.

ತಾವು ಧರಿಸಿರುವ ಛಾಯಾಚಿತ್ರವನ್ನು ತಮ್ಮ ಸಾಮಾಜಿಕ ಜಾಲತಾಣ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದು ಟ್ರೋಲ್​ಗೆ ತುತ್ತಾಗಿತ್ತು. ಕಿಯಾರಾ ನಿಮ್ಮ ಹಳದಿ ಬಣ್ಣದ ದಿರಿಸು ಮ್ಯಾಗಿ ನೂಡಲ್ಸ್​ ರೀತಿ ಕಾಣಿಸುತ್ತದೆ… ಇದು ಮ್ಯಾಗಿ ಮಸಾಲಾ ನೂಡಲ್ಸ್​ ಅನ್ನು ಧರಿಸಿದಂತಿದೆ… ಎಂದೆಲ್ಲಾ ಟ್ರೋಲ್ ಮಾಡಲಾಗಿತ್ತು. ಅದಕ್ಕೆ ಕಿಯಾರಾ ಅಡ್ವಾಣಿ ತಮಾಷೆಯಾಗಿ ಉತ್ತರಿಸಿದ್ದಾರೆ.

ಟ್ರೋಲಿಗರ ತಮಾಷೆಯ ಟ್ರೋಲ್ ಗೆ ಪ್ರತಿಕ್ರಿಯೆ ನೀಡಿದ ಅವರು ,  ಮ್ಯಾಗಿ ನೂಡಲ್ಸ್​ನ ಟ್ಯಾಗ್​ಲೈನ್​ ಅನ್ನು ಬಳಸಿ ‘ ಎರಡು ನಿಮಿಷಗಳಲ್ಲಿ ಈ ದಿರಿಸು ತಯಾರಿಸಿ ಧರಿಸಿದೆ…!’ ಎಂದು ಹಾಸ್ಯದ ಧಾಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions